ಬ್ರಹ್ಮಾವರ: ಇಲ್ಲಿನ ಜಿ. ಎಮ್. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿಯನ್ನು ಮೂಡಿಸಲು ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯೋಗಾಶ್ರಮದ ವ್ಯವಸ್ಥಾಪಕರಾದ ವಾಮನ ಬಂಗೇರ ಅವರು ಮಕ್ಕಳಿಗೆ ಊಟೋಪಚಾರಗಳನ್ನು ನೀಡಿ ಶುಭ ಹಾರೈಸಿದರು. ಮಕ್ಕಳು ಸ್ಥಳೀಯ ರೈತರೊಂದಿಗೆ ನೇಜಿಯನ್ನು ನಾಟಿ ಮಾಡುವುದರ ಮೂಲಕ ಕೃಷಿಯ ಅನುಭವ ಪಡೆದುಕೊಂಡರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕೃಷಿ ಭೂಮಿಯಲ್ಲಿ ಮಕ್ಕಳ ಜೊತೆಯಿದ್ದು ಸ್ಪೂರ್ತಿ ತುಂಬಿದರು. ಶಾಲಾ ಕೌನ್ಸಿಲರ್ ನೀಲಾವತಿ, ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರಾದ ಗಾಯತ್ರಿ, ಸ್ಮಿತಾ, ವಿಜಯ್ ಕುಮಾರ್ ಹಾಗೂ ಬಸವರಾಜ್ ಮಕ್ಕಳೊಂದಿಗೆ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.