ರೈಲ್ವೆ ಇಲಾಖೆ ಸರಕು ಗ್ರಾಹಕರ ಹಿತಾಸಕ್ತಿಗೆ ಬದ್ಧ

KannadaprabhaNewsNetwork |  
Published : Apr 19, 2026, 02:45 AM IST
ಹುಬ್ಬಳ್ಳಿಯ ವಿಭಾಗೀಯ ಕಚೇರಿಯಲ್ಲಿ ಸರಕು ಗ್ರಾಹಕರೊಂದಿಗೆ ಶುಕ್ರವಾರ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾಬಿಸಿನೆಸ್ ಡೆವಲಪ್‌ಮೆಂಟ್ ಯೂನಿಟ್ ಸಭೆ ನಡೆಸಿದರು. | Kannada Prabha

ಸಾರಾಂಶ

ರೈಲ್ವೆ ಇಲಾಖೆಯು ಸದಾ ಸರಕು ಗ್ರಾಹಕರ ಹಿತಾಸಕ್ತಿಗೆ ಬದ್ಧವಾಗಿದ್ದು, ಸರಕುಗಳ ಸಕಾಲಿಕ, ಸುರಕ್ಷಿತ ಹಾಗೂ ತ್ವರಿತ ಸಾಗಣೆಗೆ ಆದ್ಯತೆ ನೀಡಲಿದೆ.

ಹುಬ್ಬಳ್ಳಿ:

ರೈಲ್ವೆ ಇಲಾಖೆಯು ಸದಾ ಸರಕು ಗ್ರಾಹಕರ ಹಿತಾಸಕ್ತಿಗೆ ಬದ್ಧವಾಗಿದ್ದು, ಸರಕುಗಳ ಸಕಾಲಿಕ, ಸುರಕ್ಷಿತ ಹಾಗೂ ತ್ವರಿತ ಸಾಗಣೆಗೆ ಆದ್ಯತೆ ನೀಡಲಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಭರವಸೆ ನೀಡಿದರು.

ಇಲ್ಲಿನ ವಿಭಾಗೀಯ ಕಚೇರಿಯಲ್ಲಿ ಸರಕು ಗ್ರಾಹಕರೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬಿಸಿನೆಸ್ ಡೆವಲಪ್‌ಮೆಂಟ್ ಯೂನಿಟ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಭೆಯ ಉದ್ದೇಶ ಸರಕು ಗ್ರಾಹಕರೊಂದಿಗೆ ಸಮನ್ವಯ ಬಲಪಡಿಸಿ ಸರಕು ಸಾಗಣೆ ವ್ಯಾಪಾರವನ್ನು ವೃದ್ಧಿಸುವುದಾಗಿದೆ. ಜತೆಗೆ ಸರಕು ಗ್ರಾಹಕರ ಹಾಗೂ ರೈಲ್ವೆಯ ನಡುವಿನ ಉತ್ತಮ ಸಮನ್ವಯದ ಮೂಲಕ ಸಾಗಣೆಯಲ್ಲಿ ಗಮನಾರ್ಹ ಸಾಧನೆ ಸಾಧ್ಯವಾಗಿದೆ ಎಂದರು.

ಜೆಎಸ್‌ಡಬ್ಲ್ಯೂ ಸ್ಟೀಲ್, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್, ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್, ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ (PPL ಗೋವಾ), ಬಿಎಂಎಂ ಇಸ್ಪಾತ್ ಲಿಮಿಟೆಡ್, ವೇದಾಂತಾ ಲಿಮಿಟೆಡ್, ಎಂಎಸ್‌ಪಿಎಲ್ ಲಿಮಿಟೆಡ್ ಪೆಲ್ಲೆಟ್ ಪ್ಲಾಂಟ್, ಆದಾನಿ, ಠಾಕೂರ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಸೌತ್ ವೆಸ್ಟ್ ಪೋರ್ಟ್ ಲಿಮಿಟೆಡ್ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಭೆಯಲ್ಲಿ ಹಿರಿಯ ವಿಭಾಗೀಯ ಆಪರೇಷನ್ (ಪರಿಚಾಲನ) ವ್ಯವಸ್ಥಾಪಕ ಸತೀಶ ರಟಕಲೆ ಅವರು ರೈಲ್ವೆ ವತಿಯಿಂದ ಸರಕು ಸಾಧನೆ ಕುರಿತು ಪವರ್‌ಪಾಯಿಂಟ್ ಪ್ರಸ್ತುತಪಡಿಸಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಬಿಷಪ್‌ ಪೀಠಾರೋಹಣ: ದೇಶದ 35 ಬಿಷಪರು, 250 ಧರ್ಮಗುರುಗಳು ಭಾಗಿ
ಕೊಡವೂರು ದೇವಳ: ಮೇ 14ರಿಂದ ಮಹಾ ರುದ್ರಯಾಗ