ಕಾರ್ಕಳ: ಬದುಕಿಗೆ ಅಸಹನೀಯವಾದ ಮತ್ತು ಜೀವಕ್ಕೆ ಮಾರಕವೆನಿಸುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ . ಆಹಾರ ಕ್ರಮ ಮತ್ತು ಜೀವನಶೈಲಿ ಬದಲಾವಣೆ ಹಾಗೂ ವ್ಯಾಯಾಮಗಳ ಮೂಲಕ ದೇಹ ಪ್ರವೇಶಿಸದಂತೆ ಈ ಕಾಯಿಲೆಯನ್ನು ನಿಗ್ರಹಿಸಬಹುದು. ಆದಾಗ್ಯೂ ಒಂದೊಮ್ಮೆ ಪ್ರಾಥಮಿಕ ಹಂತದಲ್ಲಿಯೇ ಮುಂಜಾಗ್ರತೆಯ ಕ್ರಮಗಳಿಂದ ಗಂಭೀರ ಹಾನಿ ತಡೆಗಟ್ಟಬಹುದು . ಈ ನಿಟ್ಟಿನಲ್ಲಿ ಕ್ಯಾನ್ಸರ್ ಕುರಿತ ಮಾಹಿತಿ, ಜಾಗೃತಿ ಜಾಥಾಗಳು , ಸಂವಾದ ಕಾರ್ಯಕ್ರಮಗಳು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ್ ಕಾಮತ್ ಹೇಳಿದ್ದಾರೆ.ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಕ್ಯಾನ್ಸರ್ ಮಾಹಿತಿ ಕೇಂದ್ರ ಕಾರ್ಕಳ ನೇತೃತ್ವದಲ್ಲಿ , ಟೀಮ್ ಸಿಂಧೂರ್ ಕಾರ್ಕಳ, ಹೊಸ ಸಂಜೆ ಬಳಗ, ಕಾರ್ಕಳ ಟೈಗರ್ಸ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯ, ಜೆಸಿಐ ಕಾರ್ಕಳ, ಎಸ್‌ವಿಟಿ ಮಹಿಳಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ " ಕ್ಯಾನ್ಸರ್ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ, ಕಾರ್ಕಳ ಜೆ ಸಿ ಐ ಅಧ್ಯಕ್ಷೆ ಶ್ವೇತಾ ಎಸ್ ಜೈನ್ , ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯ ಅಧ್ಯಕ್ಷ ಪ್ರಮೋದ್ ಚಂದ್ರ ಪೈ ಮುನಿಯಾಲು , ಕಾರ್ಯದರ್ಶಿ ಶೇಖರ್, ಮನಶ್ಯಾಸ್ತ್ರಜ್ಞೆ ಜ್ಯೇಷ್ಠಲಕ್ಷ್ಮೀ ಮಂಗಳೂರು, ಹೊಸಸಂಜೆ ಬಳಗದ ಅಧ್ಯಕ್ಷ ಆರ್ ದೇವರಾಯ ಪ್ರಭು , ಲಯನ್ಸ್ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ದತ್ತಾತ್ರೇಯ ಹಿರಿಯಂಗಡಿ , ಟೀಮ್ ಸಿಂಧೂರದ ಶೋಭಾ ಭಾಸ್ಕರ್ ಮುಖ್ಯ ಅತಿಥಿಗಳಾಗಿದ್ದರು.ನಯನಾ ಸ್ವಾಗತಿಸಿದರು. ದಿವ್ಯಶ್ರೀ ಪ್ರಾಸ್ತಾವಿಕ ಮಾತನಾಡಿದರು. ಲಾವಣ್ಯ ನಿರೂಪಿಸಿದರು. ಅಮೃತಾ ವಂದಿಸಿದರು.