ಕನ್ನಡಪ್ರಭ ವಾರ್ತೆ ಕಲಬುರಗಿ
ಇಂದಿಲ್ಲಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುನೈಟೆಡ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಸರ್ಜನ್ ಆಗಿರುವ ಡಾ. ವಿಕ್ರಂ ಸಿದ್ದಾರೆಡ್ಡಿ, ದಶಕದ ಅವಧಿಯಲ್ಲಿಯೇ ಜನರ ಬೆಂಬಲದಿಂದ ಆಸ್ಪತ್ರೆ ಉತ್ಕೃಷ್ಟ ಆರೋಗ್ಯ ಸೇವೆಗಳಿಗೆ ಹೆಸರಾಗಿದೆ. ಕಳೆದೊಂದು ವರ್ಷದಿಂದ ಆಸ್ಪತ್ರೆಯಲ್ಲಿ ಸುಸಜ್ಜಿತ ಹಾಗೂ ಸೀಮನ್ಸ್ ಯಂತ್ರೋಪಕರಣಗಳಿರುವಂತಹ ಕ್ಯಾಥ್ ಲ್ಯಾಬ್ ಸ್ಥಾಪಿಸಲಾಗಿದೆ. ಇದರಿಂದ ಸಮರ್ಥವಾಗಿ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಶಿಬಿರದಲ್ಲಿ ಈಸಿಜಿ, ಸ್ಕ್ರೀನಿಂಗ್, ಎಕೋ ಸ್ಕ್ಯಾನ್, ಫಾಸ್ಟಿಂಗ್ ಶುಗರ್, ಲಿಪಿಡ್ ಪ್ರೊಫೈಲ್, ಎಚ್‌ಬಿಸಿ, ಕಾರ್ಡಿಯಾಲಾಜಿಸ್ಟ್ ಸಲಹೆ, ಡಯಟ್ ಸಲಹೆಗಳೆಲ್ಲವೂ ಲಭ್ಯವಿರಲಿವೆ ಎಂದು ಮಾಹಿತಿ ನೀಡಿದರು.31 ಸಾವಿರ ಒಳರೋಗಿಗಳಿಗೆ ಯಶಸ್ವಿ ಚಿಕಿತ್ಸೆ: ಕಳೆದ 12 ವರ್ಷಗಳಲ್ಲಿ ಆಸ್ಪತ್ರೆಯಲ್ಲಿ 31 ಸಾವಿರಕ್ಕೂ ಹೆಚ್ಚು ಒಳ ರೋಗಿಗಳು ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದಲ್ಲದೆ 2 ಸಾವಿರಕ್ಕೂ ಅಧಿಕ ಸರ್ಜರಿಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಕ್ಯಾಥ್‌ಲ್ಯಾಬ್ ಶುರುವಾದ ವರ್ಷದಲ್ಲೇ ಆಸ್ಪತ್ರೆಯಲ್ಲೇ 6 ತೆರೆದ ಹೃದಯ ಕವಾಟ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.
ಆಸ್ಪತ್ರೆಯ ಇಂಟೆನ್ಸಿವಿಸ್ಟ್ ಡಾ. ಸುದರ್ಶನ ಲಾಖೆ ಮಾತನಾಡಿ, ಆಸ್ಪತ್ರೆ 40ಕ್ಕೂ ಹೆಚ್ಚು ಐಸಿಯೂ ಬೆಡ್‌ಗಳಿರುವ ಏಕೈಕ ಆಸ್ಪತ್ರೆಯಾಗಿ ಹೊರಹೊಮ್ಮಿದೆ. 24 ಗಂಟೆಗಳ ಕಾಲ ಹಿರಿಯ, ನುರಿತ ಸಿಬ್ಬಂದಿ, ತಜ್ಞ ವೈದ್ಯರ ಸೇವೆ ಐಸಿಯೂನಲ್ಲಿ ಲಭ್ಯವಿರಲಿದೆ.
ಈಚೆಗಿನ ದಿನಗಳಲ್ಲಿ ಯುವಕರಲ್ಲಿ, ಮಕ್ಕಳಲ್ಲಿ ಎದೆ ನೋವು, ಹೃದ್ರೋಗ ಸಂಬಂಧಿ ತೊಂದರೆಗಲು ಕಾಡುತ್ತಿವೆ. ಹಿರಿಯ ವೈದ್ಯರಾದ ಡಾ. ಬಸವಪ್ರಭು, ಡಾ. ಅರುಣ ಹರಿದಾಸ್ ಸಲಹೆಯಂತೆ ಶೀಘ್ರ ಯುನೈಟೆಡ್ ಆಸ್ಪತ್ರೆಯಲ್ಲಿ ಎದೆನೋವು (ಚೆಸ್ಟ್‌ಪೇನ್) ಸಹಾಯವಾಣಿ ಆರಂಭಿಸಲಾಗುತ್ತದೆ. ಎದೆನೋವು ಕಾಡಿದ್ದಲ್ಲಿ ಸಹಾಯವಾಣಿಗೆ ತಮಗಾಗುತ್ತಿರುವ ನೋವು, ಅದರ ಲಕ್ಷಣ ಹೇಳಿ ಸಲಹೆ ಸೂಚನೆ ಪಡೆಯಬಹುದಾಗಿದೆ. ಎಂದು ಡಾ. ವಿಕ್ರಂ ಸಿದ್ದಾರೆಡ್ಡಿ ಹೇಳಿದರು.