- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ:ವಿಷಗಾಳಿ, ದುರ್ನಾತದಿಂದ ಜನಜೀವನ ಅಸ್ತವ್ಯಸ್ತ
- ಕನ್ನಡಪ್ರಭ ಸರಣಿ ವರದಿ ಭಾಗ : 50
ಕನ್ನಡಪ್ರಭ ವಾರ್ತೆ ಯಾದಗಿರಿತೆಲಂಗಾಣ ಸೇರಿದಂತೆ ಅನ್ಯರಾಜ್ಯಗಳಿಂದ ಒದ್ದೋಡಿಸಿಕೊಂಡ ಕಾರ್ಖಾನೆಗಳು ಜಿಲ್ಲೆಗೆ ಬಂದು ಇದೀಗ ನಮ್ಮ ಜೀವಕ್ಕೆ ಕುತ್ತು ತಂದಿಟ್ಟಿದ್ದಾರೆ. ಇಂತಹ ಕೆಮಿಕಲ್ ಕಂಪನಿಗಳ ವಿರುದ್ಧ ಆ ರಾಜ್ಯಗಳ ಜನರು ರೋಸಿಹೋಗಿ, ದಂಗೆಯೆದ್ದು ಅಲ್ಲಿಂದ ಓಡಿಸಿದ್ದರ ಪರಿಣಾಮ ಈಗೀ ಕೈಗಾರಿಕೆಗಳು ನಮ್ಮಲ್ಲಿಗೆ ಬಂದಿವೆ ಎಂಬ ಆರೋಪ ಇಲ್ಲಿನ ಕೈಗಾರಿಕಾ ಪ್ರದೇಶದ ವಿಷಗಾಳಿ- ದುರ್ನಾತದಿಂದ ನೊಂದು ಬೆಂದ ಜನರದ್ದು.
ಕೋಟ್- 1: ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ ಸ್ಥಾಪಿಸಿದ ರಾಸಾಯನಿಕ ಕಂಪನಿಗಳು ಪರಿಸರಕ್ಕೆ ಹಾನಿ ಮಾಡುವುದರ ಜೊತೆಗೆ ಜೀವ ಸಂಕುಲಕ್ಕೆ ಕಂಟಕವಾಗಿವೆ. ಈ ಕಾರ್ಖಾನೆಗಳನ್ನು ಈ ಪ್ರದೇಶದಿಂದ ಹೊರ ಹಾಕುವವರೆಗೂ ಸ್ಥಳೀಯರೆಲ್ಲರೂ ಸೇರಿಕೊಂಡು ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ಸರಕಾರಕ್ಕೆ ಇಲ್ಲಿನ ಜನರ ಜೀವಕ್ಕೆ ಬೆಲೆ ಕೊಡುತ್ತೋ ಅಥವಾ ಉದ್ಯೋಮಿದಾರರ ಹಿತಾಶಕ್ತಿಯನ್ನು ಕಾಯುತ್ತೋ ನೋಡೋಣ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗಾಗಲೇ “ಕೈಗಾರಿಕೆ ಹಟಾವೋ, ಸೈದಾಪುರ ಬಚಾವೋ” ಎಂಬ ಜಾಗೃತಿ ಅಭಿಯಾನ ನಡೆಯುತ್ತಿದ್ದು. ಮುಂದಿನ ದಿನಗಳಲ್ಲಿ ಈ ಅಭಿಯಾನವು ವಿರಾಟ ಸ್ವರೂಪದ ಮೂಲಕ ಸರಕಾರದ ಕಿವಿ ಹಿಂಡುವ ಕಾರ್ಯಕ್ಕೆ ಮುಂದಾಗುತ್ತೇವೆ. - ನತೀನ್ ತಿವಾರಿ, ಸೈದಾಪುರ (27ವೈಡಿಆರ್2)
ಕೋಟ್- 2 : ತೆಲಂಗಾಣದಿಂದ ಜನರು ದಂಗೆಯೆದ್ದು ಅಲ್ಲಿಂದ ಈ ಕೈಗಾರಿಕೆಗಳ ಓಡಿಸಿದರ ಪರಿಣಾಮ ಈಗವು ನಮ್ಮಲ್ಲಿಗೆ ಬಂದಿವೆ. ಇದರರ್ಥ, ಇವುಗಳಿಂದ ಇಲ್ಲಿನ ಪ್ರದೇಶದ ಅಭಿವೃದ್ಧಿಯಾಗಲೀ ಅಥವಾ ಉದ್ಯೋಗಾವಕಾಶ ದೊರೆಯುವುದಾಗಲೀ ಯಾವುದೂ ಇಲ್ಲ . ಕೇವಲ ಇಲ್ಲಿನ ಪರಿಸರ- ಜನರ ಆರೋಗ್ಯಕ್ಕೆ ಮಾರಕವಾಗಿಸಿ, ಜನರ ಜೀವ ಹಿಂಡಿ, ಉದ್ಯಮಿದಾರರು ಜೇಬು ತುಂಬಿಸಿಕೊಳ್ಳುವ ಕಂಪನಿಗಳಾಗಿವೆ. ಇದಕ್ಕೆ ಒಗ್ಗಟ್ಟಿನ ಹೋರಾಟ ಅತಿಮುಖ್ಯವಾಗಿದ್ದು. ಇದಕ್ಕೆ ಇಲ್ಲಿನ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಹೋರಾಟ ಮಾಡವುದು ಅತ್ಯವಶ್ಯಕವಾಗಿದೆ. : ಮಲ್ಲಿಕಾರ್ಜುನ್ ಗಡದ್, ಸೈದಾಪುರ. (27ವೈಡಿಆರ್3)
- ಸಿದ್ದಣ್ಣ ಬಾಗ್ಲಿ, ರಾಚನಹಳ್ಳಿ. (27ವೈಡಿಆರ್4)
ಕೋಟ್- 4 : ಈ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಘನತ್ಯಾಜ್ಯ ಘಟಕಕ್ಕೆ 5 ರಾಜ್ಯಗಳ ನಿರೂಪಯುಕ್ತ ಮತ್ತು ವಿಷಯುಕ್ತ ತ್ಯಾಜ್ಯವನ್ನು ತಂದು ಹಾಕುತ್ತಿರುವುದರಿಂದ ಅದರ ದುರ್ವಾಸನೆಯು ಸುಮಾರು 10 ರಿಂದ 15 ಕಿಲೋ ಮೀಟರ್ ವರೆಗೂ ಬರುತ್ತಿದೆ. ರಾತ್ರಿಯ ವೇಳೆಯಲ್ಲಿ ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತಿದೆ. ನಮ್ಮದು ಎಂತಹ ದುರದೃಷ್ಟವೆಂದರೆ, ನಮ್ಮ ಮನೆಯ ಮುಂದೆ ಬೇರೆ ಊರಿನ ದುರ್ನಾತದ ಕಸ ತಂದು ಹಾಕುತ್ತಿರುವುದು. ಅದನ್ನು ನಾವು ನೋಡಿ-ಕೇಳಿ ಅದರ ವಾಸನೆ ಕುಡಿದು ಆಸ್ಪತ್ರೆಗೆ ಸೇರುತ್ತಿದ್ದರೂ ಸರಕಾರದವರು ಮತ್ತು ಅಧಿಕಾರಿಗಳು ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.
----
-ಗುರುಲಿಂಗಯ್ಯಸ್ವಾಮಿ, ಸೈದಾಪುರ. (27ವೈಡಿಆರ್6)
----27ವೈಡಿಆರ್1 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.