ಸಿರಿ ಕೇಂದ್ರ ಕಚೇರಿ ಆವರಣದಲ್ಲಿ ಕೆನರಾ ಎಟಿಎಂ ಶುಭಾರಂಭ

KannadaprabhaNewsNetwork |  
Published : Nov 07, 2025, 03:00 AM IST
ಕೆನರಾ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಭವೇಂದ್ರ ಕುಮಾರ್ ರವರು ನೂತನ ಎ.ಟಿ.ಎಂ ಕೇಂದ್ರವನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕೇಂದ್ರ ಕಚೇರಿ ಆವರಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ಥಾಪಿಸಲಾದ ನೂತನ ಎಟಿಎಂ ಗುರುವಾರ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕೇಂದ್ರ ಕಚೇರಿ ಆವರಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ಥಾಪಿಸಲಾದ ನೂತನ ಎಟಿಎಂ ಗುರುವಾರ ಉದ್ಘಾಟನೆಗೊಂಡಿತು.

ಕೆನರಾ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್ ಉದ್ಘಾಟಿಸಿ, ಕೆನರಾ ಬ್ಯಾಂಕ್ ವಿವಿಧ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಹಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಎಲ್ಲರೂ ಈ ಯೋಜನೆಗಳನ್ನು ಸದ್ಬಳಕೆ ಮಾಡುವಂತೆ ಮನವಿ ಮಾಡಿದರು.ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್‌ ಅಧ್ಯಕ್ಷತೆ ವಹಿಸಿ, ಸಿರಿಯ ಅಧ್ಯಕ್ಷ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಆಶಯದಂತೆ ಸಿರಿ ಸಂಸ್ಥೆಯಲ್ಲಿ ದುಡಿಯುವ ಸಾವಿರಾರು ಸಿಬ್ಬಂದಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ನಗದು ವ್ಯವಹಾರವನ್ನು ನಡೆಸಲು ಸಹಕಾರಿಯಾಗುವ ಹಿತದೃಷ್ಟಿಯಿಂದ, ಸಿರಿ ಕೇಂದ್ರ ಕಚೇರಿ ಆವರಣದಲ್ಲಿಯೇ ಒಂದು ಎಟಿಎಂ ಕೇಂದ್ರವನ್ನು ಸ್ಥಾಪಿಸುವಂತೆ ಕೆನರಾ ಬ್ಯಾಂಕ್ ಮುಖ್ಯಸ್ಥರಲ್ಲಿ ವಿನಂತಿಸಿದ್ದು, ಅತೀ ಕಡಿಮೆ ಸಮಯದಲ್ಲಿಯೇ ಸುಂದರವಾದ ಎಟಿಎಂ ಕೇಂದ್ರವನ್ನು ನಿರ್ಮಿಸಿ ಕೊಟ್ಟಿರುತ್ತಾರೆ ಎಂದು ಹೇಳಿದರು.ಈ ಸಂದರ್ಭ ಕೆನರಾ ಬ್ಯಾಂಕ್ ಮಂಗಳೂರು ಸರ್ಕಲ್ ಆಫೀಸ್ ಜನರಲ್ ಮ್ಯಾನೇಜರ್ ಮಂಜುನಾಥ್ ಸಿಂಗೈ, ಬೆಂಗಳೂರು ಬ್ರಾಂಚ್ ಚೀಫ್ ಜನರಲ್ ಮ್ಯಾನೇಜರ್ ಶಂಭುಲಾಲ್, ಪುತ್ತೂರು ಬ್ರಾಂಚ್ ರಿಜೀನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಂಜನ್ ಕುಮಾರ್, ಬೆಳ್ತಂಗಡಿ ಬ್ರಾಂಚ್ ಸೀನಿಯರ್ ಮ್ಯಾನೇಜರ್ ಪ್ರತಾಪ್, ಮಂಗಳೂರು ಬ್ರಾಂಚ್ ಸರ್ಕಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನರೇಶ್, ಪುತ್ತೂರು ಡಿವಿಜಿನಲ್ ಮ್ಯಾನೇಜರ್ ಅಜಿತ್ ಕುಮಾರ್, ರುಡ್‌ಸೆಟ್ ಎಕ್ಸಿಕ್ಯುಟಿವ್ ಡೈರೆಕ್ಟರ್ ವಿಜಯ್ ಕುಮಾರ್, ರುಡ್ ಸೆಟ್ ನಿರ್ದೇಶಕ ಅಜಯ್, ಪುತ್ತೂರು ರೀಜನಲ್ ಆಫೀಸ್ ಮಾರ್ಕೆಟಿಂಗ್ ಮ್ಯಾನೇಜರ್ ಹರೀಶ್ ನಾಯ್ಕ್, ಸಿರಿ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ, ರಾಜೇಶ್ ಪೈ ಮೊದಲಾದ ಗಣ್ಯರು, ಸಿರಿ ಸಂಸ್ಥೆಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ