ಕನ್ನಡಪ್ರಭ ವಾರ್ತೆ ಚೇಳೂರು
ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಚಾಕವೇಲು ಗ್ರಾಮದ ಮುಖ್ಯ ರಸ್ತೆ ಕೆಸರುಮಯವಾಗಿದೆ. ಇದರಿಂದಾಗಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ತಾಲೂಕಿನ ಚಾಕವೇಲು ಗ್ರಾಮ ಪಂಚಾಯತಿ ಕೇಂದ್ರದಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಸುಮಾರು ಮೊಣಕಾಲುದ್ದದ ಗುಂಡಿಗಳು ನಿರ್ಮಾಣವಾಗಿವೆ. ಮಳೆ ನೀರು ಗುಂಡಿಗಳಲ್ಲಿ ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.ಡಾಂಬರ್ ಕಿತ್ತು ಗುಂಡಿ ನಿರ್ಮಾಣ
ಚಾಕವೇಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ಹಳ್ಳಿಗಳು ಡಾಂಬರು ಕಂಡು ದಶಕಗಳು ಕಳೆದಿವೆ, ಡಾಂಬರ್ ಕಿತ್ತು ಹೋಗಿದ್ದು ಪಕ್ಕ ಮಣ್ಣಿನ ರಸ್ತೆಯಂತಾಗಿದೆ, ಈ ಮಣ್ಣಿನ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ರಸ್ತೆ ಕೆಸರು ಗದ್ದೆಯಂತಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಮಳೆಗಾಲದಲ್ಲಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಮಯದಲ್ಲಿ ಚಾಕವೇಲು ನಿಂದಾ ಚೇಳೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸ ಮಾಡಲಾಯಿತು. ಅದು ಬಿಟ್ಟರೆ ಶಾಶ್ವತವಾದ ಡಾಂಬರು ಹಾಕುವಲ್ಲಿ ವಿಫಲರಾದರು. ಅಧಿಕಾರಿಗಳಿಗೆ ಹಿಡಿಶಾಪಚಾಕವೇಲು ಗ್ರಾಮ ಪಂಚಾಯತಿ ಕೇಂದ್ರದ ಮುಖ್ಯ ಹೃದಯ ಭಾಗವಾಗಿದ್ದು, ರಸ್ತೆಮಧ್ಯೆ ನಿರ್ಮಾಣವಾದ ಗುಂಡಿಗಳನ್ನು ಮುಚ್ಚಲು ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಸವಾರರು, ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಆಸ್ಪತ್ರೆಗೆಂದು ತೆರಳುವ ರೋಗಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಚಾಕವೇಲುನಿಂದಾ ಚೇಳೂರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ, ವಡ್ಡಿವಾಂಡ್ಲಪಲ್ಲಿ ಗ್ರಾಮದ ವರೆಗೂ ರಸ್ತೆ ಸಮಪರ್ಕ ಹದೆಗಟ್ಟು ಹೋಗಿದೆ. ಪಾತಪಾಳ್ಯ ಹಾಗೂ ಬಿಳ್ಳೂರು ಸಮಪರ್ಕ ಕಲ್ಪಿಸುವ ರಸ್ತೆಯ ತಿರುವಿನ ವರೆಗೂ ಗುಂಡಿಗಳಿಂದ ಕೂಡಿದ್ದು ಪಾದಚಾರಿಗಳು, ಬೈಕ್ ಸವಾರರು ಎಚ್ಚರಿಕೆಯಿಂದ ಸಂಚರಿಸಬಾಕಾಗಿದೆ ಿಲ್ಲದಿದ್ದರೆ ಜಾರಿ ಬೀಳುವುದು ಗ್ಯಾರಂಟಿ. ಶಾಲಾ ರಸ್ತೆಗೂ ಇದೇ ಗತಿಮುಖ್ಯ ವೃತ್ತದ ಬಳಿ ಬಸ್ ನಿಲ್ದಾಣದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ರಸ್ತೆ ಕೆಸರಿನಿಂದ ಕೂಡಿದೆ. ಅದರಲ್ಲೆ ನಡೆದುಕೊಂಡು ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳು ಶಾಲೆಗೆ ಹೋಗುತ್ತಿದ್ದು ರಸ್ತೆಯಲ್ಲಿ ಚಲಿಸುವ ಬಸ್ಸು ಹಾಗೂ ಇತರೆ ವಾಹನಗಳಿಂದ ಮಕ್ಕಳ ಶೂ ಹಾಗೂ ಬಟ್ಟೆಗಳು ಕೆಸರುಮಯವಾಗುತ್ತಿವೆ.ಇಷ್ಟು ಅದ್ವಾನ ವಾಗಿರುವ ರಸ್ತೆಗಳ ಕಾಮಗಾರಿ ಕೈಗೊಳ್ಳದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು,ಹಾಗೂ ಪ್ರಸ್ತುತ ರಸ್ತೆ ಮಧ್ಯ ಬಿದ್ದಿರುವ ಗುಂಡಿಗಳಿಗೆ ಮಣ್ಣು ಹಾಕಿ ಸಂಚಾರಕ್ಕೆ ಸುಗಮಗೊಳಿಸಬೇಕು. ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಟ್...................ಚಾಕವೇಲು ಗ್ರಾಮದ ರಸ್ತೆಯ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಈಗಾಗಲೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಮುಂದಿನ ಮೂರು ತಿಂಗಳ ಒಳಗೆ ಕಾಮಾಗಾರಿ ಪ್ರಾರಂಭ ಮಾಡಲಾಗುವುದು.- ಎಸ್ ಎನ್ ಸುಬ್ಬಾರೆಡ್ಡಿ, ಶಾಸಕರು..................ಕೋಟ್......
ಮಳೆ ಬಂತೆಂದರೆ ಚಾಕವೇಲು ಗ್ರಾಮದಲ್ಲಿ ಸಂಚರಿಸಲು ಹರಸಾಸಹಪಡಬೇಕು ರಸ್ತೆ ಸರಿಪಡಿಸುವಂತೆ ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ದುರಸ್ತಿ ಮಾಡಿ ಸಮಸ್ಯೆ ಬಗೆಹರಿಸಿ.ವೆಂಕಟರೆಡ್ಡಿ, ಚಾಕವೇಲು ಗ್ರಾಪ ಮಾಜಿ ಅಧ್ಯಕ್ಷ