ಸವಾಲು ಎದುರಿಸಿ ಸಾಹಸದ ಇತಿಹಾಸ ಬರೆಯಿರಿ

KannadaprabhaNewsNetwork |  
Published : May 25, 2024, 12:52 AM IST
25ಡಿಡಬ್ಲೂಡಿ7ಧಾರವಾಡ ಸಮೀಪದ ಮುಮ್ಮಿಗಟ್ಟಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಜರುಗಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘ ಶಿಕ್ಷಾ ವರ್ಗ ಸಮಾರೋಪದಲ್ಲಿ ನಿವೃತ್ತ ಬ್ರಿಗೇಡಿಯರ್‌ ಸುಧೀಂದ್ರ ಇಟ್ನಾಳ ಮಾತನಾಡಿದರು.  | Kannada Prabha

ಸಾರಾಂಶ

ಆರ್‌ಎಸ್‌ಎಸ್‌ ಬಗೆಯ ವರ್ಗಗಳಿಂದ ಪ್ರಶಿಕ್ಷಣ ನೀಡುವ ಮೂಲಕ ಪ್ರತಿ ಸ್ವಯಂಸೇವಕರನ್ನು ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಸಶಕ್ತರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ.

ಧಾರವಾಡ:

ಆರ್‌ಎಸ್‌ಎಸ್‌ ತನ್ನ ಸ್ವಯಂಸೇವಕರಿಗೆ ಕಠಿಣ ಪ್ರಶಿಕ್ಷಣ ನೀಡುವ ಮೂಲಕ ಸಾಹಸಿ ಪ್ರವೃತ್ತಿ ಜತೆಗೆ ರಾಷ್ಟ್ರಭಕ್ತಿ ಮೊಳಗುವಂತೆ ಮಾಡುತ್ತದೆ. ಮುಂಬರುವ ಸವಾಲುಗಳನ್ನು ದಿಟ್ಟವಾಗಿ ಎದುರಿಸುತ್ತಾ ಸಾಹಸದ ಮತ್ತು ಶೌರ್ಯದ ಇತಿಹಾಸ ಬರೆಯೋಣ ಎಂದು ನಿವೃತ್ತ ಬ್ರೀಗೇಡಿಯರ್ ಸುಧೀಂದ್ರ ಇಟ್ನಾಳ ಹೇಳಿದರು.

ಇಲ್ಲಿಗೆ ಸಮೀಪದ ಮುಮ್ಮಿಗಟ್ಟಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಜರುಗಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘ ಶಿಕ್ಷಾ ವರ್ಗ ಸಮಾರೋಪದಲ್ಲಿ ಅವರು ಮಾತನಾಡಿದರು.

ಆರ್‌ಎಸ್‌ಎಸ್‌ ಬಗೆಯ ವರ್ಗಗಳಿಂದ ಪ್ರಶಿಕ್ಷಣ ನೀಡುವ ಮೂಲಕ ಪ್ರತಿ ಸ್ವಯಂಸೇವಕರನ್ನು ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಸಶಕ್ತರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ. ಭಾರತೀಯ ಸೈನ್ಯವು ಕೂಡಾ ತಮ್ಮ ಸೇನಾ ತರಬೇತಿಯಲ್ಲಿ ಸೈನಿಕರಿಗೆ ಕಠಿಣವಾದ ತರಬೇತಿ ನೀಡುತ್ತದೆ. ಅದರ ಪರಿಣಾಮ ಆ ಸೈನಿಕರು ಪ್ರಕೃತಿ ವಿಕೋಪ, ಯುದ್ಧ, ಗಲಭೆ ಹೀಗೆ ಅನೇಕ ಕಷ್ಟಕರ ಸಮಯದಲ್ಲಿ ರಾಷ್ಟ್ರ ರಕ್ಷಣೆಗಾಗಿ ಹೋರಾಡುತ್ತಾರೆ. ಕೇವಲ ಶಾರೀರಿಕ ಪ್ರಶಿಕ್ಷಣ ನೀಡಿದರೆ ಸಾಲದು, ಮಾನಸಿಕ ಮತ್ತು ಬೌದ್ಧಿಕ ಪ್ರಶಿಕ್ಷಣ ಕೂಡಾ ಅವಶ್ಯ ಎಂದರು.

ಸಾಧನೆಯಿಲ್ಲದೇ ಮರಣ ಹೊಂದಿದರೆ, ನಾವು ಜೀವನಕ್ಕೆ ಅಗೌರವ ತೋರಿದಂತೆ, ಅದೇ ರೀತಿ ಆದರ್ಶ ರಹಿತವಾದ ಬದುಕಿಗೆ ಅಪಮಾನ ತೋರಿದಂತೆ. ಹಾಗಾಗೀ ಸಾಧನೆ ಮತ್ತು ಆದರ್ಶ ಈ ಎರಡು ಸಂಗತಿಗಳು ಪ್ರತಿಯೊಬ್ಬರಿಗೂ ಅವಶ್ಯ ಎಂದು ಹೇಳಿದರು.

ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಪ್ರಾಂತ ಕಾರ್ಯವಾಹ ಕಿರಣ ಗುಡ್ಡದಕೇರಿ ಮಾತನಾಡಿ, ಕೌಟುಂಬಿಕ ವ್ಯವಸ್ಥೆಯಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡುಬರುತ್ತಿವೆ. ಮಕ್ಕಳಿಗೆ ಜನ್ಮ ನೀಡುವುದರಿಂದ ಯುವ ದಂಪತಿ ವಿಮುಖರಾಗುತ್ತಿದ್ದಾರೆ. ಕೌಟುಂಬಿಕ ವ್ಯವಸ್ಥೆ ಸಮಾಜದ ಅತ್ಯಂತ ಚಿಕ್ಕ ಘಟಕ ಎಂದರು.

ಸಂತಾನ ರಹಿತ ಬದುಕಿಗೆ ಮುಂದಾಗುತ್ತಿರುವ ಯುವಜನಾಂಗಕ್ಕೆ ಸಂತಾನದ ಮಹತ್ವ ತಿಳಿಸುವ ಅವಶ್ಯಕತೆಯಿದೆ. ಸಂತಾನ ರಹಿತ ಜೀವನ ಹಿಂದೂ ಜನಸಂಖ್ಯಾ ಅಸಮತೋಲನಕ್ಕೆ, ಮತ್ತೊಂದೆಡೆ ಭಾರತೀಯ ಸಂಸ್ಕೃತಿ ವಿನಾಶಕ್ಕೆ ನಾಂದಿ ಹಾಡುತ್ತದೆ ಎಂದರು.

ಈ ವೇಳೆ ವರ್ಗದ ಪ್ರಶಿಕ್ಷಾರ್ಥಿಗಳಿಂದ ಶಾರೀರಿಕ ಪ್ರದರ್ಶನ ನಡೆಯಿತು. ಸಂಘದ ಶಾಖೆಯಲ್ಲಿ ಮಾಡಲಾಗುವ ವ್ಯಾಯಾಮ, ದಂಡ ವ್ಯಾಯಾಮ, ದೇಸಿ ಆಟಗಳನ್ನು ಪ್ರದರ್ಶಿಸಲಾಯಿತು. ವರ್ಗಾಧಿಕಾರಿಯಾದ ಡಾ. ವೇದವ್ಯಾಸ ದೇಶಪಾ೦ಡೆ, ಹಿರಿಯರಾದ ಸು. ರಾಮಣ್ಣ, ವಿ. ನಾಗರಾಜ, ಪ್ರಾ೦ತ ಕಾರ್ಯದರ್ಶಿ ರಾಘವೇ೦ದ್ರ ಕಾಗವಾಡ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ