ಪತ್ರಿಕಾ ವಿತರಣೆ ಕಷ್ಟದ ಕಾರ್ಯವಾಗಿದ್ದು, ಹಗಲು ರಾತ್ರಿ ಎನ್ನದೆ ಪ್ರತಿ ಮನೆಗೆ ಪತ್ರಿಕೆಯನ್ನು ವಿತರಣೆ ಮಾಡಿ ಜೀವನ ಸಾಗಿಸುತ್ತಿರುವ ಪತ್ರಿಕಾ ವಿತರಕರು ನಿಜವಾದ ಶ್ರಮ ಜೀವಿಗಳೆಂದು ಆಧ್ಯಾತ್ಮಿಕ ಗುರು, ಅಂತಾರಾಷ್ತ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೂಲ್ಕಿ: ಪತ್ರಿಕಾ ವಿತರಣೆ ಕಷ್ಟದ ಕಾರ್ಯವಾಗಿದ್ದು, ಹಗಲು ರಾತ್ರಿ ಎನ್ನದೆ ಪ್ರತಿ ಮನೆಗೆ ಪತ್ರಿಕೆಯನ್ನು ವಿತರಣೆ ಮಾಡಿ ಜೀವನ ಸಾಗಿಸುತ್ತಿರುವ ಪತ್ರಿಕಾ ವಿತರಕರು ನಿಜವಾದ ಶ್ರಮ ಜೀವಿಗಳೆಂದು ಆಧ್ಯಾತ್ಮಿಕ ಗುರು, ಅಂತಾರಾಷ್ತ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೂಲ್ಕಿ ಪರಿಸರದಲ್ಲಿ ಕಳೆದ 25 ವರ್ಷಕ್ಕೂ ಮಿಕ್ಕಿ ವಿವಿಧ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿ ವಿಶ್ರಾಂತಿ ಜೀವನ ನಡೆಸುತ್ತಿರುವ ನಾರಾಯಣ ಕಾಮತ್ ಕೆಂಚನಕೆರೆ ರವರನ್ನು ಪತ್ನಿ ಶ್ರೀದೇವಿ ಕಾಮತ್ ಜೊತೆ ಅವರ ಸ್ವಗೃಹದಲ್ಲಿ ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಅವರು ಗೌರವಿಸಿ ಬಳಿಕ ವಿಡಿಯೋ ಕಾಲ್ ಮುಖಾಂತರ ಆಶೀರ್ವಚನ ನೀಡಿ ಮಾತನಾಡಿದ ಅವರು ಕೆಂಚನಕೆರೆ ನಾರಾಯಣ ಕಾಮತ್ ರವರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ, ಕೃಷಿಕರಾಗಿ, ಅನೇಕ ಚಟುವಟಿಕೆಗಳಿಂದ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಮಾನವೀಯ ಮೌಲ್ಯತೆಗಳನ್ನು ಮರೆಯುತ್ತಿರುವ ಆಧುನಿಕ ಯುಗದಲ್ಲಿ ನಾರಾಯಣ ಕಾಮತ್ ರವರು ಶ್ರೇಷ್ಠ ವ್ಯಕ್ತಿಯಾಗಿದ್ದಾರೆಂದು ಹೇಳಿದರು.
ಈ ಸಂದರ್ಭ ರಾಮಚಂದ್ರ ಕಾಮತ್, ರಾಘವೇಂದ್ರ ಕಾಮತ್ , ವಿದ್ಯಾಶ್ರೀ ಪೈ, ಹರ್ಷಿತಾ ಪೈ ಮತ್ತಿತರರು ಉಪಸ್ಥಿತರಿದ್ದರು. ಹರ್ಷಿತಾ ಪೈ ಸ್ವಾಗತಿಸಿ ನಿರೂಪಿಸಿದರು. ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸೇವಾ ಭಕ್ತರಾದ ಶರತ್ ಕಾರ್ನಾಡ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.