ತಾಲೂಕು ಕ್ರೀಡಾಂಗಣದಲ್ಲಿ ನಡೆದ 68 ನೇ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಕನ್ನಡಪ್ರಭ ವಾರ್ತೆ, ಕಡೂರು ಕೇಂದ್ರ ಸರ್ಕಾರ ಭಾರತ ಒಕ್ಕೂಟ ವ್ಯವಸ್ಥೆಯಡಿ ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ಕಡಿತಗೊಳಿಸುತ್ತಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಪ್ರತಿಯೊಬ್ಬ ಕನ್ನಡಿಗರು ಖಂಡಿಸಬೇಕು ಎಂದು ಕೆ.ಎಸ್.ಆನಂದ್ ಕರೆ ನೀಡಿದರು. ಕಡೂರಿನಲ್ಲಿ ಬುಧವಾರ ಡಾ.ಬಿ.ಆರ್ ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 68 ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆ ಹೊಂದಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಸಿಗಬೇಕಾದ ಸ್ಥಾನಮಾನ ಮತ್ತು ಪಾಲನ್ನು ಕಡಿತಗೊಳಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಕರುನಾಡಿಗೆ ಮಾಡುತ್ತಿರುವ ಅವಮಾನ ಎಂದು ತಿಳಿಯಬೇಕಿದೆ. ಸಾವಿರಾರು ಜನರ ತ್ಯಾಗದ ಫಲವಾಗಿ ರೂಪುಗೊಂಡ ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರತೀ ಕನ್ನಡಿಗನೂ ಒಟ್ಟಾಗಿ ಹೋರಾಡಬೇಕು ಎಂದರು. ಕನ್ನಡ ನಾಡು ಕಟ್ಟುವಲ್ಲಿ ಅಸಂಖ್ಯಾತ ಹೋರಾಟಗಾರರು, ಕವಿಗಳ, ಸಾಹಿತಿಗಳ ಶ್ರಮ ಮರೆಯುವಂತಿಲ್ಲ. ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ನಾಡಪ್ರೇಮ ಮತ್ತು ದೇಶಪ್ರೇಮ, ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸ ಬೇಕು. ಕನ್ನಡಿಗರು ನಮ್ಮ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು. 1905ರಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿತ್ತು. 1950ರಲ್ಲಿ ಗಣರಾಜ್ಯ ವ್ಯವಸ್ಥೆಯಲ್ಲಿ ರಾಜ್ಯಗಳ ರಚನೆ ಬಳಿಕ 1973ರಲ್ಲಿ ಪ್ರತ್ಯೇಕ ರಾಜ್ಯವಾಯಿತು. ಕನಾಟಕ ಏಕೀಕರಣವಾಗಿ 50 ವರ್ಷ ಕಳೆದಿವೆ ಅಂದಿನಿಂದ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳು ರಾಜ್ಯಕ್ಕೆ ತಮ್ಮ ಕೊಡುಗೆ ನೀಡಿವೆ ಎಂದರು. ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಎರಡು ಸಾವಿರ ವರ್ಷದ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ ಈ ದಿನ ಕನ್ನಡಿಗರ ಹೆಮ್ಮೆಯ ದಿನವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆಕರ್ಷಕ ಸ್ತಭ್ದ ಚಿತ್ರಗಳು, ಮಕ್ಕಳ ಸಾಂಸ್ಕೃತಿಕ ಕಾಯಕ್ರಮ ಗಮನ ಸಳೆದವು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಟಿ.ಎನ್.ಎ.ಮೊದಲಿಯಾರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಐವರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಕಾಯಕ್ರಮದಲ್ಲಿ ಪಿ.ಎಸೈ ಧನಂಜಯ, ನವೀನ್, ಪುರಸಭಾ ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್, ಈರಳ್ಳಿ ರಮೇಶ್, ಮರು ಗುದ್ದಿ ಮನು, ಯಾಸೀನ್, ಜ್ಯೋತಿ ಆನಂದ್, ಹಾಲಮ್ಮ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು. ---ಬಾಕ್ಸ್ ಸುದ್ದಿಗೆ--- ಶಾಲೆಗಳ ಗೈರು: ಅಸಮಾಧಾನ ಕಡೂರು ಪಟ್ಟಣದಲ್ಲಿ ಸುಮಾರು 20 ಕ್ಕೂ ಹೆಚ್ಚು ಶಾಲೆಗಳಿದ್ದರೂ ರಾಜ್ಯೋತ್ಸವದಲ್ಲಿ ಭಾಗವಹಿಸಿಲ್ಲ ಎಂದು ಶಾಸಕ ಕೆ.ಎಸ್. ಆನಂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಕೆಲವೇ ಶಾಲೆಗಳ ವಿದ್ಯಾಥಿಗಳು ನೆಪಮಾತ್ರಕ್ಕೆ ಭಾಗವಹಿಸಿದಂತಿದೆ. ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ನಾಡ ಪ್ರೇಮ ಮೂಡಿಸಲು ಇಂತಹ ಕಾರ್ಯಕ್ರಮಗಳು ಪ್ರೇರೇಪಣೆ ನೀಡುತ್ತವೆ ಎಂದ ಶಾಸಕರು ವೇದಿಕೆಯಿಂದಲೇ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜ ನಾಯ್ಕರವರಿಗೆ ನಿರ್ದೇಶನ ನೀಡಿ, ಮುಂದಿನ ಇಂತಹ ಕಾಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲ ಶಾಲೆಗಳ ಮಕ್ಕಳು ಭಾಗವಹಿಸುವಂತೆ ನೋಟಿಸ್ ನೀಡಬೇಕು. ನಿರ್ಲಕ್ಷ್ಯಮಾಡಿದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. 1ಕೆಕೆಡಿಯು1. ಕಡೂರಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕನ್ಡಡ ರಾಜ್ಯೋತ್ಸವ ಕಾಯಕ್ರಮದಲ್ಲಿ ಶಾಸಕ ಕೆ.ಎಸ್ ಆನಂದ್ ಮಾತನಾಡಿದರು.. 1ಕೆಕೆಡಿಯು1ಎ.ಕಡೂರಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾಯಕ್ರಮದ ಪಥ ಸಂಚಲನದಲ್ಲಿ ಗಮನ ಸೆಳೆದ ಬಸವಣ್ಣನವರ ಅನುಭವ ಮಂಟಪ.