ನಾಳೆ ನಂದಿಬೆಟ್ಟದಲ್ಲಿ ಸಂಪುಟ ಸಭೆ

KannadaprabhaNewsNetwork |  
Published : Jun 18, 2025, 12:21 AM IST
ಸಿಕೆಬಿ-1 ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಶಾಸಕ ಪ್ರದೀಪ್ಈಶ್ವರ್ ಮತ್ತು ಕೇಂದ್ರವಲಯ ಐಜಿಪಿ ಲಾಬೂರಾಮ್ ರೊಂದಿಗೆ ನಂದಿಗ್ರಾಮದ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡಟೆಸಿದ ಚಿತ್ರ | Kannada Prabha

ಸಾರಾಂಶ

ಸಚಿವ ಸಂಪುಟ ಸಭೆ ನಡೆಯುವ ದಿನ ಬೆಳಿಗ್ಗೆ ಭೋಗನಂದೀಶ್ವರ ದೇವಾಲಯದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಸಹೋಧ್ಯೋಗಿಗಳು ಪೂಜೆ ಸಲ್ಲಿಸಿ ಗುಂಪುಚಿತ್ರ ತೆಗೆಸಿಕೊಂಡು ನಂತರ ಬೆಟ್ಟದ ಮೇಲಿನ ಸಂಪುಟ ಸಭೆಗೆ ಹಾಜರಾಗುತ್ತಾರೆ ಎಂಬುದು ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಸರ್ಕಾರದ 13ನೇ ವಿಶೇಷ ಸಚಿವ ಸಂಪುಟ ಸಭೆ ನಂದಿಬೆಟ್ಟದಲ್ಲಿ ಜೂ.19ರಂದು ನಡೆಯವ ಸಚಿವ ಸಂಪುಟ ಸಭೆಗೆ ಪ್ರವಾಸೋಧ್ಯಮ ಇಲಾಖೆಯ ನಿರ್ವಹಣೆಯಲ್ಲಿರುವ ಮಯೂರ ಫೈನ್ ಟಾಪ್ ರೆಸ್ಟೋರೆಂಟ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಜೂನ್ 19 ರ ಗುರುವಾರ ಮದ್ಯಾಹ್ನ 12 ಕ್ಕೆ ವಿಶ್ವವಿಖ್ಯಾತ ನಂದಿಬೆಟ್ಟದ ತುದಿಯಲ್ಲಿರುವ ಮಯೂರ ಫೈನ್ ಟಾಪ್‌ರೆಸ್ಟೋರೆಂಟ್‌ನಲ್ಲಿ 2025 ನೇ ಸಾಲಿನ 13 ನೇ ವಿಶೇಷ ಸಂಪುಟ ಸಭೆಯನ್ನು ಕರ್ನಾಟಕ ಸರ್ಕಾರ ಆಯೋಜನೆ ಮಾಡಿದೆ.ಸಭೆಯ ಬಳಿಕ ಸುದ್ದಿಗೋಷ್ಟಿಯನ್ನು ಸಹ ಏರ್ಪಡಿಸಲಾಗಿದೆ.ವಿಶೇಷ ಸಚಿವ ಸಂಪುಟಸಭೆ ನಡೆಯುವ ಕಾರಣವಾಗಿ ನಂದಿಬೆಟ್ಟ ಮತ್ತು ಅದರ ಪರಿಸರವನ್ನು ನವವಧುವಿನಂತೆ ಸಿಂಗರಿಸಲಾಗಿದೆ. ಸಭೆಯ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಜೂನ್ 16 ರ ಸೋಮವಾರ ಸಂಜೆ 5 ಗಂಟೆಯಿಂದ 20 ರ ಶುಕ್ರವಾರ ಬೆಳಗ್ಗೆ 5 ರ ತನಕ ಮೂರುದಿನಗಳ ಕಾಲ ಸಂಪೂರ್ಣವಾಗಿ ನಿಷೇಧ ಹೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.

ಇನ್ನು ಸಚಿವ ಸಂಪುಟ ಸಭೆ ನಡೆಯುವ ದಿನ ಬೆಳಿಗ್ಗೆ ಭೋಗನಂದೀಶ್ವರ ದೇವಾಲಯದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಸಹೋಧ್ಯೋಗಿಗಳು ಪೂಜೆ ಸಲ್ಲಿಸಿ ಗುಂಪುಚಿತ್ರ ತೆಗೆಸಿಕೊಂಡು ನಂತರ ಬೆಟ್ಟದ ಮೇಲಿನ ಸಂಪುಟ ಸಭೆಗೆ ಹಾಜರಾಗುತ್ತಾರೆ ಎಂಬುದು ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿದ್ದಾರೆ. ಸಂಪುಟ ಸಭೆ ನಡೆಸಲು ಯಾವುದೇ ಲೋಪಗಳಾಗದಂತೆ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ನೇತೃತ್ವದಲ್ಲಿ 19 ಸಮಿತಿಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಬೆಟ್ಟಕ್ಕೆ ಬರುವವರ ಹೋಗುವವರ ಬಗ್ಗೆ ತೀವ್ರನಿಗಾವಹಿಸಲು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ತನ್ನ ಅಧೀನ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ