ತರೀಕೆರೆ: ಜಾತಿ ಸಮೀಕ್ಷೆ ಅವಧಿ ಮುಗಿದು ತಮಗೆ ಕೊಟ್ಟಿದ್ದ ಸಮೀಕ್ಷೆ ಕಾರ್ಯ ಮುಗಿಸಿದ ಶಿಕ್ಷಕರಿಗೆ ಸರ್ಕಾರ ದಿನಕ್ಕೊಂದು ನಿರ್ಧಾರ ಪ್ರಕಟಿಸುವ ಮೂಲಕ ಶಿಕ್ಷಕರನ್ನು ಬೀದಿಗೆ ನಿಲ್ಲಿಸಿದೆ ಎಂದು ಬಾಲ ನ್ಯಾಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ಜಿ. ಸುಬ್ರಹ್ಮಣ್ಯ ಆರೋಪಿಸಿದ್ದಾರೆ.
ಮೊದಲೇ ಸರಿಯಾದ ನೆಟ್ ವರ್ಕ್ ಸಿಗದೇ ಸಮೀಕ್ಷೆ ಗೆ ತೋಡಕಾಗಿ ಸಮೀಕ್ಷೆದಾರರು ಗೂಗಲ್ ಮ್ಯಾಪ್ ನಂಬಿ ಹೋದಾಗ ಕೆರೆ, ಭಾವಿ ಹತ್ತಿರ ಕರೆದೊಯ್ದಿದೆ. ಪ್ರಸ್ತುತ ವಿದ್ಯುತ್ ಮೀಟರ್ ನಂಬರ್ ಆಧಾರಿಸಿ ಸಮೀಕ್ಷೆ ನಡೆಯುತ್ತಿರುವುದರಿಂದ ಕೆಲವೆಡೆ ರೈತರು ಜಮೀನಿನಲ್ಲಿ ಇರುವ ಫಾರಂ ಮನೆಗೆ ತೆಗೆದುಕೊಂಡ ಸಂಪರ್ಕದಿಂದ ಜಮೀನೆಡೆಗೆ ಗೂಗಲ್ ತೋರಿಸಿ ಸಮೀಕ್ಷಕರು ಹೈರಾಣಾಗಿದ್ದು ಇದೆ. ಇನ್ನು ಕೆಲವೆಡೆ ಒಂದೇ ಹೆಸರಿನಲ್ಲಿ ಒಂದೇ ಊರಿನಲ್ಲಿ 2-3 ಸಂಪರ್ಕ ಹೊಂದಿದ್ದು ಅದರಿಂದಲೂ ಸಮೀಕ್ಷೆ ಸಮಯದಲ್ಲಿ ತೊಂದರೆ ಆಗಿದೆ.
ಕೆಲವೆಡೆ ವಿದ್ಯುತ್ ಆರ್. ಆರ್. ನಂಬರ್ ಹುಡುಕಿ ಕೊಂಡು ಹೋದವರಿಗೆ ಆ ಮೀಟರ್ ಇಲ್ಲದೆ ಇರುವುದು. ಕೆಲವರು ಮೀಟರ್ ತೆಗೆದಿಟ್ಟಿರುವುದು ಕಂಡು ಪಜೀತಿಗೆ ಬಿದ್ದಿರುವುದು ಒಂದೆಡೆ ಯಾದರೆ. ಸಮೀಕ್ಷೆ ನಡೆಸುವವರಿಗೂ, ನಿಗದಿತ ಬೀದಿ, ಏರಿಯಗಳ ಮನೆ ನೀಡದೆ, ಒಂದೊಂದು ಮನೆ ಬೇರೆ ಬೇರೆ ಬೀದಿ, ಏರಿಯಾಗಳಲ್ಲಿ ಹತ್ತಿರದ ಅಕ್ಕ ಪಕ್ಕ ಊರು ಗಳಲ್ಲಿ ಇದ್ದಿದ್ದರಿಂದ ಹುಡುಕಿ ಕೊಂಡು ಅಲೆಯುವ ಸ್ಥಿತಿ ಎದುರಾಗಿತ್ತು.ಸಮೀಕ್ಷೆಗೆ ಹೋದಾಗ ಕೆಲವರು ಸ್ಪಂದಿಸದೇ, ಕೆಲವು ಮನೆಗಳಲ್ಲಿ ನಾಯಿ ಕಾಟ ಅನುಭವಿಸಿದರೆ, ಒಂದೊಂದೇ ಮನೆ ಇರುವ ಕಡೆ ಮಹಿಳಾ ಸಮೀಕ್ಷೆ ದಾರರು ಹೋಗುವುದು ಒಂದು ರೀತಿಯ ದುಸ್ಸಾಹಸ ಮತ್ತು ಸುರಕ್ಷತಾ ದೃಷ್ಟಿಯಲ್ಲಿ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪರಿಹಾರ ಹುಡುಕದೆ, ಇದ್ಯಾವುದನ್ನೂ ಗಮನಿಸದ ಸರ್ಕಾರ ಮೇಲಾಧಿಕಾರಿಗಳಿಂದ ಒತ್ತಡ ಹಾಕಿಸಿ, ಅಮಾನತ್ತು ಮತ್ತು ಇನ್ನಿತರ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ ಮುಗಿದರೆ ಸಾಕು ಎನ್ನುವಂತೆ ಕುಟುಂಬದವರಿಂದ ಒಂದೆರಡು ಪ್ರಶ್ನೆಗೆ ಉತ್ತರ ಪಡೆದು ಇನ್ನುಳಿದವುಗಳಿಗೆ ಸಮೀಕ್ಷಾಕರೇ ಉತ್ತರ ನಮೂದಿಸುವ ಪರಿಪಾಟ ನಡೆದು ಹೋಗಿದೆ. ಇದರಿಂದ ಸಮರ್ಪಕ ಸಮೀಕ್ಷೆ ಸಾಧ್ಯವಿಲ್ಲದಂತೆ ಆಗಿದೆ. ಹಾಗಾಗಿ ಸಮೀಕ್ಷೆ ಯಿಂದ ಯಾವ ಪ್ರಯೋಜನ ಸಹ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.-
11ಕೆಟಿಆರ್.ಕೆ.15ಃ ಜಿ.ಸುಬ್ರಹ್ಮಣ್ಯ