ಶಾಲಾ ಪ್ರಾರಂಭೋತ್ಸವ ಹಬ್ಬದ ರೀತಿ ಆಚರಿಸಿ: ಬಿಇಒ

KannadaprabhaNewsNetwork |  
Published : May 29, 2025, 12:53 AM IST
ಹೂವಿನಹಡಗಲಿಯ ಕಾರ್ಮೇಲ್‌ ಸೇವಾ ಸದನದಲ್ಲಿ ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಬೆಯಲ್ಲಿ ಮಾತನಾಡಿದ ಬಿಇಒ ಮಹೇಶ ಪೂಜಾರ್‌. | Kannada Prabha

ಸಾರಾಂಶ

2025-26ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಆಚರಿಸಬೇಕು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ.ಪೂಜಾರ ಕರೆ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

2025-26ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಆಚರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ.ಪೂಜಾರ ಕರೆ ನೀಡಿದರು.

ಪಟ್ಟಣದ ಕಾರ್ಮೆಲ್ ಸೇವಾ ಸದನದ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಶಾಲಾ ದಾಖಲಾತಿ ಹೆಚ್ಚಿಸುವುದು.ಪಠ್ಯ ಪುಸ್ತಕ ವಿತರಣೆ, ಬಿಸಿಯೂಟ ಸಮರ್ಪಕ ರೀತಿಯಲ್ಲಿ ನಿರ್ವಹಣೆ, ಸಮವಸ್ತ್ರ ಪೂರೈಕೆ ವಿವಿಧ ಕಾರ್ಯಕ್ರಮ ಇಲಾಖೆಯ ಸೂಚನೆಯಂತೆ ನಿರ್ವಹಿಸಬೇಕೆಂದು ಹೇಳಿದರು.

ವ್ಯಾಪಕವಾಗಿ ಮುಂಗಾರು ಮಳೆ ಆಗುತ್ತಿದ್ದು, ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಬಗ್ಗೆ ಎಚ್ಚರವಿರಬೇಕು, ಮಕ್ಕಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.

ಪ್ರತಿ ದಿನವೂ ಬೆಳಗ್ಗೆ ಮಧ್ಯಾಹ್ನ ಶಿಕ್ಷಕರ ಮಕ್ಕಳ ಹಾಜರಿ ಕಡ್ಡಾಯವಾಗಿದ್ದು, ಶಾಲಾ ಅಭಿವೃದ್ಧಿ ಯೋಜನೆ ಎಸ್ ಎ ಟಿ ಎಸ್ ಯು ಡೈಸ್ ಸರಿಯಾಗಿ ನಿರ್ವಹಣೆ ಮಾಡಬೇಕೆಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ ಮಾತನಾಡಿ, ಸರ್ಕಾರಿ ಶಾಲೆಗಳ ಆಸ್ತಿ ನೊಂದಣಿ, ಸಂಭ್ರಮ ಶನಿವಾರ, ನಮ್ಮ ಶಾಲೆ ನಮ್ಮ ಜವಾಬ್ದಾರಿ, ಕುಡಿಯುವ ನೀರು ಶೌಚಾಲಯ, ಎಸ್ ಡಿಎಂಸಿ ರಚನೆ ಶೈಕ್ಷಣಿಕ ವಿಷಯಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ.ಎಂ.ಕಾಂತೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಜಗದೀಶ್ ಮಾತನಾಡಿದರು.

ನಿಕಟ ಪೂರ್ವ ಅಧ್ಯಕ್ಷ ಯು.ಆನಂದ್, ಕಾರ್ಯದರ್ಶಿ ವಿ.ಎಚ್.ಯೇಸು, ಸಹ ಕಾರ್ಯದರ್ಶಿ ಎನ್.ಡಿ. ರೇಖಾ ಇತರರಿದ್ದರು.

ಸಿಆರ್ ಪಿ ಚಿದಾನಂದಪ್ಪ, ಹೊನ್ನಪ್ಪ, ಸಚಿನ್ ಆರಾಧ್ಯ ಚೆನ್ನವೀರನ ಗೌಡ ನಿರ್ವಹಿಸಿದರು. ಪಟ್ಟಣ ಸೇರಿದಂತೆ ಎಲ್ಲ ಕ್ಲಸ್ಟರಗಳ ಮುಖ್ಯ ಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್