ಉದ್ಯಮಿ ಗದ್ದೇಮನೆ ವಿಶ್ವನಾಥ್ ಸಮಾಜ ಮುಖಿ ಸೇವೆ ಶ್ಲಾಘನೀಯ: ಶಂಕರ್

KannadaprabhaNewsNetwork |  
Published : Aug 12, 2025, 12:30 AM IST
ನರಸಿಂಹರಾಜಪುರ ತಾಲೂಕಿನ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು,ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್, ಮುಖ್ಯೋಪಾಧ್ಯಾಯ ಅಶೋಕ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ: ಉದ್ಯಮಿ ಗದ್ದೇಮನೆ ವಿಶ್ವನಾಥ್ ಅವರ ಸಮಾಜ ಮುಖಿ ಸೇವೆ ಶ್ಲಾಘನೀಯ ಎಂದು ಗುಬ್ಬಿಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್ ತಿಳಿಸಿದರು.

- ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉದ್ಯಮಿ ವಿಶ್ವನಾಥ್ ನೀಡಿದ ಶಾಲಾ ಬ್ಯಾಗ್ ವಿತರಣೆ

ನರಸಿಂಹರಾಜಪುರ: ಉದ್ಯಮಿ ಗದ್ದೇಮನೆ ವಿಶ್ವನಾಥ್ ಅವರ ಸಮಾಜ ಮುಖಿ ಸೇವೆ ಶ್ಲಾಘನೀಯ ಎಂದು ಗುಬ್ಬಿಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್ ತಿಳಿಸಿದರು.

ಸೋಮವಾರ ಉದ್ಯಮಿ ಗದ್ದೇಮನೆ ವಿಶ್ವನಾಥ್ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ದಾನವಾಗಿ ನೀಡಿದ ಶಾಲಾ ಬ್ಯಾಗ್, ಸಮವಸ್ತ್ರ, ಟ್ಯ್ರಾಕ್ ಸೂಟ್ ವಿತರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗುಬ್ಬಿಗಾ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದೆ. ಶಾಲೆ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಹಾಗೂ ಶಾಲಾ ಎಸ್.ಡಿಎಂಸಿ ಶ್ರಮಿಸುತ್ತಿದ್ದು, ಶಾಲೆ ಪ್ರಗತಿಗೆ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದರು.

ಗುಬ್ಬಿಗಾ ಶಾಲಾ ಮುಖ್ಯ ಶಿಕ್ಷಕ ಎ.ಇ.ಅಶೋಕ್ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಪ್ರತಿಯೊಬ್ಬರಿಗೂ ಅಗತ್ಯ. ಶಿಕ್ಷಣ ಕ್ಷೇತ್ರಕ್ಕೆ ಉದ್ಯಮಿ ಗದ್ದೇಮನೆ ವಿಶ್ವನಾಥ್ ಕೊಡುಗೆ ಅನನ್ಯ. ಈ ಹಿಂದೆಯೂ ಗುಬ್ಬಿಗಾ ಶಾಲೆಗೆ ವಿಶ್ವನಾಥ್ ಆರ್ಥಿಕ ಸಹಾಯ ನೀಡಿದ್ದರು. ಈಗ ಉಚಿತ ಬ್ಯಾಗ್ ಹಾಗೂ ಇತರ ಶಾಲಾ ಪರಿಕರ ನೀಡಿರುವುದರಿಂದ ಬಡವರ ಮಕ್ಕಳಿಗೆ ಅನುಕೂಲವಾಗಿದೆ ಎಂದರು.

ಶಾಲೆಯ ಎಸ್.ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ದಾನಿ ವಿಶ್ವನಾಥ್ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಖಾಂಡ್ಯ ಹೋಬಳಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಇತರ ಶಾಲಾ ಪರಿಕರ ನೀಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ದಾನಿ ವಿಶ್ವನಾಥ್ ಸಹೋದರ ಗದ್ದೇಮನೆ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಎಸ್.ಡಿಎಂಸಿಸದಸ್ಯ ಶಿವಕುಮಾರ್, ಸಹ ಶಿಕ್ಷಕ ಶೈನಿ, ರುಕ್ಸರ್ ಭಾನು, ಸುಭಾಷ್, ನಯಾಜ್ ಅಹಮ್ಮದ್, ಸ್ವಾತಿ ಉಪಸ್ಥಿತರಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ