ಮನುಷ್ಯ ಜೀವನದಲ್ಲಿ ಉನ್ನತ್ತಿ ಹೊಂದಬೇಕಾದರೆ ನಿರ್ದಿಷ್ಟವಾದ ಗುರಿ ಹೊಂದಿರಬೇಕು. ಅದನ್ನು ಸಾಕಾರಗೊಳಿಸಿಕೊಳ್ಳಲು ಸದ್ಗುರುವಿನ ಮಾರ್ಗದರ್ಶನ ಅತಿ ಅವಶ್ಯಕ. ಇವೆರಡು ಇಲ್ಲದಿದ್ದರೆ ಜೀವನವೇ ವ್ಯರ್ಥವಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುತ್ತಲ: ಮನುಷ್ಯ ಜೀವನದಲ್ಲಿ ಉನ್ನತ್ತಿ ಹೊಂದಬೇಕಾದರೆ ನಿರ್ದಿಷ್ಟವಾದ ಗುರಿ ಹೊಂದಿರಬೇಕು. ಅದನ್ನು ಸಾಕಾರಗೊಳಿಸಿಕೊಳ್ಳಲು ಸದ್ಗುರುವಿನ ಮಾರ್ಗದರ್ಶನ ಅತಿ ಅವಶ್ಯಕ. ಇವೆರಡು ಇಲ್ಲದಿದ್ದರೆ ಜೀವನವೇ ವ್ಯರ್ಥವಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಕೋಡಬಾಳ ಗ್ರಾಮದಲ್ಲಿ ಜರುಗುತ್ತಿರುವ ಪರಿವರ್ತನೆಯೆಡೆಗೆ ಧರ್ಮ ಜಾಗೃತಿ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲ ಸಾಧಿಸುವ ಛಲವನ್ನೂ ಹೊಂದಿದ್ದಾನೆ, ಆದರೆ ತನ್ನನ್ನು ತಾನು ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕೊಟ್ಟ ಮಾತು, ಇಟ್ಟ ನಂಬಿಕೆ ಸುಳ್ಳಾದರೆ ಆತನಿಗೆ ಯಾವುದೇ ಬೆಲೆ ಸಿಗುವುದಿಲ್ಲ. ಆದ್ದರಿಂದ ಜೀವನದಲ್ಲಿ ಉನ್ನತ ಗುರಿ ಹೊಂದಿರಬೇಕು. ಅದನ್ನು ಸಾಕಾರಗೊಳಿಸಿಕೊಳ್ಳಲು ಸದ್ಗುರುವಿನ ಮಾರ್ಗದರ್ಶನ ಪಡೆಯಬೇಕು. ಸಂಪತ್ತು ಹೊಂದಿದವರು ಶ್ರೀಮಂತರಲ್ಲ, ಸಂತೋಷದಿಂದ ಇರುವವರೇ ನಿಜವಾದ ಶ್ರೀಮಂತರು ಎಂದರು. ಪ್ರವಚನಕಾರ ಗುರುಮಹಾಂತಯ್ಯ ಶಾಸ್ತ್ರಿ ಆರಾಧ್ಯಮಠ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಎಂದಿಗೂ ಮರೆಯದೇ ಜನ್ಮಕೊಟ್ಟ ತಾಯಿ, ಜೀವನ ಪಾಠ ಕಲಿಸಿದ ತಂದೆ, ಅನ್ನ ನೀಡುವ ರೈತ, ದೇಶ ಕಾಯುವ ಯೋಧ ಮತ್ತು ಅರಿವು ನೀಡುವ ಗುರುವನ್ನು ಎಂದಿಗೂ ಮರೆಯಬಾರದು ಎಂದರು. ಇದೇ ಸಂದರ್ಭದಲ್ಲಿ ಕೋಡಬಾಳ ಗ್ರಾಮದ ಗೌಡ್ರ ಕುಟುಂಬಸ್ಥರಿಂದ ಶ್ರೀಗಳಿಗೆ ತುಲಾಭಾರ, ಅನ್ನಸಂತರ್ಪಣೆ ಸೇವೆ ನೆರವೇರಿಸಿದರು. ನೆಗಳೂರ, ಕೋಡಬಾಳ, ಗುತ್ತಲ, ಬೆಳವಿಗಿ, ಹಾಲಗಿ, ಮರೋಳ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.
ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಪಾದಯಾತ್ರೆ: ಕೋಡಬಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳಿಂದ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಸದ್ಭಾವನಾ ಪಾದಯಾತ್ರೆ ಜರುಗಿಸುತ್ತಿದ್ದು, ಭಕ್ತಾದಿಗಳಿಂದ ತಮ್ಮ ಜೋಳಿಗೆಗೆ ಕಾಣಿಕೆ ಪಡೆಯದೇ ಅವರಿಂದ ದುಶ್ಚಟಗಳನ್ನೇ ಭಿಕ್ಷೆ ಪಡೆಯುತ್ತಿರುವುದು ವಿಶೇಷವಾಗಿದೆ. ಇನ್ನೂ ಪ್ರತಿಯೊಬ್ಬರಿಗೂ ಭಸ್ಮಧಾರಣೆ ಹಾಗೂ ರುದ್ರಾಕ್ಷಿ ಧಾರಣೆಯನ್ನು ಶ್ರೀಗಳು ಮಾಡಿಸುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.