ಹಾವೇರಿ: ಇಲ್ಲಿಯ ದಿ. ಕಾರ್ಡಮಮ್ ಮರ್ಚಂಟ್ಸ್ ಕೋ-ಆಪ್ ಬ್ಯಾಂಕ್ ಲಿ. ೫೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಹುಕ್ಕೇರಿಮಠ ಶ್ರೀಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೆ. ೮ರಂದು ಬೆಳಗ್ಗೆ ೧೧ಕ್ಕೆ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಬ್ಯಾಂಕಿನ್ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಗಂಗಾಧರ ಮಳಗಿ ಹೇಳಿದರು.
ಕಾರ್ಡ್‌ಮಮ್ ಬ್ಯಾಂಕ್ ೩೨೦೦ ಸದಸ್ಯರನ್ನು ಹೊಂದಿದ್ದು, ಸುವರ್ಣ ಮಹೋತ್ಸವ ಅಂಗವಾಗಿ ತನ್ನೆಲ್ಲ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸುತ್ತಿದೆ. ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಕೂಡ ಪರಿಚಯಿಸಲಾಗುತ್ತಿದ್ದು, ಗ್ರಾಹಕರಿಗೆ ಬ್ಯಾಂಕಿನ ವಹಿವಾಟು ಸರಳೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಮಹಾಂತೇಶ ಸುರಳಿಹಳ್ಳಿ, ನಿರ್ದೇಶಕರಾದ ವಿರೂಪಾಕ್ಷಪ್ಪ ಬಣಕಾರ, ಅಶೋಕ ಮಹಾರಾಜಪೇಟ, ಮಹಾಂತಪ್ಪ ಮಾಸೂರ, ಮಲ್ಲಿಕಾರ್ಜುನ ಹಂದ್ರಾಳ, ಡಾ. ಸಿದ್ದೇಶ್ವರ ಬಾಲೆಹೊಸೂರ, ವಿರೂಪಾಕ್ಷಪ್ಪ ಹತ್ತಿಮತ್ತೂರ, ವಿರೂಪಾಕ್ಷ ಹಾವನೂರ, ಕುಶಾಲ ನರಗುಂದ, ಹನುಮಂತಪ್ಪ ಹೊಸಮನಿ, ವ್ಯವಸ್ಥಾಪಕ ಮಹಾಂತಸ್ವಾಮಿ ಪ್ಯಾಟಿಮಠ ಇದ್ದರು.