ಚೇನಂಡ ಹಾಕಿ ನಮ್ಮೆ : ರೋಚಕ ಹಣಾಹಣಿಗೆ ಸಾಕ್ಷಿಯಾದ ಪಂದ್ಯಗಳು

KannadaprabhaNewsNetwork |  
Published : Apr 12, 2026, 03:00 AM IST
11-ಎನ್ಪಿ ಕೆ-2ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ  ಕೊಡವ ಕೌಟುಂಬಿಕ ಹಾಕಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.11-ಎನ್ಪಿ ಕೆ-3 ಶನಿವಾರ ಪಂದ್ಯವೊಂದರಲ್ಲಿ  ಬಾಚಮಂಡಕು ಟುಂಬದ ಬಾಚಮಂಡ ರಾಜ ಪೂವಣ್ಣ,ಮಗ ಬಾಚಮಂಡ ಲವಚಿಣ್ಣಪ್ಪ,ಮಗ ಬಾಚಮಂಡಭರತ್ , ಮೊಮ್ಮಗ ಬಾಚಮಂಡ ತನಿಲ್ ತಮ್ಮಯ್ಯ,ಮೊಮ್ಮಗಳುಬಾಚಮಂಡ ನೆಹಾಲ್ ನೀಲಮ್ಮ,ಮೊಮ್ಮಗಳುತನೈಅಕ್ಕಮ್ಮ  ಆಟವಾಡಿ ಗಮನ ಸೆಳೆದರು11-ಎನ್ಪಿ ಕೆ-4.ನಾಪೋಕ್ಲು-  ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ  ನಡೆದ ಕೊಡವ ಕೌಟುಂಬಿಕ ಚೇನಂಡಕಪ್ ಹಾಕಿ ಪಂದ್ಯಾವಳಿಯಲ್ಲಿ ಕಾಯಪಂಡ ಮತ್ತು ನುಚ್ಚುಮಣಿಯಂಡ ತಂಡಗಳ ನಡುವೆ ನಡೆದಪಂದ್ಯಾವಳಿಯನ್ನು ಪತ್ರಕರ್ತರು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಉದ್ಘಾಟಿಸಿ ಶುಭ ಹಾರೈಸಿದರು.  | Kannada Prabha

ಸಾರಾಂಶ

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮೂರು ಪಂದ್ಯಗಳು ರೋಚಕ ಹಂತ ತಲುಪಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮೂರು ಪಂದ್ಯಗಳು ರೋಚಕ ಹಂತ ತಲುಪಿದವು.

ಬೊಪ್ಪಂಡ ಮತ್ತು ಮಲ್ಲಂಡ ತಂಡಗಳ ನಡುವೆ ರೋಚಕ ಸ್ಪರ್ಧೆ ನಡೆಯಿತು . ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ನಡೆದ ಟೈ ಬ್ರೇಕರ್ ನಲ್ಲಿ ಮಲ್ಲಂಡ 3- 2 ಅಂತರದಿಂದ ಬೊಪ್ಪಂಡ ವಿರುದ್ಧ ಗೆಲುವು ಸಾಧಿಸಿತು. ಕಾಯಪಂಡ ಮತ್ತು ನುಚ್ಚುಮಣಿಯಂಡ ತಂಡಗಳ ನಡುವೆಯೂ ಬಿರುಸಿನ ಸ್ಪರ್ಧೆ ನಡೆಯಿತು. ಎರಡೂ ತಂಡಗಳು ನಿಗದಿತ ಅವಧಿಯಲ್ಲಿ 1-1ಗೋಲು ದಾಖಲಿಸಿದವು . ನಂತರ ಟೈ ಬ್ರೆಕರ್ ನಲ್ಲಿ ಕಾಯಪಂಡ ನುಚ್ಚುಮಣಿಯಂಡ ವಿರುದ್ಧ 3- 2 ಅಂತರದಿಂದ ಗೆಲುವು ಸಾಧಿಸಿತು.

ಕೋಣಿಯಂಡ ಮತ್ತು ಚೋವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಣಿಯಂಡ 3-2 ಅಂತರದಲ್ಲಿ ಚೋವಂಡ ವಿರುದ್ಧ ಗೆಲುವು ಸಾಧಿಸಿತು.ಅನ್ನಾಕಂಡ ತಂಡ ಪಾಲ್ಗೊಳ್ಳದೆ ಇದ್ದುದರಿಂದ ಕುಂದ್ರಂಡ ತಂಡ ವಾಕ್ ಓವರ್ ಗಳಿಸಿತು. ನಂದಿನೆರವಂಡ ತಂಡ ಪಾಲ್ಗೊಳ್ಳದೇ ಇದ್ದುದರಿಂದ ಮಲ್ಲಂಗಡ, ನಡಿಕೇರಿಯಂಡ ತಂಡ , ಚೇನೀರ ತಂಡ ಪಾಲ್ಗೊಳ್ಳದೇ ಇದ್ದುದರಿಂದ ಕಾರೇರ ಮತ್ತು ವಾಂಚಿರ ತಂಡ ಪಾಲ್ಗೊಳ್ಳದೆ ಇದ್ದುದರಿಂದ ಚೊಟ್ಟೇರ ತಂಡಗಳು ಕ್ರಮವಾಗಿ ವಾಕ್ ಓವರ್ ಗಳಿಸಿದವು.

ಉಳಿದಂತೆ ಅಲ್ತಂಡ ಸಿದ್ದಂಡ ವಿರುದ್ಧ 7-1 ರಿಂದ, ನೇರ್ಪಂಡ ಕೋಲತಂಡ ವಿರುದ್ಧ 4- 0 ಅಂತರದಿಂದ, ಮಲ್ಲಮಾಡ ಕುಟ್ಟಂಡ (ಕಾರ್ಮಾಡ್ ) ವಿರುದ್ಧ 4-0 ರಿಂದ ,ಬಾಚಮಂಡ ಮುದ್ಧಿಯಂಡ ವಿರುದ್ಧ 4- 0 ಅಂತರದಿಂದ, ಕುಪ್ಪಣ್ಣ ಮಾಡ ವಿರುದ್ಧ ಪಾಲೆಂಗಡ, ಅಪ್ಪಚ್ಚಿರ ವಿರುದ್ಧ ಕಡೆಮಾಡ , ಕಾಟುಮಣಿಯಿಂದ ವಿರುದ್ಧ ಮಚ್ಚುರ, ಪಾಲೆಯಂಡ(ಹಮ್ಮಿಯಾಲ) ವಿರುದ್ಧ ಮಲ್ಲಂಗಡ , ಬೊಳಿಯಂಗಡ ವಿರುದ್ಧ ಮಾಣಿರ, ಚೋಕಂಡ ವಿರುದ್ಧ ಕೊಡೆಂಗಡ ಗೆಲುವು ಸಾಧಿಸಿದವು.

ನಂಬಿಯಪಂಡ ಬಾಚರಣಿಯಂಡ ವಿರುದ್ಧ 3-0 ಅಂತರದಿಂದ, ಮಾಣಿರ ಬೊಳಿಯಂಗಡ ವಿರುದ್ಧ 1-0 ಅಂತರದಿಂದ, ಬಾಚಿನದಂಡ ಚಾರಿಮಂಡ ವಿರುದ್ಧ ಎರಡು ಒಂದು ಅಂತರದಿಂದ ನಾಟೋಲ್ಅಂಡ ಚಿರೋಟಿರ ವಿರುದ್ಧ 3- 1 ರಿಂದ ಬಾಚಮಂಡ 2-1ಅಂತರದಿಂದ, ನಾಟೋಳಂಡ ತಿರೋಟಿರ ವಿರುದ್ಧ 3-1ರಿಂದ, ಬಾಚಮಂಡ ಮುದ್ದಿಯಂಡ ವಿರುದ್ಧ 4-0 ಅಂತರದಿಂದ, ಪಾಲಚಂಡ ಮಚ್ಚಂಗಡ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸಿದವು.

ಇಂದಿನ ಪಂದ್ಯವೊಂದರಲ್ಲಿ ಬಾಚಮಂಡ ಕುಟುಂಬದ ಬಾಚಮಂಡ ರಾಜ ಪೂವಣ್ಣ, ಮಗ ಬಾಚಮಂಡ ಲವ ಚಿಣ್ಣಪ್ಪ, ಮಗ ಬಾಚಮಂಡ ಭರತ್

, ಮೊಮ್ಮಗ ಬಾಚಮಂಡ ತನಿಲ್ ತಮ್ಮಯ್ಯ, ಮೊಮ್ಮಗಳು ಬಾಚಮಂಡ ನೆಹಾಲ್ ನೀಲಮ್ಮ, ಮೊಮ್ಮಗಳು ತನೈಅಕ್ಕಮ್ಮ ಆಟವಾಡಿ ಗಮನ ಸೆಳೆದರು.

ಸುದ್ದಿ ಮಾಡಲು ಹೋಗಿ ಸುದ್ದಿಯಾದ ಪತ್ರಕರ್ತರು:

ಆಯೋಜಕರ ಅಪೇಕ್ಷೆಯ ಮೇರೆಗೆ ಕಾಯಪಂಡ ಮತ್ತು ನುಚ್ಚುಮಣಿಯಂಡ ತಂಡಗಳ ನಡುವೆ ನಡೆದ ಪಂದ್ಯಾವಳಿಯನ್ನು ಪತ್ರಕರ್ತರು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಉದ್ಘಾಟಿಸಿ ಶುಭ ಹಾರೈಸಿದರು.

--------------------------------------------

ಇಂದಿನ ಪಂದ್ಯಗಳು:

ಮೈದಾನ 1

8.30ಕ್ಕೆ ಬೊಳಕಾರಂಡ v/s ಚಿಕ್ಕಂಡ 9ಕ್ಕೆ ಪೊನ್ನಚಂಡ v/s ಅಚ್ಚಪಂಡ

10ಕ್ಕೆ ಅರಮಣಮಾಡ v/s ಬಾಳೆಯಡ 11ಕ್ಕೆ ಕರ್ತಮಾಡ(ಬಿರುನಾಣಿ) v/s ಕುಟ್ಟಂಡ 12ಕ್ಕೆ ಕರ್ತಮಾಡ (ಬಿ. ಶೆಟ್ಟಿಗೇರಿ) v/s ಅಳಮೇಂಗಡ

1 ಕ್ಕೆ ಅಲ್ಮಚಂಡ v/s ಮಾಳೇಟಿರ (ಕೆದಮಳ್ಳೂರ್‌) 2ಕ್ಕೆ ಬೊಳ್ಳಂಡ v/s ಮಳುವಂಡ 3ಕ್ಕೆ ಮರುವಂಡ v/s ಮನಿಪಂಡ 4ಕ್ಕೆ ಚಿಂಡಮಾಡ v/s ಕನ್ನಂಬೀರ

ಮೈದಾನ 28.30ಕ್ಕೆ ಕೈಬುಲಿರ v/s ಬೊಳ್ಳೇರ

9ಕ್ಕೆ ಅಲ್ಲುಮಾಡ v/s ಕಂಬೀರಂಡ 10ಕ್ಕೆ ಚೇನಂಡ v/s ಮಂದನೆರವಂಡ 11ಕ್ಕೆಬೊಟ್ಟಂಗಡ v/s ಪುತ್ತರೀರ 12ಕ್ಕೆ ಚಂದುರ v/s ವಲ್ಲಂಡ 12.001ಕ್ಕೆನಾಯಕಂಡ v/s ಮಲ್ಚೀರ 2ಕ್ಕೆ ಮೂಕೊಂಡ v/s ಚೆಕ್ಕೇರ 3ಕ್ಕೆ ಕೊಕ್ಕಂಡ v/s ಚೋಯಮಾಡಂಡ

ಮೈದಾನ 3

8.30ಕ್ಕೆ ಮಾಪಂಗಡ v/s ಮನೆಯಪಂಡ9ಕ್ಕೆ ಕೊಂಡೀರ v/s ಬೇರೇರ10ಕ್ಕೆ ಕೋಲಿರ v/s ಕುಂದೀರ 11ಕ್ಕೆ ತಾಚಮಂಡ v/s ಪುಲ್ಲೇರ

12ಕ್ಕೆ ಮುಕ್ಕಾಟಿರ(ಕಡಗದಾಳು) v/s ಬಾರಿಯಂಡ1ಕ್ಕೆ ತಿರುಟೇರ v/s ಅಲೇಮಾಡ 2ಕ್ಕೆ ಚೊಟ್ಟೆಯಂಡಮಾಡ v/s ಚೆರಿಯಪಂಡ 3ಕ್ಕೆ ಮಂಡೇಟಿರ v/s ಬೊಳಿಯಾಡೀರ

-------------------------------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗಳ ಮಾನ್ಯತೆ ಮತ್ತೊಮ್ಮೆ ಪರಿಶೀಲಿಸಿ: ಸಂಸದ ರಮೇಶ ಜಿಗಜಿಣಗಿ
ಪ್ರತಿಯೊಬ್ಬರಲ್ಲೂ ಸಮಷ್ಠಿ ಪ್ರಜ್ಞೆ ಇರಲಿ