ಪರಂ ಸಿಎಂ ಮಾಡುವಂತೆ ಛಲವಾದಿ ಸಂಘ ಒತ್ತಾಯ

KannadaprabhaNewsNetwork |  
Published : Dec 02, 2025, 01:15 AM IST
ಫೋಟೋ 1ಪಿವಿಡಿ3,1ಪಿವಿಜಿ3ಪಾವಗಡ,ಡಾ.ಜಿ.ಪರಮೇಶ್ವರ್‌ ಅವರಿಗೆ ಸಿಎಂ ಸ್ಥಾನ ಲಭಿಸುವಂತೆ ಒತ್ತಾಯಿಸಿ,ಅಧ್ಯಕ್ಷ ಕನಿಮಪ್ಪ ನೇತೃತ್ವದಲ್ಲಿ ತಾಲೂಕು ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ ಶ್ರೀ ಶನಿಮಹಾತ್ಮಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನ ಕಾಯಿ ಒಡೆದರು.    | Kannada Prabha

ಸಾರಾಂಶ

ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಖ್ಯ ಮಂತ್ರಿ ಸ್ಥಾನ ಕಲ್ಪಿಸುವ ಮೂಲಕ ದಲಿತರಿಗೆ ಪ್ರಾಶಸ್ಯ ನೀಡುವಂತೆ ತಾಲೂಕು ಛಲವಾದಿ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್‌ ಹೈಕಮೆಂಡ್‌ಗೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭವಾರ್ತೆ ಪಾವಗಡ

ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಖ್ಯ ಮಂತ್ರಿ ಸ್ಥಾನ ಕಲ್ಪಿಸುವ ಮೂಲಕ ದಲಿತರಿಗೆ ಪ್ರಾಶಸ್ಯ ನೀಡುವಂತೆ ತಾಲೂಕು ಛಲವಾದಿ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್‌ ಹೈಕಮೆಂಡ್‌ಗೆ ಒತ್ತಾಯಿಸಿದ್ದಾರೆ.

ಸಂಘದ ಅಧ್ಯಕ್ಷ ಕನುಮಪ್ಪ ನೇತೃತ್ವದಲ್ಲಿ ಛಲವಾದಿ ಕ್ಷೇಮಾಭಿವೃದ್ಧಿ ಸಂಘಟನೆಯ ಅನೇಕ ಮಂದಿ ಮುಖಂಡರು, ಸೋಮವಾರ ಪಟ್ಟಣದ ಬಳ್ಳಾರಿ ರಸ್ತೆ ಮೂಲಕ ಎಸ್‌ಎಸ್‌ಕೆ ವೃತ್ತದವರಿಗೆ ತೆರಳಿ ಡಾ,ಜಿ.ಪರಮೇಶ್ವರ್‌ ಅವರಿಗೆ ಸಿಎಂ ಸ್ಥಾನ ಕಲ್ಪಿಸುವಂತೆ ಜೈಕಾರ ಹಾಗೂ ಘೋಷಣೆ ಮೊಳಗಿಸಿದರು.

ಬಳಿಕ,ಡಾ.ಜಿ.ಪರಮೇಶ್ವರ್‌ ಅವರಿಗೆ ಸಿಎಂ ಸ್ಥಾನ ಲಭಿಸಲಿ ಕುರುಣಿಸುವಂತೆ, ಇಲ್ಲಿನ ದೇವಸ್ಥಾನಕ್ಕೆ ತೆರಳಿ ಶ್ರೀ ಶನಿಮಹ್ಮಾತ್ಮಸ್ವಾಮಿ ಹಾಗೂ ಅಮ್ಮ ಶೀಥಾಲಾಂಭದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ 101ತೆಂಗಿನ ಕಾಯಿ ಒಡೆದು ಸರ್ಮಪಿಸಿದರು.

ಇದೇ ವೇಳೆ ತಾಲೂಕು ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವದನಕಲ್ಲು ಬಿ.ರಂಗಸ್ವಾಮಿ ಮಾತನಾಡಿ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಅವರು ಸರಳ ಸಜ್ಜನಿಕೆಯ ನಾಯಕ,ಕಪ್ಪು ಚುಕ್ಕೆ ಇಲ್ಲದ ಉತ್ತಮ ವ್ಯಕ್ತಿತ್ವವುಳ್ಳವರು. ಜನಪರ ಕಾರ್ಯಕ್ರಮ ರೂಪಿಸುವಲ್ಲಿ ಚಿಂತನಾಶೀಲರು. ಇದುವರೆವಿಗೂ ಸಿಎಂ ಸ್ಥಾನದ ಅಧಿಕಾರ ನೀಡಿಲ್ಲ. ಅಧಿಕಾರ ಹಂಚಿಕೆ ವಿಚಾರ ಬಂದರೆ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಖ್ಯ ಮಂತ್ರಿ ಸ್ಥಾನ ಕಲ್ಪಿಸಿ ದಲಿತರಿಗೆ ನ್ಯಾಯ ನೀಡುವಂತೆ ಹೈಕಮೆಂಡ್‌ಗೆ ಮನವಿ ಮಾಡಿದರು.

ರಾಜ್ಯ ಛಲವಾದಿ ಮಹಾ ಸಭಾದ ಸದಸ್ಯ ಹಾಗೂ ಸಮಾಜದ ಹಿರಿಯ ಮುಖಂಡ ಡಿ.ರಾಜೇಂದ್ರ ಮಾತನಾಡಿದರು. ಈ ವೇಳೆ ಶ್ರೀನಿವಾಸ್‌, ನಾಗರಾಜ್‌, ಈರದಾಸಪ್ಪ, ಹನುಮಂತರಾಯಪ್ಪ,ಸಂಘದ ಮಾಜಿ ಅಧ್ಯಕ್ಷ,ಕೆ. ರಾಮಪುರದ ಎ.ನರಸಿಂಹಮೂರ್ತಿ,ಆದಿನಾರಾಯಣಪ್ಪ,ವೆಂಕಟಾಪುರದ ಈಶ್ವರಪ್ಪ, ಸೂಲನಾಯಕನಹಳ್ಳಿ ನಾಗರಾಜು, ಗಿರಿಜೇಂದ್ರ ತಿರುಮಣಿ ಎನ್‌.ಮರಳೀ ಕೃಷ್ಣ ಭೂತೇಶ್‌, ಕೃಷ್ಣಮೂರ್ತಿ,ಎನ್‌.ಚಿರಂಜೀವಿ, ಶಂಕರಪ್ಪ ಆರ್‌.ಕೆಂಚಪ್ಪ, ಸುಬ್ಬಪ್ಪ, ರಮೇಶ್‌, ದೇವೇಂದ್ರ, ವಿ.ಆರ್‌.ವೇಣುಗೋಪಾಲ್ ಆನಂದ, ಓಬಣ್ಣ, ಮಾರುತಿಸ್ವಾಮಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ