ಧಾರವಾಡ:
ಕವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಪ್ರೊ. ಎಂ.ಆರ್. ಕುಂಬಾರ ಅವರ ಜನ್ಮ ಶತಮಾನೋತ್ಸವ ಸವಿ ನೆನಪಿಗಾಗಿ ಸುವರ್ಣ ಮಹೋತ್ಸವದ ಸಭಾಂಗಣದಲ್ಲಿ "ಡಿಜಿಟಲ್, ಕೃತಕ ಬುದ್ಧಿಮತ್ತೆ " ಜಗತ್ತಿನಲ್ಲಿ ಸಾಂಪ್ರದಾಯಿಕ ವರ್ಗಿಕರಣ, ಕ್ಯಾಟಲಾಗ್ ಪದ್ಧತಿಯಿಂದ ಜ್ಞಾನ ಸಂಘಟನೆಯತ್ತ ಮುನ್ನಡೆಯುವಿಕೆ : ಹಿಂದಿನ ಭವಿಷ್ಯದ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಜ್ಞಾನ ನಿರ್ವಹಣೆಗೆ ಹೊಸ ತಂತ್ರಜ್ಞಾನದ ಅನ್ವೇಷಣೆ ನಡೆಯಬೇಕಾಗಿದೆ. ತಂತ್ರಜ್ಞಾನದಿಂದ ಗ್ರಂಥಾಲಯಗಳು ಪರಿವರ್ತನೆ ಹೊಂದುತ್ತಿವೆ. ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ಕಾಲದಲ್ಲಿ ಪುಸ್ತಕದಿಂದ ತಂತ್ರಜ್ಞಾನವು ಮಾಹಿತಿ ಒದಗಿಸುವಲ್ಲಿ ಅಭೂತಪೂರ್ವ ಬದಲಾವಣೆ ಆಗಿದೆ ಎಂದ ಅವರು, ಪ್ರೊ. ಎಂ.ಆರ್. ಕುಂಬಾರ ಅವರು ಒಬ್ಬ ದೇಶದ ಮಾಹಿತಿ ವಿಜ್ಞಾನ ವಿಷಯದ ದಿಗ್ಗಜರಾಗಿದ್ದರು ಎಂದರು.ಕವಿವಿ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಆರ್. ಕರಿಸಿದ್ದಪ್ಪ ಮಾತನಾಡಿ, ಕುಂಬಾರ ಅವರೊಬ್ಬ ದೂರದೃಷ್ಟಿ ಹೊಂದಿದ್ದರು. ದೇಶದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಶಿಕ್ಷಣ ಬೆಳೆಯಲು ಕಾರಣರಾದರು ಎಂದು ಹೇಳಿದರು.
ಕವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಸಿ. ಕೃಷ್ಣಮೂರ್ತಿ, ಡಾ.ಆರ್.ಆರ್. ನಾಯಕ, ಡಾ. ಗುರುರಾಜ ಹಡಗಲಿ, ಡಾ. ಅನಿಲ ತಳವಾರ, ಗ್ರಂಥಾಲಯದ ತಜ್ಞರಾದ ಪ್ರೊ. ಸಿ.ಆರ್. ಕರಿಸಿದ್ದಪ್ಪ, ಪ್ರೊ. ಎಸ್.ಎಲ್. ಸಂಗಮ, ಪ್ರೊ. ರಮೇಶ ಬಾಬು, ಪ್ರೊ. ಮಹೇಶ ಹೊರಕೇರಿ, ಸೇರಿದಂತೆ ಹಲವರಿದ್ದರು.