ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶ್ರೀರಾಂಪುರದಲ್ಲಿ ಮಾರುಕಟ್ಟೆಯಲ್ಲಿ ಕ್ಷೇಮ ಧಾಮ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ವತಿಯಿಂದ ತರಕಾರಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಗುರುವಾರ ಬಟ್ಟೆ ಚೀಲಗಳನ್ನು ವಿತರಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಮನುಷ್ಯರ ಆರೋಗ್ಯ ಹಾಗೂ ಪ್ರಾಣಿ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತದೆ. ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪ್ಲಾಸ್ಟಿಕ್ ವಿಷಕಾರಿ ರಾಸಾಯನಿಕ ಬಿಡುಗಡೆ ಮಾಡುವ ಕಾರಣ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ ಎಂದು ಎಚ್ಚರಿಸಿದರು.
ಪ್ಲಾಸ್ಟಿಕ್ ಬಾಟಲ್ ನಲ್ಲಿನ ನೀರು ಶುದ್ಧವೆಂದು ಭಾವಿಸಿ ಸೇವಿಸುವುದು ಫ್ಯಾಷನ್ ಆಗಿದೆ. ಭವಿಷ್ಯದಲ್ಲಿ ಖಾಲಿ ಬಾಟಲ್ ಗಳನ್ನು ವಿಲೇವಾರಿ ಮಾಡುವುದೇ ಬಹುದೊಡ್ಡ ಸಮಸ್ಯೆ ಆಗಲಿದೆ. ನೀರನ್ನು ರೆಫ್ರಿಜರೇಟರ್ ನಲ್ಲಿಟ್ಟು ತಣ್ಣಗೆ ಮಾಡಿಕೊಂಡು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಿಗೆ ನೀರನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿ ಕುಡಿಯುವುದು ಉತ್ತಮ ಎಂದು ಸಲಹೆ ನೀಡಿದರು.ಕ್ಷೇಮ ಧಾಮ ಟ್ರಸ್ಟ್ ಅಧ್ಯಕ್ಷ ಶೇಖರ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕ ಅಶ್ವಥ್, ಮುಖಂಡರಾದ ನಾಗೇಶ್ ಮೂರ್ತಿ, ದೂರ ರಾಜಣ್ಣ, ಸತೀಶ್, ರಾಮಲಿಂಗ, ಮಂಜುನಾಥ್, ವಿಹ ಎಸ್. ಆಚಾರ್ಯ ಮೊದಲಾದವರು ಇದ್ದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶ ಅನೇಕ ಲೋಪಗಳಿಂದ ಕೂಡಿದೆ. ಇದರಿಂದ ಆಸ್ತಿ ಹೊಂದಿರುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಆರೋಪಿಸಿದರು.ಇತ್ತೀಚೆಗೆ ಅನುಷ್ಠಾನಗೊಂಡಿರುವ ಪ್ರಕ್ರಿಯೆಯಲ್ಲಿ ಪಕ್ಷಕಾರರ ಭೌತಿಕ ಸಹಿ, ಸಾಕ್ಷಿಗಳ ಭೌತಿಕ ಸಹಿ, ಉಪ ನೋಂದಣಾಧಿಕಾರಿಗಳ ಭೌತಿಕ ಸಹಿ ಹಾಗೂ ಪತ್ರ ಬರಹಗಾರರ ಭೌತಿಕ ಸಹಿ ಇಲ್ಲದಿದ್ದು, ಇದರಿಂದಾಗಿ ದಾಖಲಾತಿಗಳು ಕೇವಲ ಮುದ್ರಣ ಹೊರತುಪಡಿಸಿ ಯಾವುದೇ ವಿಶೇಷತೆ ಹೊಂದಿಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ಕೆ.ಆರ್. ಉದಯ್ ಕುಮಾರ್, ಎಂ.ಎಸ್. ನರಸಿಂಹಮೂರ್ತಿ, ಎಂ. ಗಣೇಶ್, ಎ.ಎಸ್. ನಾಗಭೂಷಣ ಆರಾಧ್ಯ ಮೊದಲಾದವರು ಇದ್ದರು.