ಉದ್ಯಮಿ ಅಭಿಜಿತ್‌ಗೆ ‘ಸಮಗ್ರ ಸಾಧಕ ಪ್ರಶಸ್ತಿ’ ಪ್ರದಾನ

KannadaprabhaNewsNetwork |  
Published : Nov 17, 2025, 03:15 AM IST
ಮೂಡುಬಿದಿರೆ ಕೋ-ಓಪರೇಟಿವ್ ಸವೀಸ್ ಸೊಸೈಟಿ-ಸಹಕಾರಿ ಸಪ್ತ ಸಂಧ್ಯಾ ಸಂಭ್ರಮಉದ್ಯಮಿ ಅಭಿಜಿತ್ ಎಂ ಅವರಿಗೆ `ಸಮಗ್ರ ಸಾಧಕ ಪ್ರಶಸ್ತಿ'' ಪ್ರದಾನ | Kannada Prabha

ಸಾರಾಂಶ

ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಯ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಸಹಕಾರಿ ಸಪ್ತಾಹ ಸಂಭ್ರಮ 2025 ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆ ಕೋ-ಆಪರೇಟಿವ್ ಸವೀಸ್ ಸೊಸೈಟಿ-ಸಹಕಾರಿ ಸಪ್ತ ಸಂಧ್ಯಾ ಸಂಭ್ರಮಕನ್ನಡಪ್ರಭ ವಾರ್ತೆ ಮೂಡುಬಿದಿರೆಉದ್ಯಮದಲ್ಲಿ ಯಶಸ್ಸು ಎಂದರೆ ಎಲ್ಲ ಜವಾಬ್ದಾರಿಗಳನ್ನು ತಾನೇ ನಿರ್ವಹಿಸುವುದಲ್ಲ. ಬದಲಾಗಿ ಅರ್ಹ ವ್ಯಕ್ತಿಗಳನ್ನು ಅರ್ಹ ಸ್ಥಾನಕ್ಕೆ ನಿಯುಕ್ತಿಗೊಳಿಸುವುದು. ನನ್ನಯಶಸ್ಸು ನನ್ನ ತಂಡದ್ದು ಎಂದು ಯುವ ಉದ್ಯಮಿ, ಡಿ.ಜೆ.ವಿ.ವಿ. ಸಂಘದ ಕಾರ್ಯದರ್ಶಿ ಅಬಿಜಿತ್ ಎಂ. ಹೇಳಿದ್ದಾರೆ.ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಯ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಸಹಕಾರಿ ಸಪ್ತಾಹ ಸಂಭ್ರಮ 2025 ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಸರಣಿಯ ಮೂರನೇ ದಿನವಾದ ಭಾನುವಾರ ಸೊಸೈಟಿ ವತಿಯಿಂದ ನೀಡಲಾದ ಸಮಗ್ರ ಸಾಧಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಕುಮಾರ್ ಬಲ್ನಾಡು ಅಭಿನಂದನಾ ಮಾತುಗಳನ್ನಾಡಿ ವ್ಯಾವಹಾರಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ತಾಂತ್ರಿಕ ರಂಗದಲ್ಲಿ ಅಭಿಜಿತ್ ಅವರು ನೀಡಿದ ಕೊಡುಗೆ ಮಾಡಿದ ಸಾಧನೆಗಳನ್ನು ವಿವರಿಸಿದರು. ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರು ಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಚೌಟರ ಅರಮನೆಯ ವೀರೇಂದ್ರ ಕುಮಾರ್, ಮಾಜಿ ಸಚಿವ , ಸೊಸೈಟಿ ನಿರ್ದೇಶಕ ಕೆ. ಅಭಯಚಂದ್ರ ಜೈನ್, ಸೊಸೈಟಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ , ಉಪಾಧ್ಯಕ್ಷ ಗಣೇಶ್ ನಾಯಕ್ , ನಿರ್ದೇಶಕ ಸಿ.ಎಚ್. ಅಬ್ದುಲ್ ಗಫೂರ್ ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳಿಗೆ ಆರ್ಥಿಕ ನೆರವು ನೀಡಿಕೆ ರಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ, ಮೂಡಬಿದಿರೆ ವ್ಯಾಪ್ತಿಯ 30 ಹಿರಿಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆರ್ಥಿಕ ನೆರವು, ಮೂಡುಬಿದಿರೆ ವಲಯದ ಪ್ರಾಂತ್ಯ ಮಾರ್ಪಾಡಿ ಗ್ರಾಮದಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿಎಸ್ ಎಸ್ ಎಲ್ ಸಿ ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು, ಸಹಕಾರಿ ತರಬೇತಿಯಲ್ಲಿ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮಂಜುನಾಥ್ ಅಂಚನ್ ಗೌರವ ಪುರಸ್ಕೃತರ ವಿವರ ನೀಡಿದರು

ಸೊಸೈಟಿಯ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ಸಂತೋಷ್ ನಾಯಕ್ ವಂದಿಸಿದರು. ಗಣೇಶ್ ಕಾಮತ್ ಎಂ ಮತ್ತು ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು.

PREV

Recommended Stories

ಭಗವಾನ್ ಬಿರ್ಸಾ ಮುಂಡಾ ನಮ್ಮೆಲ್ಲರಿಗೆ ಮಾದರಿ: ಸಂಸದ ಬಿ.ವೈ.ರಾಘವೇಂದ್ರ
ಕಟೀಲು ಮೇಳ ಕಲಾವಿದರಿಗೆ 15 ಲಕ್ಷ ರು. ವರೆಗೆ ಆರೋಗ್ಯ ವಿಮೆ: ಕಲ್ಲಾಡಿ