ಶಾಂತಿಯುತವಾಗಿ ಗೌರಿ ಗಣೇಶ, ಈದ್ ಮಿಲಾದ್ ಆಚರಿಸಿ: ಸಿಪಿಐ ಶ್ರೀಶೈಲ ಕೌಜಲಗಿ

KannadaprabhaNewsNetwork |  
Published : Aug 25, 2024, 01:54 AM IST
24ಕೆಎಲ್ಜಿ1ಕಲಘಟಗಿ ಪಟ್ಟಣದ ಪಪಂ ಸಭಾಭವನದಲ್ಲಿ ಗೌರಿ ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ತಾಲೂಕಿನ ಗಜಾನನ ಉತ್ಸವ ಸಮಿತಿ ಸದಸ್ಯರನ್ನು ಉದೇಶಿಸಿ ಸಿಪಿಐ ಶ್ರೀಶೈಲ ಕೌಜಲಗಿ ಮಾತನಾಡಿದರು. | Kannada Prabha

ಸಾರಾಂಶ

ಶಾಂತಿಯುತವಾಗಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಎಂದು ಸಿಪಿಐ ಶ್ರೀಶೈಲ ಕೌಜಲಗಿ ಹೇಳಿದರು.

ಕಲಘಟಗಿ: ಶಾಂತಿಯುತವಾಗಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸಿ. ಸರಕಾರದ ನಿರ್ದೇಶನದಂತೆ ಹಬ್ಬಗಳು ಪ್ರತಿಯೊಂದು ಧಾರ್ಮಿಕ ಭಾವನೆಗಳನ್ನು ಗೌರವಿಸುವಂತಿರಬೇಕು. ಯಾರಾದರೂ ಶಾಂತಿಗೆ ಭಂಗ ತಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಶ್ರೀಶೈಲ ಕೌಜಲಗಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು. ಸರಕಾರ ಈಗಾಗಲೇ ಹಬ್ಬದ ಆಚರಣೆಗೆ ನಿರ್ದೇಶನಗಳನ್ನು ನೀಡಿದ್ದು, ಗಜಾನನ ಉತ್ಸವ ಕಮಿಟಿಯವರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೆಂಡಾಲ್ ನಿರ್ಮಿಸಬೇಕು. ಪೆಂಡಾಲಗಳಲ್ಲಿ ಅವಘಡ ಸಂಭವಿಸದಂತೆ ಎಚ್ಚರವಹಿಸಬೇಕು, ಜೂಜು, ಎಸ್ಪೀಟ್ ಆಟಗಳನ್ನು ಆಡುವಂತಿಲ್ಲ. ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಬಾರದು. ಪಿಒಪಿ ನಿರ್ಮಿತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು. ಮೂರ್ತಿ ಪ್ರತಿಷ್ಠಾಪನೆಗೆ ಧ್ವನಿವರ್ಧಕಗಳ ಬಳಕೆಗೆ ಅಧಿಕೃತವಾಗಿ ಪರವಾನಗಿ ಪಡೆಯಬೇಕು. ಹಸಿರು ಪಟಾಕಿ ಬಳಸಿ. ಆಸ್ಪತ್ರೆ, ಶಾಲಾ-ಕಾಲೇಜ ಅಕ್ಕಪಕ್ಕದಲ್ಲಿ ಪಟಾಕಿ ಸಿಡಿಸುವಂತಿಲ್ಲ. ಸುಪ್ರೀಮ್‌ಕೋರ್ಟ್‌ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ಸುರಕ್ಷತೆ ದೃಷ್ಟಿಯಿಂದ ಪಟ್ಟಣದಾದ್ಯಂತ್ಯ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಲಾಗುವುದು. ಗಣೇಶ ವಿಸರ್ಜನೆಯ ರಸ್ತೆಯನ್ನು ಬದಲಿಸಬಾರದು. ನಿಗದಿತ ಸಮಯದಲ್ಲಿಯೇ ಗಣೇಶನ ವಿಸರ್ಜನೆ ಮಾಡಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್‌ ವೀರೇಶ ಮುಳಗುಂದಮಠ ಮಾತನಾಡಿ, ಸರಕಾರ ಸೂಚಿಸಿದ ನಿಯಮ ಪಾಲಿಸುವುದು ಕಡ್ಡಾಯ. ತಪ್ಪಿದ್ದಲ್ಲಿ ಕ್ರಮ ಜರುಗಿಸಲಾಗುವುದು. ನಿಗದಿತ ಸಮಯದಲ್ಲಿ ಪ್ರತಿಷ್ಠಾಪಿಸಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದರು.

ಸಾರ್ವಜನಿಕರು ಪಪಂ ಅಧಿಕಾರಿ ಶರಣಪ್ಪ ಅವರಿಗೆ ರಸ್ತೆ ಅಕ್ಕಪಕ್ಕದಲ್ಲಿನ ಗಿಡಗಂಟೆಗಳನ್ನು ತೆರವುಗೊಳಿಸಬೇಕು ಹಾಗೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು. ವಿಸರ್ಜನೆಯ ಸ್ಥಳದಲ್ಲಿ ತೆಪ್ಪದ ವ್ಯವಸ್ಥೆ ಮಾಡುಬೇಕು ಎಂದರು.

ಸಭೆಯಲ್ಲಿ ಸದಾನಂದ ಚಿಂತಾಮಣಿ, ಪ್ರಮೋದ ಪಾಲ್ಕರ, ಸುಧೀರ ಬೋಳಾರ, ಬಾಷಾಸಾಬ್ ಕಾರಿಗಾರ, ಫಕಿರೇಶ ನೇಸರೆಕರ, ಶೌಕತಲಿ ತೇರಗಾಂವ್, ಗುರುನಾಥ ದಾನವೇನವರ, ಶಶಿ ಕಟ್ಟಿಮನಿ, ಪಪಂ ಸದಸ್ಯರಾದ ವೃಷಬೇಂದ್ರೆ ಪಟ್ಟಣಶೆಟ್ಟಿ, ಗಂಗಾಧರ ಗೌಳಿ, ಬಸವರಾಜ ಕಡ್ಲಾಸ್ಕರ, ನಾರಾಯಣ ವಾಘ್ಮೋಡೆ, ಬಸವರಾಜ ಮಾದರ, ವಾಸು ಲಮಾಣಿ, ಹಸನಸಾಬ್ ಗಂಜಿಗಟ್ಟಿ, ಯಲ್ಲಪ್ಪ ಮೇಲಿನಮನಿ, ಶಶಿಧರ ಕಟ್ಟಿಮನಿ, ಪರಶುರಾಮ ಹುಲಿಹೊಂಡ, ಲಕ್ಷ್ಮಣ ಲಮಾಣಿ ,ಮಂಜು ಭೋವಿ, ಶಿವಾಜಿ ಡೆಂಬೆ ಅಗ್ನಿಶಾಮಕ ದಳದ ಸಿಬ್ಬಂದಿ, ಪಟ್ಟಣದ ಗಜಾನನ ಉತ್ಸವ ಸಮಿತಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ