- ಬನ್ನಿ ಭ್ರಮರಾಂಬ ಮಲ್ಲಿಕಾರ್ಜುನ ಶಕ್ತಿ ಪೀಠ ಮಂದಿರದ ಲೋಕಾರ್ಪಣೆ ಹಿನ್ನೆಲೆ ಬುತ್ತಿ ಜಾತ್ರೆ । ನಿತ್ಯ ದೇವಿ ಪಾರಾಯಣ, ಧಾರ್ಮಿಕ ಆಚರಣೆ ಸಂಭ್ರಮ
ಮಲ್ಲಯ್ಯ ಪೋಲಂಪಲ್ಲಿಕನ್ನಡಪ್ರಭ ವಾರ್ತೆ ಶಹಾಪುರ
ಮನುಷ್ಯರ ಮನಸ್ಸನ್ನು ನಿಯಂತ್ರಿಸುವ ಕೇಂದ್ರವೇ ದೇವಸ್ಥಾನಗಳು. ನಮ್ಮ ಸಗರನಾಡಿನಲ್ಲಿ ಭಕ್ತಿಯ ಪರಂಪರೆ ಪವಿತ್ರವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಬಾಪುಗೌಡ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಬನ್ನಿ ಭ್ರಮರಾಂಬ ಮಲ್ಲಿಕಾರ್ಜುನ ಶಕ್ತಿ ಪೀಠ ಮಂದಿರದ ಲೋಕಾರ್ಪಣೆ ಅಂಗವಾಗಿ ಕಳೆದ ವಾರದಿಂದ ನಿತ್ಯ ಪ್ರವಚನ, ದೇವಿ ಪಾರಾಯಣ ಜತೆಗೆ ವಿಶಿಷ್ಠ ಸಂಪ್ರದಾಯ, ಪರಂಪರೆ ಆಧ್ಯಾತ್ಮಿಕ ಚಟುವಟಿಕೆಗಳು ನಡೆಯುತ್ತಿವದು ಬಡಾವಣೆಯ ಮಹಿಳೆಯರಲ್ಲಿ ಸಂಭ್ರಮ ಮೂಡಿದೆ.ಬುತ್ತಿ ಜಾತ್ರೆ: ಮಕ್ಕಳು, ಮಹಿಳೆಯರು ಈ ಜಾತ್ರೆಗೆಂದೆ ಬಂದ ಬಂಧು-ಬಾಂಧವರು, ಹಿರಿಯರು ಬಣ್ಣ ಬಣ್ಣದ ಹೊಸ ಬಟ್ಟೆ ತೊಟ್ಟು ಜಾತ್ರೆಗೆ ಸಜ್ಜಾಗುತ್ತಾರೆ. ಸಾಲು ಸಾಲಾಗಿ ತಲೆ ಮೇಲೆ ರೊಟ್ಟಿ ಬುತ್ತಿ ಹೊತ್ತು ಸಾಗುತ್ತಿರುವ ಮಹಿಳೆಯರು. ತಲೆ ಮೇಲೆ ರೊಟ್ಟಿ ಬುತ್ತಿ ಹೊತ್ತು ಸರ್ವಧರ್ಮ ಸಹಿಷ್ಣುತೆ ಸಂದೇಶ ಬೋಧಿಸುತ್ತಿರುವ ಸ್ವಾಮೀಜಿ.
ಬನ್ನಿ ಭ್ರಮರಾಂಬ ದೇವಿ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಯಿಂದಲೇ ಭಕ್ತಿಪೂರ್ವಕವಾಗಿ ಮಹಿಳೆಯರು ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಜೆ ಎಲ್ಲರೂ ಒಟ್ಟಾಗಿ ಸೇರಿಕೊಂಡು ಅಲ್ಲಿಂದ ನೂತನ ಭ್ರಮರಾಂಬ ದೇವಿ ಮಂದಿರಕ್ಕೆ ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಹೊರಟು ರಾತ್ರಿ 8 ಗಂಟೆಗೆ ತಲುಪಿ, ಭ್ರಮರಾಂಬ ದೇವಿಗೆ ಸರ್ವರೂ ಮನೆ ಮನೆಯಿಂದ ತಂದ ರೊಟ್ಟಿ, ಶೇಂಗಾ ಚಟ್ನಿ, ವಿವಿಧ ಪಲ್ಯ, ಹೋಳಿಗೆ ಸೇರಿದಂತೆ ತರಹೇವಾರಿ ಬುತ್ತಿಯನ್ನು ತಲೆ ಮೇಲೆ ಹೊತ್ತು ಮಠಕ್ಕೆ ಅರ್ಪಿಸಿದರು. ಭಕ್ತರು ಸಮರ್ಪಿಸಿರೋ ರೊಟ್ಟಿ ಬುತ್ತಿಯಿಂದಲೇ ಜಾತ್ರೆಯ ನಿಮಿತ್ತ ಅನ್ನ ದಾಸೋಹವನ್ನು ಸಾವಿರಾರು ಭಕ್ತರಿಗೆ ಉಣಬಡಿಸಲಾಗುತ್ತದೆ. ಎಲ್ಲರೂ ತಂದಿರುವ ಬುತ್ತಿಯ ಎಡೆ ಮಾಡಿ ನಂತರ ಎಲ್ಲವೂ ಒಂದಡೆ ಸೇರಿಸಿ ಪ್ರಸಾದವನ್ನು ಸವಿಯುವ ಮೂಲಕ ಭಕ್ತಿಪೂರ್ವಕ ಆಚರಣೆ ಜರುಗಿತು.ಮಹಿಳೆಯರ ಹಾಡುಗಳು ಆಕರ್ಷಕ: ಪ್ರವಚನ ವೇದಿಕೆ ಮಹಿಳೆಯರು, ಒಳ್ಳು ಕಲ್ಲು ಕುಟ್ಟುವ ಜತೆಗೆ ಹಾಡುಗಳನ್ನು ಹಾಡುವುದು ಸೇರಿದಂತೆ ಇತರೆ ಗ್ರಾಮೀಣ ಸೊಗಡಿನಂತೆ ಕಾರ್ಯಕ್ರಮಗಳನ್ನು ಮಹಿಳೆಯರು ನಡೆಸಿಕೊಡುತ್ತಿರುವುದು ಆಕರ್ಷಕವಾಗಿತ್ತು. ಈ ಕಾರ್ಯಕ್ರಮದ ನೇತೃತ್ವವನ್ನು ಯಲಗೋಡು ಗುರುಲಿಂಗ ಮಹಾಸ್ವಾಮೀಜಿ ವಹಿಸಿದ್ದರು. ಯಾದಗಿರಿಯ ಸೊಪ್ಪಿಮಠದ ಚನ್ನಬಸವ ಶ್ರೀಗಳು ಸೇರಿದಂತೆ ಬಡಾವಣೆಯ ಪ್ರಮುಖರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
------.....ಕೋಟ್ -1.......ಎಲ್ಲರ ಮನೆಯಿಂದ ಸಾರ್ವಜನಿಕವಾಗಿ ಬುತ್ತಿಗಳನ್ನು ತಂದು ಇಲ್ಲಿನ ಅಯ್ಯಪ್ಪ ಸ್ವಾಮಿ ಗುಡಿಯಲ್ಲಿ ಒಂದಡೆ ಸೇರಿ ಅಲ್ಲಿಂದ ಭ್ರಮರಾಂಬ ದೇವಿ ಮಂದಿರದವರೆಗೆ ತಲುಪಿದೆವು. ನಂತರ ದೇವಿಗೆ ಮೊದಲು ಎಡೆ ಕೊಟ್ಟು, ಪೂಜೆ ಸಲ್ಲಿಸಿ ನಂತರ ಎಲ್ಲಾ ಬುತ್ತಿಯನ್ನು ಒಂದೂಗೂಡಿಸಿ ಸರ್ವರೂ ವೇದಿಕೆ ಆವರಣದಲ್ಲಿ ಕುಳಿತು ಪ್ರಸಾದ ಸೇವನೆ ಮಾಡುವುದು ಸಮಾನತೆಯ ಭಾವನೆ ದೇವಿ ಕೃಪೆಗೆ ಪಾತ್ರರಾಗುವ ಮೂಲಕ ಧನ್ಯತಭಾವ ಅರ್ಪಿಸಿದೇವು.---------ಗುರುಲಿಂಗ ಮಹಾಸ್ವಾಮಿ, ಯಲಗೋಡ.
-------.....ಕೋಟ್ -2......
ಜಗನ್ಮಾತೆಯನ್ನು ಭಕ್ತಿಯಿಂದ ಆರಾಧನೆ ಮಾಡೋದ್ರಿಂದ ನಮ್ಮೆಲ್ಲರ ಸಕಲ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತವೆ. ಜೊತೆಗೆ ನಮ್ಮ ರಕ್ಷಣೆಯನ್ನು ಆ ದೇವಿ ಸದಾ ಮಾಡುತ್ತಾಳೆ.-ಬಸಲಿಂಗಮ್ಮ, ಬಾಪುಗೌಡ ನಗರದ ಗೃಹಿಣಿ.
----21ವೈಡಿಆರ್5: ಶಹಾಪುರದ ಬಾಪುಗೌಡ ನಗರದಲ್ಲಿ ನೂತನ ಬನ್ನಿ ಭ್ರಮರಾಂಬದೇವಿ ಮಂದಿರ ಲೋಕಾರ್ಪಣೆ ಹಿನ್ನೆಲೆ ನಡೆದ ಬುತ್ತಿ ಜಾತ್ರೆ ಅಂಗವಾಗಿ ಸ್ವತಃ ಬುತ್ತಿಯನ್ನು ಹೊತ್ತು ಭಕ್ತಿ ಜಾತ್ರೆಗೆ ಮೆರಗು ತಂದ ಸ್ವಾಮೀಜಿ.
-----21ವೈಡಿಆರ್6: ಶಹಾಪುರದ ಬಾಪುಗೌಡ ನಗರದಲ್ಲಿ ನೂತನ ಬನ್ನಿ ಭ್ರಮರಾಂಬದೇವಿ ಮಂದಿರ ಲೋಕಾರ್ಪಣೆ ಹಿನ್ನೆಲೆ ನಡೆದ ಬುತ್ತಿ ಜಾತ್ರೆ ಅಂಗವಾಗಿ ತಲೆಯ ಮೇಲೆ ಬುತ್ತಿಯನ್ನೋತ್ತು ಸಂಭ್ರಮದಿಂದ ಪಾಲ್ಗೊಂಡಿರುವ ಮಹಿಳೆಯರು.