ಚಾಮರಾಜನಗರ: ವಿದ್ಯಾರ್ಥಿಗಳು ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಓದಿನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಚಾಮರಾಜನಗರ ವಿವಿ ಕುಲಪತಿ ಪ್ರೊ.ಗಂಗಾಧರ್ ಹೇಳಿದರು.
ಕುಲಸಚಿವ ಲೋಕನಾಥ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಭಾಗವಹಿಸುವಿಕೆ ಮತ್ತು ಸ್ಪರ್ಧೆಯ ಮನೋಭಾವ ಮುಖ್ಯವಾಗುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ರೂಪಿಸಿಕೊಳ್ಳಬೇಕಾದರೆ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪಠ್ಯೇತರ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಚಾಮರಾಜನಗರ ವಿವಿ ಕ್ರೀಡಾ ಸಮಿತಿಯ ಸದಸ್ಯರಾದ ಜಿ ಬಂಗಾರು, ಉಪನ್ಯಾಸಕರಾದ ಮಹೇಶ್, ಎನ್ಎಸ್ಎಸ್ ಅಧಿಕಾರಿ ಮಹೇಶ್, ಮಹದೇವ ಮೂರ್ತಿ, ಶಿವರಾಜು, ಬಸವಣ್ಣ ಮೂಕಹಳ್ಳಿ, ನಿಂಗರಾಜು, ಚೇತನ್, ಸಚಿನ್, ಚಾಮರಾಜು, ಜಗದೀಶ್ ಮಹೇಶ್ ಬಾಬು, ಭವ್ಯ, ಸವಿತಾ ಶಶಿಕಲಾ, ನಂದಿನಿ ಗ್ರಂಥಪಾಲಕ ರಾಘವೇಂದ್ರ, ಬೋಧಕೇತರ ವರ್ಗದ ಕುಮಾರ್ ಚಿಕ್ಕಹೊಳೆ, ಪ್ರಮೋದ್ ಮಹದೇವಸ್ವಾಮಿ, ರಾಜೇಗೌಡ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.