ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರಿನ ಜಾಮೀಯಾ ಮಸೀದಿ, ಕುಬಾ ಮಸೀದಿ ಮತ್ತು ಮದೀನಾ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಹಲಗೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಿದ ಸಾವಿರಾರು ಮುಸ್ಲಿಂ ಸಮುದಾಯ ಸೇರಿ ಮಳವಳ್ಳಿ ಮತ್ತು ಇಗ್ಗಲೂರು ರಸ್ತೆಯ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು.
ಈ ವೇಳೆ ಚಿಕ್ಕ ಮಕ್ಕಳು ಹೊಸ ಬಟ್ಟೆ ಧರಿಸಿ ಖುಷಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯುವಕರು ಮತ್ತು ಹಿರಿಯರು ತಮ್ಮ, ತಮ್ಮ ಸ್ನೇಹಿತರೊಡನೆ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.ಧರ್ಮ ಗುರುಗಳಾದ ಇನಾಂ ಉಲ್ ಹುಸೇನ್ ಹಬ್ಬದ ಸಂದೇಶ ಸಾರಿ, ರಂಜಾನ್ ಮಾಸದಲ್ಲಿ ಇಸ್ಲಾಂ ಧರ್ಮದನಲ್ಲಿನ ದಾನ-ಧರ್ಮದ ಮಹತ್ವ ಕುರಿತು ಭೋಧನೆ ಮಾಡಿದರು. ಸಮಾಜದಲ್ಲಿ ಸೌಹಾರ್ದತೆ ನೆಲಸಲು ಶ್ರಮಿಸಬೇಕು. ಸರ್ವ ಧರ್ಮದವರೊಂದಿಗೆ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಈ ವೇಳೆ ಜಾಮೀಯಾ ಮಸೀದಿ ಅಧ್ಯಕ್ಷ ಸಿಬ್ಗತ್ ಉಲ್ಲಾ, ಉಪಾಧ್ಯಕ್ಷ ಮುಜಾಹಿದ್ ಪಾಷಾ, ಕಾರ್ಯದರ್ಶಿ ಅಮೀರ್ ಪಾಷಾ, ಖಜಾಂಚಿ ಈಲಾಲುದ್ದೀನ್, ಗ್ರಾಪಂ ಮಾಜಿ ಸದಸ್ಯರಾದ ಜಮೀಲ್ ಪಾಷಾ, ಸದ್ರುಲ್ಲಾ, ಕುಬಾ ಮಸೀದಿ ಅಧ್ಯಕ್ಷ ವಂದ್ರಿ ಬಾಬು ಮಸೀದಿ ಸದಸ್ಯರು, ಹಿರಿಯರು ಭಾಗವಹಿಸಿದ್ದರು.
21ಕೆಎಂಎನ್ ಡಿ17
------------
ಹಲಗೂರು: ಸಮೀಪದ ಧನಗೂರು ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಕುತುಬ್-ಎ-ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯೊಂದಿಗೆ ಸೋಮವಾರ ಆಚರಿಸಿದರು. ಧರ್ಮ ಗುರುಗಳಾದ ಮೌಲನಾ ಅಬ್ದುಲ್ ಮುಸಲ್ವೀರ್ ಹಬ್ಬದ ಸಂದೇಶ ಸಾರಿದರು. ಬಡ ಜನರಿಗೆ ಕೈಲಾದಷ್ಟು ದಾನ ಮಾಡಿ ಎಂದು ಸಲಹೆ ನೀಡಿದರು. ಈ ವೇಳೆ ಜಾಮೀಯಾ ಮಸೀದಿ ಅಧ್ಯಕ್ಷರಾದ ರಿಜ್ವಾನ್ ಅಬ್ದುಲ್ ಮುಹೀಬ್, ಉಪಾಧ್ಯಕ್ಷ ಸಯ್ಯದ್ ಅಲ್ಲಾ ಬಕಾಷ್, ದೌಲತ್ ಪಾಷಾ, ಸಾಧಿಕ್ ಪಾಷಾ, ಇಲಿಯಾಜ್ ಪಾಷಾ, ಪಾರೂಕ್ ಪಾಷಾ ಗ್ರಾಮದ ಮುಖಂಡರು ಸೇರಿದಂತೆ ಹಲವರು ಇದ್ದರು.