ಹೂವಿನಹಡಗಲಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಅನ್ನಭಾಗ್ಯ ಯೋಜನೆಯ ಅಕ್ಕಿ, ರಾಗಿ ಕಾಳ ಸಂತೇಲಿ ಹೋಗುವ ದೊಡ್ಡ ದಂಧೆಯ ಜಾಲವಿದೆ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಾಹನ ವಶಕ್ಕೆ ಪಡೆಯಬೇಕೆಂದು ಪಂಚ ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ, ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಎಚ್ಚರಿಕೆ ನೀಡಿದರು.
ಅನ್ನದ ಭಾಗ್ಯದ ಅಕ್ಕಿ ಹೊರ ರಾಜ್ಯ ಹಾಗೂ ವಿದೇಶಕ್ಕೂ ರಫ್ತಾಗುವ ಮಾಹಿತಿ ಮಾಧ್ಯಮದಿಂದ ತಿಳಿದಿದೆ. ಈ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಕಾಳ ಸಂತೇಲಿ ಖರೀದಿ ಅಕ್ರಮ ದಂಧೆಗೆ ವಾರದೊಳಗೆ ಕಡಿವಾಣ ಹಾಕಬೇಕೆಂದು ತಾಕೀತು ಮಾಡಿದರು.
ಈ ಅಕ್ಕಿ ಅಕ್ರಮ ದಂಧೆಯಲ್ಲಿ ಆಹಾರ, ಪೊಲೀಸ್ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಮಾಮೂಲಿ ಹೋಗುತ್ತಿದೆ, ಕೆಲ ಅಧಿಕಾರಿಗಳ ಜೇಬು ಕೂಡಾ ಭರ್ತಿಯಾಗುತ್ತಿದೆ ಎಂಬ ಆರೋಪವಿದೆ. ನ್ಯಾಯ ಬೆಲೆ ಅಂಗಡಿ ಪಕ್ಕದಲ್ಲೇ ಖರೀದಿ ನಡೆಯುತ್ತಿದೆ.ಇಂತಹ ವ್ಯವಸ್ಥೆ ವಿರುದ್ಧ ಬಿಗಿ ಕ್ರಮ ವಹಿಸಬೇಕೆಂದು ಸೂಚಿಸಿದರು.ತಾಲೂಕಿನ ಕಾಲ್ವಿ ಭಾಗದ 9 ಗ್ರಾಮಗಳಲ್ಲಿ ಪಡಿತರ ಅಕ್ಕಿ ವಿತರಣೆಗೆ ಬಯೋಮೆಟ್ರಿಕ್ ಪಡೆದು 15 ದಿನಗಳಾದರೂ ಅಕ್ಕಿ ರಾಗಿ ವಿತರಿಸದೇ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆಹಾರ ನಿರೀಕ್ಷ ನಾಗೇಂದ್ರ ನಾಯ್ಕ ವಿರುದ್ಧ ಆಹಾರ ಸಚಿವ ಹರ್ಷಿದ್ ರಿಜ್ವಾನ್ ಶಿಸ್ತು ಕ್ರಮಕ್ಕೆ ಸೂಚಿಸಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ತಹಸೀಲ್ದಾರ್, ತಾಪಂ ಇಒ ಮೇಲೆ ಕ್ರಮ ವಹಿಸಬೇಕೆಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 500 ಬಸ್‌ಗಳ ಖರೀದಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಭಾಗಕ್ಕೂ ಹೊಸ ಬಸ್‌ಗಳು ಬರಲಿವೆ. ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಸಮಿತಿ ಸಭೆ ಮಾಡಬೇಕು, ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ, ಶುದ್ಧ ಕುಡಿವ ನೀರು, ಮಹಿಳೆಯರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆ, ಶೌಚಾಲಯ ವ್ಯವಸ್ಥೆ ಇರಬೇಕೆಂದು ಹೇಳಿದರು.