ಹುಬ್ಬಳ್ಳಿ:
ಮೂವತ್ತು ವರ್ಷಗಳ ಶೈಕ್ಷಣಿಕ ಪರಂಪರೆ ಹೊಂದಿರುವ ಈ ಸಂಸ್ಥೆಯು ಡಾ. ವಿಶ್ವನಾಥ ಕೊರವಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಿರಂತರವಾಗಿ ಬೆಳವಣಿಗೆ ಸಾಧಿಸಿದೆ. ಪಿಯುಸಿ ಕಾಮರ್ಸ್‌ನಿಂದ ಸ್ನಾತಕೋತ್ತರ ಶಿಕ್ಷಣದ ವರೆಗೆ ವಿದ್ಯಾರ್ಥಿಗಳಿಗೆ ಸಮಗ್ರ ಹಾಗೂ ಉದ್ಯೋಗಮುಖಿ ಶಿಕ್ಷಣ ಒದಗಿಸುತ್ತಿದೆ. PUC Commerce, B.Com, BBA, BCA, MBA ಮತ್ತು MCA ಕೋರ್ಸ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ರ್‍ಯಾಂಕ್‌ಗಳ ಸುರಿಮಳೆ:
ಶೈಕ್ಷಣಿಕ ಸಾಧನೆಗಳ ವಿಷಯದಲ್ಲಿ ಸಂಸ್ಥೆಯು ನಿರಂತರವಾಗಿ ಉನ್ನತ ಮಟ್ಟದ ಫಲಿತಾಂಶ ದಾಖಲಿಸುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅನೇಕ ವಿಶ್ವವಿದ್ಯಾಲಯ ರ್‍ಯಾಂಕ್, ಚಿನ್ನದ ಪದಕ ಹಾಗೂ ಡಿಸ್ಟಿಂಕ್ಷನ್ ಗಳಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಪಿಯುಸಿ ಕಾಮರ್ಸ್ ವಿಭಾಗದಲ್ಲಿಯೂ ಶೇ.95ಕ್ಕಿಂತ ಅಧಿಕ ಫಲಿತಾಂಶ ದಾಖಲಿಸುವ ಮೂಲಕ ಸಂಸ್ಥೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.ಇಲ್ಲಿನ ಶ್ರೀನಗರದಲ್ಲಿರುವ ಸುಸಜ್ಜಿತ ಕ್ಯಾಂಪಸ್‌ನಲ್ಲಿ ಸ್ಮಾರ್ಟ್‌ಕ್ಲಾಸ್ ರೂಂ, ಡಿಜಿಟಲ್ ಲರ್ನಿಂಗ್ ಸೌಲಭ್ಯ, ಸಮೃದ್ಧ ಗ್ರಂಥಾಲಯ, ಹೈ-ಸ್ಪೀಡ್ ಇಂಟರ್‌ನೆಟ್ ಹಾಗೂ 400ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಒಳಗೊಂಡ ಆಧುನಿಕ ಪ್ರಯೋಗಾಲಯಗಳು ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತಿವೆ. ಅನುಭವಿ ಮತ್ತು ಪಿಎಚ್.ಡಿ ಪದವೀಧರ ಬೋಧಕ ವೃಂದದ ಮಾರ್ಗದರ್ಶನ ಸಂಸ್ಥೆಯ ಮತ್ತೊಂದು ವಿಶೇಷತೆಯಾಗಿದೆ.
ಪ್ರಬಲ ಪ್ಲೇಸ್ಮೆಂಟ್ ಸೆಲ್:
Infosys, TCS, Wipro, Mphasis, Genpact, ICICI Bank, Teleperformance ಹಾಗೂ Zepto ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಜ್ಞಾನ, ಕೌಶಲ್ಯ ಮತ್ತು ಯಶಸ್ಸು ಎಂಬ ಧ್ಯೇಯವಾಕ್ಯದೊಂದಿಗೆ ಗುಣಮಟ್ಟದ ಶಿಕ್ಷಣ ಹಾಗೂ ಮೌಲ್ಯಾಧಾರಿತ ತರಬೇತಿ ನೀಡುತ್ತಿರುವ ಚೇತನ್ ಸಮೂಹ ಸಂಸ್ಥೆಗಳು, ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಮೊದಲ ಆಯ್ಕೆಯ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿದ್ದು, ಭವಿಷ್ಯದ ನಾಯಕರನ್ನು ರೂಪಿಸುವ ಮಹತ್ವದ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸುತ್ತಿವೆ.
-ಡಾ.ವಿಶ್ವನಾಥ್ ಕೊರವಿ-