ಅಮ್ಮೆಂಬಳ ಸುಬ್ಬರಾವ್‌ ಪೈ ಆಶಯದಂತೆ ಕೆನರಾ ಬ್ಯಾಂಕ್‌ ಸಮಾಜ ಸೇವೆ: ಶಿವಪ್ರಸಾದ್‌

KannadaprabhaNewsNetwork | Published : Aug 21, 2024 12:41 AM

ಸಾರಾಂಶ

1906 ರಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕೆನರಾ ಬ್ಯಾಂಕ್‌ ಸ್ಥಾಪಿಸಿದರು. ಈ ವೇಳೆ ಅವರು ಹೊಂದಿದ್ದ ದದ್ಯಾರ್ಥಿ ವೇತನ ವಿತರಣೆಯಂಥ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯನ್ನು ಕೆನರಾ ಬ್ಯಾಂಕ್ ಇಂದಿಗೂ ಮುಂದುವರಿಸುತ್ತಿದೆ. ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್.ಶಿವಪ್ರಸಾದ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

1906 ರಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕೆನರಾ ಬ್ಯಾಂಕ್‌ ಸ್ಥಾಪಿಸಿದರು. ಈ ವೇಳೆ ಅವರು ಹೊಂದಿದ್ದ ದದ್ಯಾರ್ಥಿ ವೇತನ ವಿತರಣೆಯಂಥ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯನ್ನು ಕೆನರಾ ಬ್ಯಾಂಕ್ ಇಂದಿಗೂ ಮುಂದುವರಿಸುತ್ತಿದೆ. ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್.ಶಿವಪ್ರಸಾದ್ ಹೇಳಿದರು.

ನಗರದ ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆಯಲ್ಲಿ "ಕೆನರಾ ವಿದ್ಯಾ ಜ್ಯೋತಿ " ಯೋಜನೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ ವಿದ್ಯಾರ್ಥಿನಿಯರಿಗೆ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಯೋಜನೆಯಡಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪಂಗಡದ 5, 6, 7 ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ₹2,500 ಹಾಗೂ 8, 9, 10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ₹5000 ವಿದ್ಯಾರ್ಥಿ ವೇತನ ವಿತರಿಸುತ್ತಿದ್ದೇವೆ ಎಂದರು.

ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ವಿಭಾಗೀಯ ಪ್ರಬಂಧಕಿ ರವಿಕಲಾ ಮಾತನಾಡಿ, ದೇಶದ ಎಲ್ಲ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಯೋಜನೆ ಫಲಾನುಭವಿ ವಿದ್ಯಾರ್ಥಿನಿಯರು ಮುಂದೆ ಕೆನರಾ ಬ್ಯಾಂಕಿನ ಜೊತೆಯೇ ವ್ಯವಹಾರಗಳನ್ನು ನಡೆಸಲು ಮನವಿ ಮಾಡಿದರು.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ್, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ಎಂ.ಎಚ್. ಬಸವರಾಜ್ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್ ಮಠದ್, ಬ್ಯಾಂಕ್‌ ಮುಖ್ಯ ಪ್ರಬಂಧಕರಾದ ಶಿಲ್ಪಾ ಎಂ. ಗಾಯಕವಾಡ್, ಚಂಚಲಾ ಕುಮಾರಿ, ಶಬೀರ್ ಬಶೀರ್, ಎಸ್.ವಿ.ಕಿರುಬ ಶಂಕರ, ಅಧಿಕಾರಿಗಳಾದ ಅನಿಲ್ ನಾಯಕ್, ಗೋಪಾಲ ಕೃಷ್ಣ, ವಿ.ಆರ್.ಹರೀಶ್, ಕೆ.ಭಾರ್ಗವಿ, ಸಿ.ಸುವೇಶ್ ಚಂದ್ರ, ಎನ್.ಪಾರ್ವತಿ, ಎಚ್.ಜೆ.ಆಶಾ, ಡಿ.ಎ. ಸಾಕಮ್ಮ ಮತ್ತಿತರರು ಉಪಸ್ಥಿತರಿದ್ದರು.

- - - -18ಕೆಡಿವಿಜಿ33ಃ:

ದಾವಣಗೆರೆಯಲ್ಲಿ ಕೆನರಾ ಬ್ಯಾಂಕಿನ ವಿದ್ಯಾಜ್ಯೋತಿ ಯೋಜನೆಯಡಿ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

Share this article