ಬೈಂದೂರು: ಮನೆಯ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ

KannadaprabhaNewsNetwork |  
Published : Jul 31, 2024, 01:06 AM IST
ಮೊಸಳೆ30 | Kannada Prabha

ಸಾರಾಂಶ

ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಇಲ್ಲಿ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಈ ಮೊಸಳೆ ತೇಲಿಕೊಂಡು ಬಂದು ಬಾವಿಯನ್ನು ಸೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲೆಲ್ಲೂ ಈ ಹಿಂದೆ ಮೊಸಳೆಗಳಿರಲಿಲ್ಲ, ಆದ್ದರಿಂದ ಮೊಸಳೆಗಳೇ ಇಲ್ಲದ ಊರಿನಲ್ಲಿ ಮೊಸಳೆ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೈಂದೂರುಇಲ್ಲಿನ ನಾಗೂರು ಎಂಬಲ್ಲಿ ಮನೆಯ ಬಾವಿಯೊಂದರಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.ಇಲ್ಲಿನ ನಿವಾಸಿ ರತ್ನಾಕರ ಉಡುಪ ಎಂಬವರ ತೋಟದ ಬಾವಿಯಲ್ಲಿ ಈ ಮೊಸಳೆ ಮಂಗಳವಾರ ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಇಲ್ಲಿ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಈ ಮೊಸಳೆ ತೇಲಿಕೊಂಡು ಬಂದು ಬಾವಿಯನ್ನು ಸೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲೆಲ್ಲೂ ಈ ಹಿಂದೆ ಮೊಸಳೆಗಳಿರಲಿಲ್ಲ, ಆದ್ದರಿಂದ ಮೊಸಳೆಗಳೇ ಇಲ್ಲದ ಊರಿನಲ್ಲಿ ಮೊಸಳೆ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.ಮೊಸಳೆಯ ಬಗ್ಗೆ ಮಾಹಿತಿ ಪಡೆದ ಬೈಂದೂರು ಠಾಣಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಬಾವಿಯೊಳಗೆ ಬಲೆಯನ್ನು ಹಾಕಿ ಮೊಸಳೆಯನ್ನು ಹಿಡಿಯುವ ಪ್ರಯತ್ನ ಮಾಡಿದರೂ ಮೊಸಳೆ ನೀರಿನಲ್ಲಿ ಮುಳುಗಿ ಬಲೆಯಿಂದ ದೂರ ಉಳಿಯಿತು.ನಂತರ ಬಾವಿ ದಂಡೆಯ ಹೊರಗೆ ಬೋನು ಇಟ್ಟು ಅದರಲ್ಲಿ ಕೋಳಿ ಮಾಂಸವನ್ನು ಹಾಕಲಾಗಿದೆ. ಮಾಂಸದಾಸೆಗೆ ಮೊಸಳೆ ಬೋನಿನೊಳಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

49 ಕೋಟಿ ರು. ಲಾಟರಿ - ಹೆಣ್ಣುಮಗು ತಂದ ಅದೃಷ್ಟ !
ಬ್ರಹ್ಮಕಲಶೋತ್ಸವದಿಂದ ಧಾರ್ಮಿಕ ಪ್ರಜ್ಞೆ: ಹರಿನಾರಾಯಣ ದಾಸ ಆಸ್ರಣ್ಣ