ಕನ್ನಡಪ್ರಭ ವಾರ್ತೆ ತುಮಕೂರು
ಅವರು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಪ್ರಜಾಪ್ರಗತಿ ಪತ್ರಿಕೆ, ಕುರುಬ ಸಾಂಸ್ಕೃತಿಕ ಪರಿಷತ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕುರುಬರ ಸಾಹಿತ್ಯ , ಸಾಂಸ್ಕೃತಿಕ ಸಮಾವೇಶಕ್ಕೆ ಚಾಲನೆ ನೀಡಿ 31 ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ದಲಿತರು, ಶೂದ್ರರಿಗೆ ಅವಕಾಶ ಸಿಕ್ಕಿದ್ದಕ್ಕೆ ಅವರು ಬುದ್ದಿವಂತರಾಗಿದ್ದಾರೆ. ನನಗೆ ಅವಕಾಶ ಸಿಕ್ಕಿದ್ದರಿಂದ ಮುಖ್ಯಮಂತ್ರಿಯಾದೆ ಎಂದು ತಿಳಿಸಿದರು.ವಾಲ್ಮೀಕಿ ದರೋಡೆಕಾರನಾಗಿದ್ದ ಎನ್ನುವುದು ಸುಳ್ಳು. ಹಾಗೆಯೇ ಬ್ರಹ್ಮನು, ಕಾಳಿದಾಸನ ನಾಲಿಗೆಯ ಮೇಲೆ ಅಕ್ಷರ ಬರೆದಿದ್ದಕ್ಕೆ ದೊಡ್ಡ ಸಾಹಿತಿಯಾದನು ಎನ್ನುವ ಮಾತುಗಳಿಗೆ ಕಿವಿಗೊಡಬೇಡಿ ಎಂದರು.
ಪಟ್ಟಭದ್ರರು ಬಸವಣ್ಣನವರ ಕ್ರಾಂತಿ ಮುಂದುವರಿಸಲು ಬಿಡಲಿಲ್ಲ. ಆದ್ದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗಬೇಕು, ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ನಿಗಧಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ. ನಿಮ್ಮ ನಿಮ್ಮ ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು ಎಂದರು.
ಭಾರತಕ್ಕೆ ಸ್ವಾತಂತ್ರ್ಯ 1947ರಲ್ಲಿ ಬಂದು, ಜನವರಿ 26 1950 ರಲ್ಲಿ ಸಂವಿಧಾನ ಜಾರಿಯಾಯಿತು. ಸಂವಿಧಾನ ಬಂದು 75 ವರ್ಷವಾದರೂ ಅಸ್ಪೃಶ್ಯತೆ ಇನ್ನೂ ಹೋಗಿಲ್ಲ, ಅನೇಕ ಕಡೆ ದೇವಾಲಯಗಳ ಒಳಗೆ ಬಿಡುವುದಿಲ್ಲ ಎಂದರು.
ಶಿಕ್ಷಣ ಬಂದ ಮೇಲೆ ಎಲ್ಲರಿಗೂ ಅವಕಾಶ ಸಿಗುತ್ತಿದೆ. ನಮ್ಮ ತಂದೆ ತಾಯಿ ಓದಿರಲಿಲ್ಲ. ನಾನು ಓದಿಲ್ಲ ಅಂದರೆ ಇಂದು ಸಿಎಂ ಆಗಲು ಆಗುತ್ತಿತ್ತಾ ಎಂದ ಅವರು, ನಿಮಗೆ ಅವಕಾಶ ಸಿಕ್ಕಿದೆ ನಿಮ್ಮ ಅನುಭವವನ್ನು ಬರೆಯರಿ ಎಂದರು.
ಲೋಹಿಯಾ ಹೇಳೋರು, ಜಾತಿ ಸಮ್ಮೇಳನ ಮಾಡಬೇಕಾ? ಬೇಡ್ವಾ? ಅಂತಾ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯವರೆಗೆ ಜಾತಿ ಸಮ್ಮೇಳನ ಮಾಡಬೇಕು ಎಂದರು.
ಕುರುಬ ಮೇಲ್ಜಾತಿಯಾಗಲು ಆಗುತ್ತಾ ಎಂದ ಅವರು, ಆರ್ಥಿಕ ಚಾಲನೆ ಸಿಕ್ಕರೇ ಮಾತ್ರ ಇವೆಲ್ಲಾ ಸಾಧ್ಯ ಎಂದರು.
ಪ್ರಗತಿಪರ ವಿಚಾರಕ್ಕೆ ಅಡ್ಡಿ ಆತಂಕಗಳು ಬಂದೇ ಬರುತ್ತವೆ. ಇದಕ್ಕೆ ನಾವು ಸುಮ್ಮನೇ ಜಯಗಳಿಸಲು ಆಗುವುದಿಲ್ಲ. ಅವರು ಮಾಡಿಕೊಂಡರೆ ಮಾಡಲಿ ಅಂದರೆ ಜಯಗಳಿಸಲು ಆಗುವುದಿಲ್ಲ ಎಂದರು.ನಾನು ಬಿಎಸ್ ಸಿ ಆದ ಮೇಲೆ ವ್ಯವಸಾಯ ಮಾಡಲು ಹೋದೆ. ಬಾಟನಿಯಲ್ಲಿ ಎಮ್ ಎಸ್ ಸಿ ಓದಲು ಸೀಟ್ ಸಿಗಲಿಲ್ಲ. ವ್ಯವಸಾಯ ಮಾಡಲು ಹೋದೆ. ನಮ್ಮ ಅಪ್ಪ ದನ ಕರುಗಳಿಗೆ ನೀರು ಕುಡಿಸಲು ಹೇಳಿದ್ದ. ಬಾವಿಯಲ್ಲಿ ನೀರು ಸೇದಿ ತರಬೇಕಿತ್ತು. ಬಾವಿಯಲ್ಲಿ ಕಸ ಇರೋದು, ಬಿಂದಿಗೆ ಮೇಲೆ ಕೆಳಗೆ ಹಾಕಿ ಕಸ ದೂರ ಸರಿಸಿ ನೀರು ತೆಗೆದುಕೊಳ್ಳುತ್ತಿದ್ದೆ. ನಮ್ಮ ಜಾತಿ ವ್ಯವಸ್ಥೆ ಕೂಡ ಹೀಗೆ ಇದೆ ಎಂದರು.
---------ನನ್ನ ಎಡಗಾಲು ನೋವಿದೆ:ನನಗೆ ಎಡಗಾಲು ಸ್ವಲ್ಪ ನೋವಾಗಿದೆ. ಒತ್ತಾಯ ಮಾಡಿದ್ದಕ್ಕೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನನಗೆ ಹೆಚ್ಚು ಪ್ರವಾಸ ಮಾಡಲು ಆಗುವುದಿಲ್ಲ. ಬಹಳ ಸಮಯ ನಿಂತು ಮಾತನಾಡಲು ಆಗುವುದಿಲ್ಲ ಎಂದರು.ನಾನು ಬಾತ್ ರೂಮ್ ನಿಂದ ಹೊರಗೆ ಬರುವಾಗ ಬಿದ್ದುಬಿಟ್ಟೆ. 2005 ರಲ್ಲಿ ನಾನು ಕಬ್ಬಡಿ ಆಡುವಾಗ ಲಿಗೊಮೆಂಟ್ ಕಟ್ ಆಗಿತ್ತು. ಈಗ ಅದೇ ಲಿಗೊಮೆಂಟ್ ಪೆಟ್ಟು ಬಿದ್ದಿದೆ. ಹೀಗಾಗಿ ಹೆಚ್ಚು ತಿರುಗಾಡಲು ಆಗುತ್ತಿಲ್ಲ. ತಿರುಗಾಡುವ ಕಡೆ ತಿರುಗಾಡುತ್ತಿದ್ದೇನೆ ಎಂದರು.