ಕೊಟ್ಟೂರು ತಾಲೂಕಿನಲ್ಲಿ ಗಣತಿ ಕಾರ್ಯ ಪ್ರಗತಿಯತ್ತ

KannadaprabhaNewsNetwork |  
Published : Oct 01, 2025, 01:01 AM IST
ಕೊಟ್ಟೂರಿನಲ್ಲಿ  ಮಂಗಳವಾರ ತಹಶೀಲ್ದಾರ್ ಅಮರೇಶ್ ಜಿಕೆ ಪಟ್ಟಣದ  ಮನೆಯೊಂದರ ಮಾಲೀಕರ ಪೋಟೂ ತೆಗೆದು  ಗಣತಿ ಕಾರ್ಯ  ಪರಿಶೀಲಿಸಿದರು | Kannada Prabha

ಸಾರಾಂಶ

ತಾಲೂಕಿನಲ್ಲಿನ 8490 ಮನೆ ಗಣತಿ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, 270 ಗಣತಿದಾರರನ್ನು ಮತ್ತು 14 ಮೇಲ್ವೆಚಾರಕರನ್ನು ನಿಯೋಜಿಸಿಕೊಳ್ಳಲಾಗಿದೆ.

ಕೊಟ್ಟೂರು: ತಾಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಪ್ರಗತಿಯಲ್ಲಿದ್ದು, ಮತ್ತೊಷ್ಟು ಚುರುಕುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.

ಅವರು ಮಂಗಳವಾರ ಪಟ್ಟಣದಲ್ಲಿನ ಮನೆಯೊಂದಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿ ಮಾಲೀಕರೊಬ್ಬರ ಚಿತ್ರವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಗಣತಿದಾರರಿಗೆ ಇತರ ಮಾಹಿತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲೂಕಿನಲ್ಲಿನ 8490 ಮನೆ ಗಣತಿ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, 270 ಗಣತಿದಾರರನ್ನು ಮತ್ತು 14 ಮೇಲ್ವೆಚಾರಕರನ್ನು ನಿಯೋಜಿಸಿಕೊಳ್ಳಲಾಗಿದೆ. ಈಗಾಗಲೇ ಮೇಲ್ವೆಚಾರಕರ ಸಭೆ ಕರೆದು ಮಾಹಿತಿ ಪಡೆದಿದ್ದು ತಾಲೂಕಿನ ಗಾಣಗಟ್ಟಿ, ಭೈರದೇವರಗುಡ್ಡ, ಮಂಗಾಪುರ ಮತ್ತು ಕುಡಿತಿನಿಮಗ್ಗಿ ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದ್ದು, ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ಈ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲಾಗುತ್ತಿದೆ ಎಂದರು.

ತಾಲೂಕಿನ ಮಲ್ಲನಾಯಕನಹಳ್ಳಿ ಮತ್ತು ಅಕ್ಕಾಪುರ ಗ್ರಾಮದಲ್ಲಿ ಗಣತಿದಾರರನ್ನು ನಿಯೋಜಿಸಿರಲಿಲ್ಲ ಇದೀಗ 3 ಜನ ಅಂಗನವಾಡಿ ಶಿಕ್ಷಕಿಯರನ್ನು ಮಲ್ಲನಾಯಕನಹಳ್ಳಿಗೆ 4 ಜನ ಶಿಕ್ಷಕರನ್ನು ಗಜಾಪುರ ಗ್ರಾಮದ ಗಣತಿ ಕಾರ್ಯ ಮುಗಿದ ಕೊಡಲೇ ಅಕ್ಕಾಪುರ ಗಣತಿ ಕಾರ್ಯ ಮಾಡುವಂತೆ ಮೇಲ್ವೆಚಾರಕರಿಗೆ ತಿಳಿಸಲಾಗಿದೆ ಎಂದರು.

ಗ್ರಾಮಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು, ಸಹಾಯಕರು, ಬಿಲ್ ಕಲೆಕ್ಟರ್‌, ಕೊಟ್ಟೂರು ಪಟ್ಟಣದಲ್ಲಿ ನೀರು ಗಂಟೆಗಳನ್ನು ಸಹಾಯಕರಾಗಿ ನಿಯೋಜಿಸಲಾಗಿದೆ ಮನೆಗಳ ಮತ್ತು ಇತರ ಮಾಹಿತಿಯನ್ನು ನೀಡಲು ಅವರುಗಳು ಸಹಕರಿಸಲಿದ್ದಾರೆ ಎಂದರು.

ಗಣತಿದಾರರ ಮಾಹಿತಿಯ ಪ್ರಗತಿಯನ್ನು ಆಗಾಗ ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ. ಸರ್ಕಾರ ನಿಗದಿಗೊಳಿಸಿದ ಅವಧಿಯೊಳಗೆ ತಾಲೂಕಿನಲ್ಲಿ ಗಣತಿಕಾರ್ಯವನ್ನು ಪೂರ್ಣಗೊಳಿಸುವಂತೆ ಪ್ರತಿಯೊಬ್ಬರಿಗೂ ಸೂಚನೆ ನೀಡಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ