ಮುಂಡರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ 15 ದಿನಗಳ ಕಾಲ ಸೇವಾ ಪಾಕ್ಷಿಕ ಆರಂಭಿಸುವ ಮೂಲಕ ಬಡವರ, ದೀನ, ದಲಿತರ ಸೇವೆ ಮಾಡುವ ಮೂಲಕ ಜನ್ಮದಿನ ಆಚರಿಸಲಾಗುತ್ತಿದ್ದು ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಈಗಾಗಲೇ ಶಿರಹಟ್ಟಿ ಮತಕ್ಷೇತ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರದ ಜತೆಗೆ ರಕ್ತದಾನ ಶಿಬಿರ ಹಾಗೂ ಮುಂಡರಗಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶುಕ್ರವಾರ ಗಿಡನೆಡುವ ಕಾರ್ಯಕ್ರಮ ಆಚರಿಸಲಾಗಿದೆ. ಶ ಸಿಂಗಟಾಲೂರು ಗ್ರಾಪಂನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಅ. 2ರ ವರೆಗೂ ಹಮ್ಮಿಕೊಳ್ಳಲಾಗಿದೆ. ಮುಂಡರಗಿ ಯುವ ಘಟಕ ಅತ್ಯುತ್ತಮವಾಗಿ ವ್ಯವಸ್ಥೆ ಮಾಡಿದ್ದು, ಅವರಿಗೆ ಹಿರಿಯರು ಕಾರ್ಯಕರ್ತರು ಸಹಕರಿಸಿದ್ದಾರೆ ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, 2047ಕ್ಕೆ ವಿಕಸಿತ ಭಾರತಕ್ಕೆ ನಮ್ಮ ದೇಶ ತಲುಪಲಿದೆ. ಒಬ್ಬ ಪ್ರಧಾನಮಂತ್ರಿ ಜನ್ಮದಿನದ ಅಂಗವಾಗಿ ಇಡೀ ವಿಶ್ವದಲ್ಲಿಯೇ ಯಾವುದಾದರೂ ದೇಶ 15 ದಿನಗಳ ಕಾಲ ನಿರಂತರವಾಗಿ ಸೇವಾ ಪಾಕ್ಷಿಕದ ಮೂಲಕ ವಿವಿಧ ಜನೋಪಯೋಗಿ ಕಾರ್ಯವನ್ನು ಮಾಡುತ್ತಿದೆ ಎಂದರೆ ಅದು ಭಾರತ ದೇಶ ಎಂದರು.ಬಿಜೆಪಿ ಮುಂಡರಗಿ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಕುರಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ ಮಾತನಾಡಿದರು.