ಯಾದಗಿರಿ:
ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಸವಣ್ಣನವರ ವಚನಗಳ ಒಂದು ಸಾಲು ತಿಳಿದುಕೊಂಡರೂ ನಮ್ಮಲ್ಲಿ ತನ್ನಿಂದ ತಾನೇ ಸಾಕಷ್ಟು ಬದಲಾವಣೆ ಆಗುತ್ತದೆ ಎಂದರು.
ಗಿರಿಜಮ್ಮ ತಾಯಿ ಮಾತನಾಡಿ, ಜಗಕ್ಕೆ ಜ್ಯೋತಿಯಾಗಿ ಬೆಳಗಿದ ಬಸವೇಶ್ವರರು ಎಲ್ಲ ಸರ್ವರಿಗೂ ಮಾದರಿಯಾಗಿದ್ದಾರೆ. ಅವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ತಿಳಿದುಕೊಂಡರೆ, ಯಾವ ಮನುಷ್ಯರೂ ದುಡಿಯದೇ ಊಟ ಮಾಡುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಬಸಮ್ಮ ಹಳೇಪೂಜಾರಿ, ನೀಲಮ್ಮ ಬಂಡಿ, ನೀಲಮ್ಮ ಪಂಜಗಲ್ಲ, ಹನುಮವ್ವ ಆದಿ, ಚನ್ನಮ್ಮ ಉದ್ದನ, ರವಿಶಂಕರ ಅಡ್ಡಿ, ಬಸವರಾಜ ಅಂಗಡಿ, ಬಸನಗೌಡ ಬಿರಾದಾರ್ ಇತರರಿದ್ದರು.