ಡಿಸಿಎಂ ಡಾ. ಪರಮೇಶ್ವರ್‌ ಜನ್ಮದಿನಾಚರಣೆ

KannadaprabhaNewsNetwork |  
Published : Aug 07, 2026, 01:15 AM IST
್ಿ | Kannada Prabha

ಸಾರಾಂಶ

ಉಪ ಮುಖ್ಯಮಂತ್ರಿಡಾ.ಜಿ. ಪರಮೇಶ್ವರ್‌ ಅವರ 75ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಗುರುವಾರ ನಗರದ ಹೊರವಲಯದ ಮೈದಾಳದ ಶಿವಶೈಕ್ಷಣಿಕ ಆಶ್ರಮದ ಮಕ್ಕಳೊಂದಿಗೆ ಆಚರಿಸಿದರು

ಕನ್ನಡಪ್ರಭ ವಾರ್ತೆ ತುಮಕೂರುಉಪ ಮುಖ್ಯಮಂತ್ರಿಡಾ.ಜಿ. ಪರಮೇಶ್ವರ್‌ ಅವರ 75ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಗುರುವಾರ ನಗರದ ಹೊರವಲಯದ ಮೈದಾಳದ ಶಿವಶೈಕ್ಷಣಿಕ ಆಶ್ರಮದ ಮಕ್ಕಳೊಂದಿಗೆ ಆಚರಿಸಿದರು. ಆಶ್ರಮದ ಮಕ್ಕಳಿಗೆ ಸಿಹಿ, ಉಪಾಹಾರ ಬಡಿಸಿದರು. ಪಠ್ಯಪರಿಕರ ವಿತರಿಸಿ ತಮ್ಮ ನಾಯಕನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್, ಡಾ.ಪರಮೇಶ್ವರ್‌ ಅವರು ಸಜ್ಜನ ಜನನಾಯಕರು. ಆರೋಗ್ಯ ಶಿಕ್ಷಣಕ್ಕೆ ಒತ್ತುಒತ್ತು ನೀಡುತ್ತಿರುವ ಅವರು ಸ್ವತ: ಕ್ರೀಡಾಪಟುವಾಗಿ ಕ್ರೀಡೆಯ ಉತ್ತೇಜನಕ್ಕೆ ಮಹತ್ವ ನೀಡಿದ್ದಾರೆ ಎಂದರು.

ತುಮಕೂರು ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ತುಮಕೂರಿಗೆ ಮೆಟ್ರೋ ಸಂಪರ್ಕ ಒದಗಿಸಬೇಕೆಂದು ಹೆಚ್ಚು ಪ್ರಯತ್ನದಲ್ಲಿದ್ದಾರೆ. ಮೆಟ್ರೋ ಬಂದರೆ ತುಮಕೂರು, ಬೆಂಗಳೂರು ಮಾತ್ರವಲ್ಲ ಅದರ ನಡುವಿನ ಎಲ್ಲಾ ಹಳ್ಳಿಗಳೂ ಅಭಿವೃದ್ಧಿಯಾಗುತ್ತವೆಎಂದು ಹೇಳಿದರು. ಚೆಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಟಿ.ಎನ್. ಮಧುಕರ್ ಮಾತನಾಡಿ, ಡಾ. ಪರಮೇಶ್ವರ್‌ ಅವರು ದೇಶದಲ್ಲೇ ಅವರೂಪದ ಸಜ್ಜನಿಕೆಯ ಸಹನಾಶೀಲ ನಾಯಕರು, ಗೃಹ ಖಾತೆ ಮಂತ್ರಿಯಾಗಿದ್ದಾಗಲೂ ಇಲಾಖೆಯ ಒತ್ತಡವನ್ನು ತಾಳ್ಮೆ, ಸಹನೆಯಿಂದ ನಿಭಾಯಿಸಿದರು ಎಂದರು.

ಹಿರಿಯ ಕ್ರೀಡಾಪಟು, ಡಾ.ಪರಮೇಶ್ವರ್‌ ಅವರ ಕ್ರೀಡಾ ಸಹಪಾಠಿ ಟಿ.ಕೆ.ಆನಂದ್, ಗೃಹ ಮಂತ್ರಿಗಳ ವಿಶೇಷ ಅಧಿಕಾರಿಯಾಗಿದ್ದ ಡಾ.ಸಿ.ನಾಗಣ್ಣ, ಶಿವಶೈಕ್ಷಣಿಕ ಆಶ್ರಮದ ಲೇಪಾಕ್ಷಯ್ಯ, ಮುಖಂಡರಾದ ಮಧುಗೋಲ್ಡ್, ಅನು ಶಾಂತರಾಜು, ನಾರಾಯಣ್, ಶ್ರೀನಿವಾಸ್, ಮಹೇಶ್, ಸೈಯದ್, ಸಿಮೆಂಟ್ ರವಿ, ನಟರಾಜಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

75 ಬುದ್ಧ ವಿಗ್ರಹ ವಿತರಣೆಗೆ ಚಾಲನೆ
ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯ ಮಾಡಿ