ಗವೇನಹಳ್ಳಿಯಲ್ಲಿ ಹೊಸತಡಕಿಗೆ ಗುಡ್ಡೆ ಮಾಂಸ ಖರೀದಿ

KannadaprabhaNewsNetwork |  
Published : Mar 21, 2026, 01:30 AM IST
20ಎಚ್ಎಸ್ಎನ್7 : ಹಬ್ಬದ ಹೊಸತಡಕಿಗೆ ಗುಡ್ಡೆ ಮಾಂಸವನ್ನು ಹಂಚಿಕೊಳ್ಳುತ್ತಿರುವುದು. | Kannada Prabha

ಸಾರಾಂಶ

ಹಾಸನ, ಗವೇನಹಳ್ಳಿ, ಹೊಸತಡಕು, ಗುಡ್ಡೆ ಮಾಂಸ, Hassan, Gavenahalli, Hosatadaku, Meatಗುಡ್ಡೆ ಮಾಂಸದ ಸಂಭ್ರಮ ಗ್ರಾಮಸ್ಥರ ಒಗ್ಗಟ್ಟು, ಪರಂಪರೆ ಮತ್ತು ಆಹಾರ ಸಂಸ್ಕೃತಿಯ ಪ್ರತಿಬಿಂಬವಾಗಿ ಮೂಡಿಬಂದಿದೆ. ಗವೇನಹಳ್ಳಿ ಗ್ರಾಮದಲ್ಲಿ ಪ್ರತಿ ತಿಂಗಳು ಚೀಟಿ ಮೂಲಕ ಹಣ ಸಂಗ್ರಹಿಸಿ, ಗುಡ್ಡೆ ಮಾಂಸವನ್ನು ಹಂಚಿಕೊಳ್ಳುವ ವಿಶಿಷ್ಟ ಆಚರಣೆ ನಡೆದುಕೊಂಡುಬರುತ್ತಿದೆ. ಯುಗಾದಿ ನಂತರದ ದಿನ ಈ ಸಂಭ್ರಮಕ್ಕೆ ವಿಶೇಷ ಮಹತ್ವವಿದ್ದು, ಮಧ್ಯರಾತ್ರಿಯಲ್ಲೇ ಗ್ರಾಮಸ್ಥರು ಸೇರಿ ಹತ್ತಾರು ನಾಟಿ ಕುರಿ ಹೋತಗಳನ್ನು ಕಡಿದು, ತೂಕ ಮಾಡಿ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಪ್ರತಿ ಕುಟುಂಬಕ್ಕೂ ತಲಾ ಐದು ಕೆಜಿಗೂ ಹೆಚ್ಚು ಮಾಂಸ ದೊರೆಯುವುದು ಈ ಆಚರಣೆಯ ವೈಶಿಷ್ಟ್ಯ.

ಕನ್ನಡಪ್ರಭ ವಾರ್ತೆ ಹಾಸನ

ಯುಗಾದಿ ಹಬ್ಬದ ಸಂಭ್ರಮದ ಬಳಿಕ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ “ಹೊಸತಡಕು” ಆಚರಣೆ ಜೋರಾಗಿದ್ದು, ನಗರದ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ಈ ಸಂಪ್ರದಾಯ ವಿಶೇಷ ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಇಲ್ಲಿ ಗುಡ್ಡೆ ಮಾಂಸದ ಸಂಭ್ರಮ ಗ್ರಾಮಸ್ಥರ ಒಗ್ಗಟ್ಟು, ಪರಂಪರೆ ಮತ್ತು ಆಹಾರ ಸಂಸ್ಕೃತಿಯ ಪ್ರತಿಬಿಂಬವಾಗಿ ಮೂಡಿಬಂದಿದೆ. ಗವೇನಹಳ್ಳಿ ಗ್ರಾಮದಲ್ಲಿ ಪ್ರತಿ ತಿಂಗಳು ಚೀಟಿ ಮೂಲಕ ಹಣ ಸಂಗ್ರಹಿಸಿ, ಗುಡ್ಡೆ ಮಾಂಸವನ್ನು ಹಂಚಿಕೊಳ್ಳುವ ವಿಶಿಷ್ಟ ಆಚರಣೆ ನಡೆದುಕೊಂಡುಬರುತ್ತಿದೆ. ಯುಗಾದಿ ನಂತರದ ದಿನ ಈ ಸಂಭ್ರಮಕ್ಕೆ ವಿಶೇಷ ಮಹತ್ವವಿದ್ದು, ಮಧ್ಯರಾತ್ರಿಯಲ್ಲೇ ಗ್ರಾಮಸ್ಥರು ಸೇರಿ ಹತ್ತಾರು ನಾಟಿ ಕುರಿ ಹೋತಗಳನ್ನು ಕಡಿದು, ತೂಕ ಮಾಡಿ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಪ್ರತಿ ಕುಟುಂಬಕ್ಕೂ ತಲಾ ಐದು ಕೆಜಿಗೂ ಹೆಚ್ಚು ಮಾಂಸ ದೊರೆಯುವುದು ಈ ಆಚರಣೆಯ ವೈಶಿಷ್ಟ್ಯ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಕುಟುಂಬ ಸಮೇತರಾಗಿ ಸೇರಿ, ಹಬ್ಬದ ಸಡಗರದಲ್ಲಿ ಭಾಗವಹಿಸಿ, ತಮ್ಮ ತಮ್ಮ ಮನೆಗಳಲ್ಲಿ ವಿಶೇಷ ಅಡುಗೆಗಳನ್ನು ಸಿದ್ಧಪಡಿಸಿ ಹೊಸತಡಕು ಹಬ್ಬವನ್ನು ಸಂಭ್ರಮಿಸುತ್ತಾರೆ. ಹಿರಿಯರು, ಯುವಕರು ಎಲ್ಲರೂ ಸೇರಿ ಈ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವುದು ಗ್ರಾಮೀಣ ಜೀವನದ ಒಗ್ಗಟ್ಟಿನ ಸಂಕೇತವಾಗಿದೆ. ಹಾಸನ ಜಿಲ್ಲೆ ಮಾಂಸಾಹಾರ ಆಹಾರ ಪದ್ಧತಿಗೆ ಹೆಸರುವಾಸಿಯಾಗಿದ್ದು, ಈ ಗುಡ್ಡೆ ಮಾಂಸ ಸಂಪ್ರದಾಯ ಅದರಲ್ಲೂ ವಿಶಿಷ್ಟ ಸ್ಥಾನ ಹೊಂದಿದೆ. ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಬಂದು ಈ ಆಚರಣೆಯನ್ನು ಕಣ್ತುಂಬಿಕೊಳ್ಳುವುದರಿಂದ ಹಬ್ಬದ ವಾತಾವರಣ ಮತ್ತಷ್ಟು ಜೋರಾಗುತ್ತದೆ.ಒಟ್ಟಿನಲ್ಲಿ, ಗವೇನಹಳ್ಳಿ ಗ್ರಾಮದ ಈ ಹೊಸತಡಕು ಮತ್ತು ಗುಡ್ಡೆ ಮಾಂಸ ಸಂಭ್ರಮವು ಕೇವಲ ಆಹಾರ ಪದ್ಧತಿಯ ಆಚರಣೆ ಮಾತ್ರವಲ್ಲ, ಗ್ರಾಮೀಣ ಸಂಸ್ಕೃತಿ, ಪರಸ್ಪರ ಸಹಕಾರ ಹಾಗೂ ಸಾಮಾಜಿಕ ಬಾಂಧವ್ಯದ ಪ್ರತೀಕವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಸೆರೆ
ಅರೇಹಳ್ಳಿಯಲ್ಲಿ ಮತ್ತೆ ಕಾಡುಕೋಣ ಕಾಡೆಮ್ಮೆ ಪ್ರತ್ಯಕ್ಷ