ಮರಿಯಮ್ಮನಹಳ್ಳಿ: ಪಟ್ಟಣಕ್ಕೆ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ಇನ್ನು ಮೂರು ತಿಂಗಳ ಕಾಲ ವಿದ್ಯುತ್ ಕಾಮಗಾರಿ ನಡೆಯುತ್ತಿದೆ. ಅಲ್ಲಿವರೆಗೆ ಕುಡಿಯುವ ನೀರು ಪೂರೈಕೆ ಮಾಡುವ ನೀರೆತ್ತುವ ಯಂತ್ರಗಳಿಗೆ ವಿದ್ಯುತ್ ಪೂರೈಸುವ ಜನರೇಟರ್ ನ ಡೀಸೆಲ್ ನಿರ್ವಹಣೆಗೆ, ಪ್ರತಿತಿಂಗಳು ₹3 ಲಕ್ಷ ಬಿಎಂಎಂ ಕಂಪನಿಯು ನೆರವು ನೀಡುತ್ತಿದೆ ಎಂದು ಬಿಎಂಎಂ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ತಿಳಿಸಿದರು.
ಮರಿಯಮ್ಮನಹಳ್ಳಿ ಪಟ್ಟಣಕ್ಕೆ ತಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡಲು ಜಾಕ್ ವೆಲ್ ಗೆ ವಿದ್ಯುತ್ ಸಂಪರ್ಕ ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯುವುರಿಂದ ಅಲ್ಲಿ ವರೆಗೆ ಜನರೇಟರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕಾಗಿರುವುದರಿಂದ ಜನರೇಟರ್ ಡೀಸೆಲ್ ವ್ಯವಸ್ಥೆ ಕಲ್ಪಿಸುವಂತೆ ಪಟ್ಟಣ ಪಂಚಾಯಿತಿಯವರು ಬಿಎಂಎಂ ಕಂಪನಿಗೆ ಮನವಿ ಮಾಡಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಬಿಎಂಎಂ ಕಂಪನಿಯಿಂದ ಮೂರು ತಿಂಗಳ ಕಾಲ ಪ್ರತಿ ತಿಂಗಳು ₹3 ಲಕ್ಷ ಡೀಸೆಲ್‌ಗಾಗಿ ನೆರವು ನೀಡಲಾಗುವುದು ಎಂದರು.
ಪಪಂ ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್, ಪಪಂ ಸದಸ್ಯ ಎಲ್. ವಸಂತ, ಜಿಪಂ ಮಾಜಿ ಸದಸ್ಯ ಗೋವಿಂದರ ಪರುಶುರಾಮ, ಸ್ಥಳೀಯ ಮುಖಂಡರಾದ ಎಸ್. ಕೃಷ್ಣ ನಾಯ್ಕ್, ಚಿದ್ರಿ ಸತೀಶ್, ಗರಗ ಪ್ರಕಾಶ ಪೂಜಾರ್, ರೋಗಾಣಿ ಮಂಜುನಾಥ, ರುದ್ರನಾಯ್ಕ್, ಬಿಎಂಎಂ ಕಂಪನಿಯ ಅಧಿಕಾರಿಗಳಾದ ಗಿರೀಶ್ ಕಾಕನೂರ್, ಅರುಣ್ ಕುಮಾರ್, ಡಿ.ಬಿ. ನಾಯ್ಕ್ ಉಪಸ್ಥಿತರಿದ್ದರು.ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಜನರೇಟರ್ ನ ಡೀಸೆಲ್ ನಿರ್ವಹಣೆಗಾಗಿ ₹3 ಲಕ್ಷದ ಚೆಕ್‌ನ್ನು ಗಣೇಶ್ ಹೆಗಡೆ ವಿತರಿಸಿದರು.