ಸವಾಲು, ಸಮಸ್ಯೆಗಳಲ್ಲೇ ವಿಶೇಷಚೇತನರ ಬದುಕು: ಎಂಟಿಬಿ

KannadaprabhaNewsNetwork |  
Published : Jan 13, 2025, 12:49 AM IST
ಫೋಟೋ : 12 ಎಚ್‌ಎಸ್‌ಕೆ 1 ಮತ್ತು 31: ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ರವರು ಗರುಡಾಚಾರ್ ಪಾಳ್ಯದ  ಗೃಹ ಕಚೇರಿಯಲ್ಲಿ ಎಂಟಿಬಿ ಸೇವಾ ಸಮಿತಿ ವತಿಯಿಂದ  ದಿವ್ಯಾಂಗರಿಗೆ  ಆರ್ಥಿಕ ನೆರವು ಹಾಗೂ ಗುರ್ತಿನ ಚೀಟಿಯನ್ನು ವಿತರಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಸಮಾಜದಲ್ಲಿ ತಮ್ಮ ಬದುಕನ್ನು ಸವಾಲಾಗಿ ಸ್ವೀಕರಿಸಿರುವ ದಿವ್ಯಾಂಗರು ಹಾಗೂ ವಿಶೇಷ ಚೇತನರಿಗೆ ನಮ್ಮ ಕುಟುಂಬದಿಂದ ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿದ್ದೇವೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಹೊಸಕೋಟೆ: ಸಮಾಜದಲ್ಲಿ ತಮ್ಮ ಬದುಕನ್ನು ಸವಾಲಾಗಿ ಸ್ವೀಕರಿಸಿರುವ ದಿವ್ಯಾಂಗರು ಹಾಗೂ ವಿಶೇಷ ಚೇತನರಿಗೆ ನಮ್ಮ ಕುಟುಂಬದಿಂದ ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿದ್ದೇವೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಗರುಡಾಚಾರಪಾಳ್ಯದ ತಮ್ಮ ಗೃಹ ಕಚೇರಿಯಲ್ಲಿ 700 ದಿವ್ಯಾಂಗರಿಗೆ ತಲಾ 500 ರು. ಆರ್ಥಿಕ ನೆರವು, ಗುರುತಿನ ಚೀಟಿ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಮನುಷ್ಯ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಬದುಕುವುದು ದುಸ್ತರವಾಗಿದೆ. ಇದರ ನಡುವೆ ಸಮಾಜದಲ್ಲಿ ಅಸಂಖ್ಯಾತ ದಿವ್ಯಾಂಗರು, ವಿಶೇಷ ಚೇತನರಿದ್ದು ತಮ್ಮ ಜೀವನ ದೊಡ್ಡ ಸವಾಲಾಗಿ ಸ್ವೀಕರಿಸಿ ಬದುಕುತ್ತಿದ್ದಾರೆ. ಆದ್ದರಿಂದ ಅವರಿಗೆ ಎಂಟಿಬಿ ಸೇವಾ ಸಮಿತಿ ವತಿಯಿಂದ ಪ್ರತಿ ತಿಂಗಳು ಆರ್ಥಿಕ ನೆರವಿನ ಜೊತೆಗೆ ಅನ್ನ ಸಂತರ್ಪಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಜೊತೆಗೆ ಹಲವಾರು ಅನಾಥಾಶ್ರಮಗಳಿಗೆ ಅಗತ್ಯ ದಿನಸಿ ಸಾಮಗ್ರಿ, ಔಷಧೋಪಚಾರ ಹಾಗೂ ಅವರಿಗೆ ಕಲಿಕೆಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಸರಬರಾಜು ಮಾಡುವ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ. ಪ್ರಮುಖವಾಗಿ ಮನುಷ್ಯನಿಗೆ ಹುಟ್ಟು ನಿಶ್ಚಿತ ಸಾವು ಖಚಿತ ಆದರೂ ಇದರ ನಡುವೆ ಹಣ ಆಸ್ತಿ ಅಂತಸ್ತು ಎಂದು ಮನುಷ್ಯರು ಬಡಿದಾಡುತ್ತಾರೆ. ಇದರ ನಡುವೆ ಒಮ್ಮೆ ದಿವ್ಯಾಂಗರ ವಿಶೇಷ ಚೇತನರ ಬದುಕನ್ನು ನೋಡಿ ಸಮಾಜದಲ್ಲಿ ನಾವು ಸತ್ಪ್ರಜೆಗಳಾಗಿ ಬದುಕಬೇಕು ಎಂದು ತಿಳಿಸಿದರು.

ಕಲಾ ಜ್ಯೋತಿ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಮುನಿರಾಜು ಮಾತನಾಡಿ, ಎಂಟಿಬಿ ನಾಗರಾಜ್ ರಾಜಕಾರಣಿಯಾಗಿ ಉದ್ಯಮಿಯಾಗಿ ತಮ್ಮ ಗಳಿಕೆಯ ಒಂದಿಷ್ಟು ಭಾಗವನ್ನು ದಾನವಾಗಿ ಕೊಡುವ ಮನಸ್ಥಿತಿ ರೂಢಿಸಿಕೊಂಡಿದ್ದಾರೆ. ಪ್ರಮುಖವಾಗಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ಆಯ್ದ 30 ಅನಾಥಾಶ್ರಮಗಳಿಗೆ ಆಹಾರ ಕಿಟ್‌ಗಳನ್ನ ಸರಬರಾಜು ಮಾಡುವ ಹಾಗೂ ಅಗತ್ಯ ಆರ್ಥಿಕ ನೆರವನ್ನ ಒದಗಿಸುವ ಕಾರ್ಯ ೩೦ ವರ್ಷಗಳಿಂದ ಮಾಡುತ್ತಿದ್ದಾರೆ. ಅವರ ಈ ಸೇವಾ ಕಾರ್ಯ ಮತ್ತಷ್ಟು ವಿಸ್ತರಣೆ ಆಗಲಿ. ಭಗವಂತ ಅವರಿಗೆ ಆರೋಗ್ಯ ಆಯಸ್ಸು ಹೆಚ್ಚಿಸಲಿ. ಜೊತೆಗೆ ಸಮಾಜದಲ್ಲಿನ ಸ್ಥಿತಿವಂತರು ಎಂಟಿಬಿ ನಾಗರಾಜ್ ಹಾದಿಯಲ್ಲಿ ಸಮಾಜದಲ್ಲಿ ನೊಂದವರಿಗೆ ಆಸರೆಯಾಗುವ ಕಾರ್ಯ ಮಾಡಲಿ ಎಂದು ಹೇಳಿದರು.

ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್, ಮಾಜಿ ಸಚಿವ ಎಂಟಿಬಿ ನಾಗರಾಜ್ ರವರ ಪತ್ನಿ ಶಾಂತಕುಮಾರಿ ಇತರ ಮುಖಂಡರು ಹಾಜರಿದ್ದರು.

(ಒಂದು ಫೋಟೋ ಮಾತ್ರ ಬಳಸಿ)

ಫೋಟೋ : 12 ಎಚ್‌ಎಸ್‌ಕೆ 1 ಮತ್ತು 3

ವಿಧಾನ ಪರಿಷತ್ ಸದಸ್ಯಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಗರುಡಾಚಾರಪಾಳ್ಯದ ಗೃಹ ಕಚೇರಿಯಲ್ಲಿ ಎಂಟಿಬಿ ಸೇವಾ ಸಮಿತಿಯಿಂದ ದಿವ್ಯಾಂಗರಿಗೆ ಆರ್ಥಿಕ ನೆರವು ಹಾಗೂ ಗುರುತಿನ ಚೀಟಿ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?