ಉಡುಪಿ ಹವ್ಯಕ ಸಭಾ ಅಧ್ಯಕ್ಷ ಸಿ.ಎಚ್. ಸುಬ್ರಹ್ಮಣ್ಯ ಭಟ್

KannadaprabhaNewsNetwork |  
Published : Aug 04, 2026, 02:30 AM IST
ಅಧ್ಯಕ್ಷ ಸಿ. ಎಚ್. ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ನಟೇಶ್ ವೈ. ಆರ್  | Kannada Prabha

ಸಾರಾಂಶ

ಉಡುಪಿ ಹವ್ಯಕ ಸಭಾ ಇದರ 30ನೇ ವಾರ್ಷಿಕ ಮಹಾಸಭೆಯು ಭಾನುವಾರ ಅಧ್ಯಕ್ಷ ಪ್ರೊ. ಶಂಕರ್ ಅಧ್ಯಕ್ಷತೆಯಲ್ಲಿ ಪೆರಂಪಳ್ಳಿಯ ಹವ್ಯಕಧಾಮದಲ್ಲಿ ನೆರವೇರಿತು.

ಉಡುಪಿ: ಉಡುಪಿ ಹವ್ಯಕ ಸಭಾ ಇದರ 30ನೇ ವಾರ್ಷಿಕ ಮಹಾಸಭೆಯು ಭಾನುವಾರ ಅಧ್ಯಕ್ಷ ಪ್ರೊ. ಶಂಕರ್ ಅಧ್ಯಕ್ಷತೆಯಲ್ಲಿ ಪೆರಂಪಳ್ಳಿಯ ಹವ್ಯಕಧಾಮದಲ್ಲಿ ನೆರವೇರಿತು. ಸಭೆಯಲ್ಲಿ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಶಿಕ್ಷಣತಜ್ಞ ಸಿ.ಎಚ್. ಸುಬ್ರಹ್ಮಣ್ಯ ಭಟ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ಮಹಾದೇವ ಭಟ್ ಹಾಗೂ ಶ್ವೇತಾ ಹೆಗಡೆ, ಕಾರ್ಯದರ್ಶಿಯಾಗಿ ನಟೇಶ್ ವೈ.ಆರ್., ಜತೆಕಾರ್ಯದರ್ಶಿಗಳಾಗಿ ಡಾ. ಜಯಶಂಕರ ಕಂಗಣ್ಣಾರು ಮತ್ತು ಲಕ್ಷ್ಮಿ ಹೆಗ್ಡೆ, ಕೋಶಾಧಿಕಾರಿಯಾಗಿ ಅರವಿಂದ ಕುಮಾರ್ ಹಾಗೂ ಆಂತರಿಕ ಲೆಕ್ಕಪರಿಶೊಧಕರಾಗಿ ಪ್ರೊ. ಕೆ.ಸದಾಶಿವ ರಾವ್ ಆಯ್ಕೆಯಾದರು. ಎಚ್. ಎನ್. ವೆಂಕಟೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸನ್ನ ಅಡಿಗರು ವಂದಿಸಿದರು. ಡಾ. ಜಯಶಂಕರ ಕಂಗಣ್ಣಾರು ನಿರೂಪಿಸಿದರು.

--------------------------------------

ಮಟ್ಕಾ ಜುಗಾರಿ: ಇಬ್ಬರ ಬಂಧನ

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕಾರ್ಕಳ ಸಾರ್ವಜನಿಕ ಬಸ್ ನಿಲ್ದಾಣ ಸಮೀಪ ಇರುವ ಮಹಾಮಾಯೀ ಮುಖ ಪ್ರಾಣ ಎಂಟರ್‌ಪ್ರೈಸಸ್ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಇಬ್ಬರನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಮಿಯ್ಯಾರು ನಿವಾಸಿಗಳಾದ ವಿಜೇಂದ್ರ ಶೆಟ್ಟಿ ಹಾಗೂ ಪ್ರಮೋದ್ ಬಂಧಿತರು. ಆರೋಪಿಗಳಿಂದ ಮಟ್ಕಾ ಆಟಕ್ಕೆ ಬಳಸುತ್ತಿದ್ದ 1,415 ರು. ನಗದು ಹಾಗೂ ಆಟಕ್ಕೆ ಸಂಬಂಧಿಸಿದ ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಂಟಿಕೊಪ್ಪ: ಪಾಳು ಬಿದ್ದ ಕಸ ವಿಲೇವಾರಿ ಘಟಕ
ಉದ್ಯೋಗ ಮೇಳದಲ್ಲಿ ಯುವಜನತೆ ಪಾಲುದಾರಿಕೆ: ವಿವೇಕ್ ಆಳ್ವ ಕರೆ