ಗ್ರಾಮೀಣ ಆರೋಗ್ಯ ಸೇವೆಗೆ ಕೇಂದ್ರ ಸರ್ಕಾರ ಆದ್ಯತೆ: ಯಶ್‌ಪಾಲ್ ಸುವರ್ಣ

KannadaprabhaNewsNetwork |  
Published : Sep 01, 2026, 03:00 AM IST
31ಕೆಂಜೂರು | Kannada Prabha

ಸಾರಾಂಶ

ಇಲ್ಲಿನ ಕಳ್ತೂರು ಗ್ರಾಮ ಗ್ರಾಮ ಪಂಚಾಯಿತಿ ಕೆಂಜೂರಿನಲ್ಲಿ ಸುಮಾರು 65 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಶಾಸಕರಾದ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.

ಉಡುಪಿ: ಇಲ್ಲಿನ ಕಳ್ತೂರು ಗ್ರಾಮ ಗ್ರಾಮ ಪಂಚಾಯಿತಿ ಕೆಂಜೂರಿನಲ್ಲಿ ಸುಮಾರು 65 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಶಾಸಕರಾದ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನತೆಯ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಸುಮಾರು 65 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಮೂಲಕ ಸ್ಥಳೀಯ ಜನತೆಗೆ ಉತ್ತಮ ಸೇವೆಯ ಜೊತೆಗೆ ಉತ್ತಮ ಆರೋಗ್ಯವಂತ ಸಮಾಜದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದರು.

ಸಮಾರಂಭದಲ್ಲಿ ಮಾಜಿ ಜಿ ಪಂ ಸದಸ್ಯರಾದ ಪ್ರತಾಪ ಹೆಗ್ಡೆ ಮಾರಾಳಿ, ವೈದ್ಯಾಧಿಕಾರಿ ಡಾ. ಸವಿತಾ ಕುಂದರ್, ಸ್ಥಳೀಯ ಮುಖಂಡರಾದ ಆದರ್ಶ್ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ರಮಾನಂದ ಶೆಟ್ಟಿ, ನಾಗೇಶ ನಾಯಕ್, ಉಷಾ ಪೂಜಾರಿ, ಮನೋಜ ಕುಮಾರ್, ಹರೀಶ ಶೆಟ್ಟಿ, ರವಿಂದ್ರ ಪೂಜಾರಿ, ಉದಯ ಶೆಟ್ಟಿ, ಶಾಂತರಾಜ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ನವೀನ್ ಪುತ್ರನ್, ರಘರಾಮ ಶೆಟ್ಟಿ, ಸತೀಶ್ ಶೆಟ್ಟಿ, ಶ್ರೀಕಾಂತ ಆಚಾರ್ಯ, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳ ಧಾರ್ಮಿಕ ಆಚರಣೆ ಮೇಲೆ ಅತಿಯಾದ ನಿಯಂತ್ರಣ ಬೇಡ: ಸಂಸದ ಕೋಟ
ಪಶ್ಚಿಮ ಘಟ್ಟದ ಜನರಿಗೆ ತೊಂದರೆಯಾಗದಂತೆ ಸರ್ಕಾರಕ್ಕೆ ಪತ್ರ: ಸ್ವರೂಪ