ರಾಮನಗರ: ಕೆರಗೋಡು ಗ್ರಾಮದ ಘಟನೆ ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಮಂಡ್ಯ ಬಂದ್ ಬೆಂಬಲಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ರಾಮನಗರ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹನುಮನ್ ಚಾಲೀಸ ಪಠನೆ ಮಾಡಿ ಬೆಂಬಲ ಸೂಚಿಸಿದರು.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಹಾಕಲಾಗಿದ್ದ ಹನುಮಧ್ವಜವನ್ನು ನವೀಕರಣ ಮಾಡಿದ್ದ ಗ್ರಾಮಸ್ಥರು ಹೊಸದಾಗಿ ಅರ್ಜುನ ಸ್ತಂಭದಲ್ಲಿ ಧ್ವಜಾರೋಹಣ ಮಾಡಿದ್ದರು. ಈ ಹನುಮ ಧ್ವಜವನ್ನು ಸರ್ಕಾರ ಕೆಳಗೆ ಇಳಿಸಿತು. ಈ ಘಟನೆಯಿಂದ ರಾಜ್ಯದ ಎಲ್ಲಾ ಹಿಂದೂ ಬಾಂಧವರಿಗೆ ನೋವುಂಟಾಗಿದೆ ಎಂದು ಪ್ರತಿಭಟನಾ ನಿತರರು ಆಕ್ರೋಶ ವ್ಯಕ್ತ ಪಡಿಸಿದರು.
ಸರ್ಕಾರ ಹನುಮಧ್ವಜವನ್ನು ಇಳಿಸಿದ ಘಟನೆಯನ್ನು ಹಿಂದೂ ಸಮಾಜ ಖಂಡಿಸುತ್ತದೆ. ನಮ್ಮ ದೇಶವೂ ಜಾತ್ಯಾತೀತವಾಗಿದ್ದು, ಧರ್ಮತೀತವಲ್ಲ. ಗ್ರಾಮದಲ್ಲಿ ಕಳೆದ ೪೦ ವರ್ಷಗಳಿಂದ ಭಜನೆ ಮಾಡುತ್ತಾ ಯಾರಿಗೂ ತೊಂದರೆ ನೀಡದೆ ದೇವ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಶಕ್ತಿ ಹಾಗೂ ವೀರತೆಯ ಸಂಕೇತವಾಗಿರುವ ಹಾಗೂ ರಾಜ್ಯದ ಯುವ ಜನತೆಗೆ ಶಕ್ತಿ, ಯುಕ್ತಿ ನೈತಿಕತೆ ಇತ್ಯಾದಿ ಸದ್ಗುಣಗಳಿಗೆ ಪ್ರೇರಣೆ ನೀಡುವ ಹನುಮಧ್ವವನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ರಾಜ್ಯದ ಯಾವುದೇ ಪ್ರದೇಶ ಹಾಗೂ ಸ್ಥಳದಲ್ಲಿ ಹನುಮಧ್ವಜ ಹಾರಿಸಿದರೆ ಅದಕ್ಕೆ ಹಾನಿಯಾಗದಂತೆ ಸರಕಾರ ಸಂಬಂಧಿಸಿದ ಎಲ್ಲಾ ಇಲಾಖೆಗೆ ಆದೇಶ ನೀಡಬೇಕೆಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಕಿರಣ್, ರಮೇಶ್, ಮಧುಸೂಧನ್, ಸಂತು, ಅಭಿ ಯೋಗೇಶ್ ಮತ್ತಿತರರು ಭಾಗವಹಿಸಿದ್ದರು.ಬಾಕ್ಸ್...........ದೇಗುಲಗಳ ಹಣ ತೆಗೆದುಕೊಳ್ಳಬೇಡಿ
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸ್ಥಾಪನೆಗೆ ಸರ್ಕಾರ ಅವಕಾಶ ನೀಡದಿದ್ದರೆ ಹಿಂದೂ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ತೆಗೆದುಕೊಳ್ಳಬಾರದು ಎಂದು ಬಜರಂಗ ದಳದ ಜಿಲ್ಲಾ ಸಂಯೋಜಕ ಕಿರಣ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸರ್ಕಾರ ಧಕ್ಕೆ ತರುತ್ತಿದೆ. ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ಸ್ಥಾಪನೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.9ಕೆಆರ್ ಎಂಎನ್ 2.ಜೆಪಿಜಿ
ಮಂಡ್ಯ ಬಂದ್‌ಗೆ ಬೆಂಬಲಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣೆ ಮಾಡಿದರು.