ದೇವಸ್ಥಾನದ ಮೂಲ ಆಕೃತಿಗೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಕೈಗೊಳ್ಳಿ

KannadaprabhaNewsNetwork |  
Published : Sep 28, 2024, 01:25 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಇತಿಹಾಸವೇ ಹೇಳುವಂತೆ ಯುದ್ಧದ ವಿಜಯದ ಗೆಲುವಿಗಾಗಿ ನಿರ್ಮಿಸಲಾದ ಪರಮೇಶ್ವರ ದೇವಸ್ಥಾನ ನಮ್ಮೆಲ್ಲರಿಗೂ ಹೆಮ್ಮೆ

ಗದಗ, ನರಗುಂದ: ಕೊಣ್ಣೂರಿನ ಪರಮೇಶ್ವರ ದೇವಸ್ಥಾನ ಐತಿಹಾಸಿಕ ದೇವಸ್ಥಾನವಾಗಿದ್ದು, 1600 ವರ್ಷಗಳ ಹಿಂದೆ ನಡೆದ ಯುದ್ಧದ ಗೆಲುವಿನ ಸವಿನೆನಪಿಗಾಗಿ ನಿರ್ಮಿಸಲಾದ ದೇವಸ್ಥಾನ ಇದಾಗಿದೆ. ದೇವಸ್ಥಾನ ಮೂಲ ಆಕೃತಿಗೆ ಧಕ್ಕೆ ಬಾರದಂತೆ ನಮ್ಮತನ ಉಳಿಸುವ ಸ್ಮಾರಕವಾಗಿ ರೂಪಗೊಳ್ಳಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಶುಕ್ರವಾರ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಗದಗ ಜಿಲ್ಲಾಡಳಿತ, ಪ್ರವಾಸೋದ್ಯಮ ಮತ್ತು ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಸಹಯೋಗದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಪರಮೇಶ್ವರ ದೇವಾಲಯದ ಸಂರಕ್ಷಣಾ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಇತಿಹಾಸವೇ ಹೇಳುವಂತೆ ಯುದ್ಧದ ವಿಜಯದ ಗೆಲುವಿಗಾಗಿ ನಿರ್ಮಿಸಲಾದ ಪರಮೇಶ್ವರ ದೇವಸ್ಥಾನ ನಮ್ಮೆಲ್ಲರಿಗೂ ಹೆಮ್ಮೆ. ವಿಜಯನಗರ ಅರಸರಿಗೆ ತೂಕದಾನ ಮಾಡಿದ ಇತಿಹಾಸ ಇಲ್ಲಿದೆ. ಜೀರ್ಣೋದ್ಧಾರದ ವೇಳೆ ಮೂಲ ದೇವಸ್ಥಾನ ಹಾಗೂ ಶಿಲಾಶಾಸನಗಳಿಗೆ ಧಕ್ಕೆಯಾಗದಂತೆ ನಿರ್ಮಿಸಲಾಗುವುದು ಎಂದರು.

ಕೊಣ್ಣೂರಿನ ಗ್ರಾಮಸ್ಥರಿಗೆ ಈ ದೇವಸ್ಥಾನ ನಮ್ಮದು ಎಂಬ ಭಾವನೆ ಬಂದರೆ ಖಂಡಿತವಾಗಿಯೂ ಸುಂದರವಾಗಿ ನಿರ್ಮಾಣವಾಗಲಿದೆ, ಸಾರ್ವಜನಿಕರ ಸಹಕಾರದಿಂದ ಮಾತ್ರವೇ ಜಿರ್ಣೋದ್ದಾರ ಪೂರ್ಣ ಆಗಲಿದೆ. ದೇವಾಲಯದ ಸುತ್ತಮುತ್ತಲಿನ ಗಿಡಗಂಟೆ ತೆರವುಗೊಳಿಸುವುದು, ದೇವಸ್ಥಾನದ ಮೇಲಿನ ಜಲ ನಿರೋಧಕ ಹೊದಿಕೆ ದುರಸ್ತಿಗೊಳಿಸುವುದು. ದೇವಾಲಯದ ಶಿಥಿಲ ಕಲ್ಲುಗಳನ್ನು ತೆಗೆದು ಹೊಸದಾಗಿ ಹಾಕಲಾಗುವುದು. ಹಳೆ ಹಾಗೂ ಹೊಸ ಕಲ್ಲು ಜೋಡಿಸಿ ಮರು ನಿರ್ಮಾಣ ಕೈಗೊಳ್ಳುವುದು. ವಿಮಾನ ಗೋಪುರ ನಿರ್ಮಾಣ, ನೆಲಹಾಸು ಸೇರಿದಂತೆ ಸುತ್ತಲು ಚೈನ್ ಲಿಂಕ್ ಮಾಡಲಾಗುವುದು. ದೇವಸ್ಥಾನ ಇತಿಹಾಸ ಶಾಸನಗಳ ಜತೆಗೆ ಕನ್ನಡ ಫಲಕ ಹಾಕಲಾಗುವುದು ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಈ ತಿಂಗಳು 2 ದೊಡ್ಡ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅವುಗಳಲ್ಲಿ ಲಕ್ಕುಂಡಿ ದೇವಸ್ಥಾನಗಳ ಅಭಿವೃದ್ಧಿಗಾಗಿ ₹5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜತೆಗೆ ಇಂದು ಕೊಣ್ಣೂರಿನ ಪರಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹1.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಇದಕ್ಕೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರಿಗೆ ಅಭಿನಂದನೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಶಿವಕುಮಾರ ಶ್ರೀಗಳು ಹಾಗೂ ಡಾ. ಶಿವಾನಂದ ಶ್ರೀಗಳು, ಬೈರನಹಟ್ಟಿ ಶ್ರೀಗಳು, ಕಲ್ಮಠದ ಸಿದ್ದಲಿಂಗ ಶ್ರೀಗಳು ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಬಸವರಾಜ ಕಳಸಣ್ಣನವರ, ರಾಜೂಗೌಡ ಕೆಂಚನಗೌಡ್ರ, ಶೇಖರಗೌಡ, ನಿಂಗಪ್ಪ ವಜ್ರಂಗಿ, ಜಕ್ಕಪ್ಪನವರ, ಬಾಬುಗೌಡ್ರ, ಸೋಮಾಪೂರ ಸೇರಿದಂತೆ ಇತರರು ಇದ್ದರು.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಬೆಣ್ಣೆಹಳ್ಳ ಪ್ರವಾಹ ನಿರ್ಬಂಧಿಸುವುದು ಹಾಗೂ ಬೆಣ್ಣೆಹಳ್ಳ ಆಳ ಮಾಡಿಸುವ ಕಾಮಗಾರಿಗೆ ₹200 ಕೋಟಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಬೆಣ್ಣೆ ಹಳ್ಳ ಪ್ರದೇಶದ ವ್ಯಾಪ್ತಿಯ ರೈತರಿಗೆ ಸಹಕಾರಿಯಾಗಲಿದೆ. ಬೆಣ್ಣೆ ಹಳ್ಳದಲ್ಲಿ 16 ಟಿಎಂಸಿ ನೀರು ಹರಿಯಲಿದ್ದು ಅದನ್ನು ಸಮರ್ಪಕವಾಗಿ ಬಳಕೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ