ಕೇರಳದಲ್ಲಿ ಸುಬ್ರತೋ ಕಪ್‌: ಚಾ.ನಗರ ಅಗ್ರ

KannadaprabhaNewsNetwork |  
Published : Jul 16, 2026, 01:45 AM IST
15ಸಿಎಚ್ಎನ್54ಕೇರಳಾದ ಪತ್ತನಂತಿಟ್ಟ ದಲ್ಲಿ ನಡೆದ ಹೈದರಾಬಾದ್ ವಲಯದ ಸುಬ್ರತೋ ಕಪ್ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ  ಕಾಸರಗೋಡು ಜೆಎನ್ ವಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಚಾಮರಾಜನಗರ ಜೆಎನ್ ವಿ(ಜವಾಹರ್ ನವೋದಯ ವಿದ್ಯಾಲಯ)ತಂಡ. | Kannada Prabha

ಸಾರಾಂಶ

ಕೇರಳಾದ ಪಟ್ಟಣಂತಿಟ್ಟದಲ್ಲಿ ನಡೆದ ಹೈದರಾಬಾದ್ ವಲಯದ ಸುಬ್ರತೋ ಕಪ್ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಜೆಎನ್‌ವಿ (ಜವಾಹರ್‌ ನವೋದಯ ವಿದ್ಯಾಲಯ) ತಂಡ ಕಾಸರಗೋಡು ಜೆಎನ್‌ವಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೇರಳದಲ್ಲಿ ನಡೆದ ಹೈದರಾಬಾದ್‌ ವಲಯದಲ್ಲಿ ಕಾಸರಗೋಡು ತಂಡವನ್ನು ಮಣಿಸಿ ರಾಷ್ಟ್ರೀಯ ಸುತ್ತಿಗೆ ಆಯ್ಕೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೇರಳಾದ ಪಟ್ಟಣಂತಿಟ್ಟದಲ್ಲಿ ನಡೆದ ಹೈದರಾಬಾದ್ ವಲಯದ ಸುಬ್ರತೋ ಕಪ್ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಜೆಎನ್‌ವಿ (ಜವಾಹರ್‌ ನವೋದಯ ವಿದ್ಯಾಲಯ) ತಂಡ ಕಾಸರಗೋಡು ಜೆಎನ್‌ವಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಹೈದರಾಬಾದ್ ವಲಯದ ಸುಬ್ರತೋ ಕಪ್ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಜೆಎನ್‌ವಿ ತಂಡ ಮೊದಲ ಪಂದ್ಯದಲ್ಲಿ ತ್ರಿಶೂರ್‌ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದರೆ.

​ಎರಡನೇ ಪಂದ್ಯದಲ್ಲಿ ಕೊಲ್ಲಂ ತಂಡದ ವಿರುದ್ಧ 0-0 ಗೋಲುಗಳಿಂದ ಡ್ರಾ ಮಾಡಿಕೊಂಡು ಸೆಮಿಫೈನಲ್ ತಲುಪಿತು. ಬಳಿಕ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಎರ್ನಾಕುಲಂ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.ಫೈನಲ್ ಪಂದ್ಯದಲ್ಲಿ ಕಾಸರಗೋಡು ಜೆಎನ್‌ವಿ ತಂಡದ ವಿರುದ್ಧದ ಹೋರಾಡಿದ ಚಾಮರಾಜನಗರ ಜೆಎನ್‌ವಿ ತಂಡ ಹೋರಾಟ ನಡೆಸಿ 0-0 ಗೋಲುಗಳ ಮೂಲಕ ಸಮಬಲ ಸಾಧಿಸಿದವು. ಬಳಿಕ ನೀಡಲಾದ ಹೆಚ್ಚುವರಿ ಸಮಯದಲ್ಲೂ ಪಂದ್ಯ ಟೈ ಆಗಿ ಕೊನೆಗೊಂಡಿತು. ಕೊನೆಗೆ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಚಾಮರಾಜನಗರ ಜೆಎನ್‌ವಿ ತಂಡವು ಕಾಸರಗೋಡು ಜೆಎನ್‌ವಿ ತಂಡವನ್ನು 5-4 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಚಾಮರಾಜನಗರ ಜೆಎನ್‌ವಿ ತಂಡ ಪ್ರಾದೇಶಿಕ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಜು 22, 23 ಮತ್ತು 24ರಂದು ಜಾರ್ಖಂಡ್‌ನ ದುಮ್ಕಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ (ನ್ಯಾಷನಲ್ಸ್) ಪಂದ್ಯಾವಳಿಗೆ ಪ್ರವೇಶ ಪಡೆಯಿತು.

ರಾಷ್ಟ್ರಮಟ್ಟದ ಪಂದ್ಯಾವಳಿಗೆ ಪ್ರವೇಶ ಪಡೆದಿರುವ ಚಾಮರಾಜನಗರ ಜೆಎನ್‌ವಿ ತಂಡ ಆಟಗಾರರನ್ನು ​ವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಎಸ್.ಎ. ರೆಹಮಾನ್, ​ತರಬೇತುದಾರ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಎಂ. ಕೌಶಿಕ್, ​ತಂಡದ ವ್ಯವಸ್ಥಾಪಕ ಹರಿ ರಾಘವನ್ ಅಭಿನಂದಿಸಿದ್ದಾರೆ.

--15ಸಿಎಚ್ಎನ್54

ಕೇರಳದ ಪಟ್ಟಣತಿಟ್ಟದಲ್ಲಿ ನಡೆದ ಸುಬ್ರತೋ ಕಪ್‌ನಲ್ಲಿ ಜಯ ಸಾಧಿಸಿದ ಚಾಮರಾಜನಗರ ಜೆಎನ್‌ವಿ ತಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಪತ್ರಿಕೆ ಓದುವ ಹವ್ಯಾಸದಿಂದ ಜ್ಞಾನದ ವೃದ್ಧಿ: ಅಷ್ಟೂರೆ
ರೈತ ಸಂಘದ ಹನೂರು ತಾಲೂಕು ಅಧ್ಯಕ್ಷರಾಗಿ ಅಜ್ಜಿಪುರ ರಾಜಣ್ಣ ಆಯ್ಕೆ