ಜಾನುವಾರು ಜಾತ್ರೆ ರಥೋತ್ಸವವಾಗಿ ಬದಲಾವಣೆ ಮಾಡಿ: ಸದಾಶಿವ ಸ್ವಾಮೀಜಿ

KannadaprabhaNewsNetwork |  
Published : Feb 21, 2026, 03:00 AM IST
ಪೋಟೋ:- 1ಗುಡುಗಳಲೆ ಜಾತ್ರೆ ಮುಕ್ತಾಯ ಸಮಾರಂಭದ ಉದ್ಘಾಟನೆ ಮಹಂತ ಸ್ವಾಮಿ, ರುದ್ರಮುನಿ ಸ್ವಾಮಿ, ಚೈತ್ರ, ಮುಂತಾದವರಿದ್ದಾರೆ., 2. ಮಹಾಂತ ಸ್ವಾಮಿ ಮಾತು | Kannada Prabha

ಸಾರಾಂಶ

ಗುಡುಗಳಲೆ ಜಾನುವಾರು ಜಾತ್ರೆಯನ್ನು ರಥೋತ್ಸವವಾಗಿ ಬದಲಾವಣೆ ಮಾಡಿದಲ್ಲಿ ಜಾತ್ರಾ ವೈಭವ ಮರುಕಳಿಸಬಹುದು ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಗುಡುಗಳಲೆ ಜಾನುವಾರು ಜಾತ್ರೆಯನ್ನು ರಥೋತ್ಸವವಾಗಿ ಬದಲಾವಣೆ ಮಾಡಿದಲ್ಲಿ ಜಾತ್ರಾ ವೈಭವ ಮರುಕಳಿಸಬಹುದು ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಗುಡುಗಳಲೆ ಜಯದೇವ ಜಾತ್ರಾ ಸಭಾಂಗಣದಲ್ಲಿ ನಡೆದ 82ನೇ ವರ್ಷದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ರೈತರು ಜಾನುವಾರು ಸಾಕಾಣಿಕೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಹೀಗಾಗಿ ಜಾನುವಾರು ಜಾತ್ರೆಯಲ್ಲಿ ಹಸುಕರುಗಳು ಸೀಮಿತ ಸಂಖ್ಯೆಯಲ್ಲಿವೆ. ಕ್ಷೀಣಿಸುತ್ತಿರುವ ಜಾತ್ರೆ ಹಿಂದಿನ ವೈಭವ ಮರುಕಳಿಸಬೇಕಾದರೆ ಜಾತ್ರೆಯಲ್ಲಿ ರಥೋತ್ಸವಕ್ಕೆ ಮಹತ್ವ ನೀಡಬೇಕಿದೆ. ಜಾತ್ರೆ ಮೈದಾನದಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಅಭಿವೃದ್ದಿ ಪಡಿಸುವಂತೆ ಸಲಹೆ ನೀಡಿದರು.

ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನ ಮನಸ್ಸು ಪರಿಶುದ್ಧವಾಗಿದ್ದರೆ ಮಾತ್ರ ಸಮಾಜವು ಪರಿಶುದ್ಧಗೊಳ್ಳುತ್ತದೆ. ಸಮಾಜವನ್ನು ಅಭಿವೃದ್ದಿ ಪಡಿಸುವ ಜೊತೆಯಲ್ಲಿ ಪ್ರತಿಯೊಬ್ಬರೂ ಆರೋಗ್ಯದಾಯಕವಾಗಿ ಜೀವನ ಸಾಗಿಸುವ ಸಲುವಾಗಿ ಮರಗಿಡಗಳನ್ನು ಬೆಳೆಸಬೇಕು ಎಂದರು.

ಮಾಜಿ ತಾ.ಪಂ.ಸದಸ್ಯ ಕುಶಾಲಪ್ಪ ಮಾತನಾಡಿ-ಮುಂದಿನ ದಿನದಲ್ಲಿ ಜಾತ್ರೆಯಲ್ಲಿ ರಥೋತ್ಸವಕ್ಕೆ ಮಹತ್ವ ನೀಡಿದರೆ ನಾವೆಲ್ಲರೂ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹಂಡ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಧಾ ಈರೇಶ್, ಹಂಡ್ಲಿ ಗ್ರಾಮದ ಪ್ರಮುಖ ಲಕ್ಷ್ಮಿಶೆಟ್ಟಿ, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್ ಮುಂತಾದವರು ಮಾತನಾಡಿದರು. ಜಾತ್ರಾ ಸಮಿತಿ ಅಧ್ಯಕ್ಷೆ ಎಂ.ಎಸ್.ಚೈತ್ರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಾತ್ರಾ ಸಮಿತಿ ಕಾರ್ಯದರ್ಶಿ ಎಚ್.ಎಂ.ವಿನಿತ್ ಕುಮಾರ್, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರು, ನಿಡ್ತ ಗ್ರಾ.ಪಂ.ಅಧ್ಯಕ್ಷ ಅಶೋಕ್, ಹಂಡ್ಲಿ ಗ್ರಾ.ಪಂ.ಪಿಡಿಒ ಅಂಜನಾದೇವಿ, ಕೃಷಿ ಪತ್ತಿನ ಸಂಘದ ನಿರ್ದೇಶಕ ವೀರೇಂದ್ರ ಕುಮಾರ್ ಪ್ರಮುಖರಾದ ಬಸವಯ್ಯ, ಉಷಾ, ಮಹಾದೇವಮ್ಮ, ಈರಪ್ಪ ಜಾತ್ರಾ ಸಮಿತಿ ಸದಸ್ಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಜಿರೆ: ಇಂದು ಭಿಡೆ ಸಹೋದರಿಯರ ಭರತನೃತ್ಯ ರಂಗಪ್ರವೇಶ
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ತೋಯಜಾಕ್ಷ ಶೆಟ್ಟಿ ಆಯ್ಕೆ