ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಹಳೇಚಾವಡಿ ಹತ್ತಿರ ₹೧೦.೩೮ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಾಮಗಾರಿಯ ಎಲ್ಲ ಕೆಲಸಗಳು ಸರಿಯಾಗಿ ಆಗಬೇಕು. ಕಾಮಗಾರಿಯ ಬಗ್ಗೆ ಜನರಿಂದ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕರು ಕೂಡ ಜವಾಬ್ದಾರಿಯುತವಾಗಿ ಪ್ರದರ್ಶಿಸಬೇಕು. ತಮ್ಮ ಊರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮೇಲೆ ನಿಗಾ ಇಡಬೇಕು. ಎಲ್ಲಿಯಾದರೂ ಲೋಪಗಳು ಕಾಣಿಸಿದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಸರಿಪಡಿಸಲು ಮುಂದಾಗಬೇಕು. ಯೋಜನೆ ಸರಿಯಾಗಿ ಸದ್ಭಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪೌರಾಯುಕ್ತ ರಮೇಶ ಜಾಧವ, ಪ್ರಭಾಕರ ಮೊಳೇದ, ಶ್ರೀಶೈಲ ಬೀಳಗಿ, ಶಿವಾನಂದ ಬುದ್ನಿ, ಶೇಖರ ಸಂಪಗಾಂವಿ, ಈರಣ್ಣ ಬಾಣಕಾರ, ರವಿ ಸಂಪಗಾಂವಿ, ವಿವೇಕ ಫಕೀರಪೂರ, ಮಂಜುನಾಥ ಕರೋಳಿ, ಗೋವಿಂದ ಡಾಗಾ, ಈರಪ್ಪ ಕೊಣ್ಣೂರ, ಸಚೀನ ಪತ್ತಾರ, ಶಂಕರ ಅಂಗಡಿ, ವಿನಯ ಮಂಡಿ, ಅರವಿಂದ ಪತ್ತಾರ, ಭೀಮು ಬಾಡಗಿ ಸೇರಿದಂತೆ ಅನೇಕರು ಇದ್ದರು.