ಬಿಸಿಲಿಗೆ ಬಸವಳಿಯುತ್ತಿರುವ ಜಾನುವಾರುಗಳು

KannadaprabhaNewsNetwork |  
Published : Apr 19, 2026, 02:45 AM IST
ಪೋಟೊ17ಕೆಎಸಟಿ2: ಕುಷ್ಟಗಿ ಸಮೀಪದ ಜಮೀನಿನ ಕೃಷಿಹೊಂಡದಲ್ಲಿ ನಿಂತಿರುವ ನೀರನ್ನು ಕುಡಿಯುತ್ತಿರುವ ಕುರಿಗಳು.  17ಕೆಎಸಟಿ2ಎ: ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಹತ್ತಿರ ಕುರಿ ಮೇಯಿಸುತ್ತ ಹೊರಟ ಕುರಿಗಾಹಿ. | Kannada Prabha

ಸಾರಾಂಶ

ಇನ್ನೂ ಕುರಿಗಳನ್ನೆ ನಂಬಿ ಜೀವನ ಸಾಗಿಸುತ್ತಿರುವ ಕುರಿಗಾಹಿಗಳು ಅಕ್ಷರಶಃ ಆತಂಕದ ಕ್ಷಣ ಅನುಭವಿಸುತ್ತಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಬೆಳಗ್ಗೆಯಿಂದ ಸಂಜೆಯವರೆಗೆ ಮೇಯ್ದು, ನೀರು ಕುಡಿದು ಹಾಯಾಗಿ ಹಟ್ಟಿ ಸೇರುತ್ತಿದ್ದ ಜಾನುವಾರುಗಳಿಗೆ ಈ ವರ್ಷದ ಬೇಸಿಗೆ ಮಾರಕವಾಗಿ ಪರಿಣಮಿಸುತ್ತಿದೆ.

ಹೌದು. ಈ ವರ್ಷ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ತನ್ನ ಪ್ರಖರತೆ ಹೆಚ್ಚಿಸುತ್ತಾ ಸಾಗಿದ್ದು, ಅಡವಿಯಲ್ಲಿ ಹಸಿರು ಎನ್ನುವುದು ಮಾಯವಾಗಿದ್ದರೆ ಬೇಸಿಗೆಯ ಹೊಡೆತಕ್ಕೆ ಈಗಾಗಲೇ ಕೃಷಿಹೊಂಡ, ಹಳ್ಳ, ಕೊಳ್ಳಗಳು ಬತ್ತಿ ಹೋಗುವ ಮೂಲಕ ಕುಡಿಯಲು ನೀರು ಸಿಗದಂತಹ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಮೇಯಲು ಕಾಡಿಗೆ ಹೋಗುವ ಜಾನುವಾರುಗಳು ಬಾಯಾರಿಕೆಯಿಂದ ಬಳಲುತ್ತಿರುವುದು ಕಂಡು ಬರುತ್ತಿದೆ.

ಇನ್ನೂ ಕುರಿಗಳನ್ನೆ ನಂಬಿ ಜೀವನ ಸಾಗಿಸುತ್ತಿರುವ ಕುರಿಗಾಹಿಗಳು ಅಕ್ಷರಶಃ ಆತಂಕದ ಕ್ಷಣ ಅನುಭವಿಸುತ್ತಿದ್ದಾರೆ. ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆಯ ಮೇಲೆ ಬೇಸಿಗೆ ಘೋರ ಪರಿಣಾಮ ಬೀರಿದ್ದು ಜಾನುವಾರುಗಳು ಮೂಕ ರೋಧನೆ ಅನುಭವಿಸುವಂತಾಗಿದೆ.

ಕುರಿಗಳನ್ನು ಮೇಯಿಸಲು ನಿತ್ಯವೂ 8 ರಿಂದ 10 ಕಿಮೀ ಅಲೆದಾಡಿದರೂ ಕುರಿಗಳಿಗೆ ಹೊಟ್ಟೆ ತುಂಬುವಷ್ಟು ಆಹಾರ ಸಿಗುತ್ತಿಲ್ಲ ಹಾಗೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಕುರಿಗಳನ್ನು ಖಾಲಿ ಹೊಟ್ಟೆಯಿಂದ ಹಟ್ಟಿಗೆ ಹೊಡೆದುಕೊಂಡು ಬರುವಂತಾಗಿದೆ ಎಂದು ಹೇಳುತ್ತಾರೆ ಕುರಿಗಾಹಿಗಳು.

ರೋಗದ ಭೀತಿ: ಹೈನುಗಾರಿಕೆ ಮಾಡುವ ರೈತರದ್ದು ಒಂದು ರೀತಿಯ ಸಮಸ್ಯೆಯಾದರೆ ಇನ್ನು ಕುರಿಗಾಹಿಗಳದ್ದು ಮತ್ತೊಂದು ಸಮಸ್ಯೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕುರಿಗಳಿಗೆ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಕುರಿಗಳ ಆರೋಗ್ಯ ಕೆಡುತ್ತದೆ. ಏನಿಲ್ಲವೆಂದರೂ ಒಂದು ಕುರಿ ನಿತ್ಯ ಹತ್ತಾರು ಲೀಟರ್ ನೀರು ಕುಡಿಸಲೇಬೇಕು. ಆದರೆ ಸದ್ಯದ ಸ್ಥಿತಿಯಲ್ಲಿ ನೀರು ಕುಡಿಸುವುದೇ ಒಂದು ಸಾಹಸ ಕೆಲಸವಾಗಿದೆ.

ಏಪ್ರಿಲ್ ತಿಂಗಳಲ್ಲಿ ಬಿಸಿಲು ತನ್ನ ಪ್ರಖರತೆ ತೋರಿಸುತ್ತಿದ್ದು, ಇನ್ನೂ ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಲಕ್ಷಣ ದಟ್ಟವಾಗಿ ಗೋಚರವಾಗುತ್ತಿದ್ದು. ಜನ ಮತ್ತು ಜಾನುವಾರುಗಳು ಬಸವಳಿಯುವುದರಲ್ಲಿ ಸಂದೇಹಗಳಿಲ್ಲ ಎನ್ನುವಂತಾಗಿದೆ.

ಜಾನುವಾರುಗಳು ಕೂಡಾ ಬಿಸಿಲಿನ ಝಳಕ್ಕೆ ಸುಸ್ತಾಗುತ್ತಿರುವ ಕಾರಣ ಸರಿಯಾಗಿ ಹಾಲು ನೀಡದೆ ಇರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಹಾಲು ಮಾರಾಟದಿಂದಲೇ ಜೀವನ ಕಟ್ಟಿಕೊಳ್ಳುವ ಕುಟುಂಬಗಳು ಯಾವಾಗ ಈ ಬೇಸಿಗೆ ಕಾಲ ಹೋಗುತ್ತದೆ. ಇಲ್ಲವೆ ಮಳೆ ಬರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿರುವದು ಕಂಡು ಬರುತ್ತಿದೆ.

ಜಾನುವಾರು ಜೋಪಾನವಾಗಿಡಿ: ಕುರಿ,ಆಡು, ಸಾಕು ನಾಯಿ ಸೇರಿದಂತೆ ಪ್ರತಿಯೊಂದು ಜಾನುವಾರುಗಳನ್ನು ಬಿಸಲಿನ ಸಮಯದಲ್ಲಿ ಹೊರಗಡೆ ಬಿಡಬಾರದು, ಬಿಸಿಲಿನ ಬೇಗೆ ತಡೆದುಕೊಳ್ಳದ ಜಾನುವಾರುಗಳಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿದ್ದು, ಮನುಷ್ಯರಂತೆ ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕಿದೆ. ಈಗಾಗಲೆ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು ಯಾವುದೆ ರೋಗದ ಲಕ್ಷಣ ಕಂಡು ಬಂದಿಲ್ಲ ಎನ್ನುವುದು ಹಿರಿಯ ಪಶು ವೈದ್ಯಾಧಿಕಾರಿಗಳ ಸಲಹೆಯಾಗಿದೆ.

ಈ ವರ್ಷದ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ. ಕಾಡಿನಲ್ಲಿ ಕುರಿಗಳಿಗೆ ತಿನ್ನಲು ಮೇವು ಕುಡಿಯಲು ನೀರು ಸರಿಯಾಗಿ ಸಿಗುತ್ತಿಲ್ಲ, ಇದರಿಂದ ಕುರಿಗಳಿಗೆ ತೊಂದರೆಯಾಗುತ್ತಿದ್ದು ನಾವು ಆತಂಕದಲ್ಲಿದ್ದೇವೆ ಎಂದು ಕುರಿಗಾಹಿ ಯಲ್ಲಪ್ಪ ಕುರಿ ತಿಳಿಸಿದ್ದಾರೆ.

ಕುರಿಗಾಹಿಗಳು ಬಿಸಿಲಿನ ಪ್ರಖರತೆ ಹೆಚ್ಚಾಗುವ ಪೂರ್ವದಲ್ಲಿ ಹಾಗೂ ಸಂಜೆ ಸಮಯದಲ್ಲಿ ಮಾತ್ರ ಕುರಿ ಮೇಯಿಸಲು ಮುಂದಾಗಬೇಕು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಸುವ ಕೆಲಸ ಮಾಡಬೇಕು. ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣವೆ ಪಶು ವೈದ್ಯರ ಸಲಹೆ ಪಡೆಯಬೇಕು ಎಂದು ಕುಷ್ಟಗಿ ಹಿರಿಯ ಪಶುವೈದ್ಯಾಧಿಕಾರಿ ಡಾ.ಸಿದ್ದಲಿಂಗಯ್ಯ ಶಂಕೀನ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಬಿಷಪ್‌ ಪೀಠಾರೋಹಣ: ದೇಶದ 35 ಬಿಷಪರು, 250 ಧರ್ಮಗುರುಗಳು ಭಾಗಿ
ಕೊಡವೂರು ದೇವಳ: ಮೇ 14ರಿಂದ ಮಹಾ ರುದ್ರಯಾಗ