ಕನ್ನಡಪ್ರಭ ವಾರ್ತೆ ಬೀದರ್‌ನಮ್ಮ ದೇಶದಲ್ಲಿ ಶಿವಾಜಿ ಮಹಾರಾಜರಂತಹ ರಾಜರಿಲ್ಲ. ಅವರ ದೇಶಭಕ್ತಿ, ರಾಷ್ಟ್ರ ಪ್ರೇಮ, ಯುದ್ಧನೀತಿ ಧೈರ್ಯ, ಶೌರ್ಯ ಮಹಿಳಾ ಗೌರವ, ಜಾತ್ಯಾತೀತ ಮನೋಭಾವನೆಯಂತಹ ಆದರ್ಶ ತತ್ವಗಳನ್ನು ಇಂದಿನ ಯುವ ಜನಾಂಗವು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಕರೆ ನೀಡಿದರು.ಜಿಲ್ಲಾಡಳಿತ, ಜಿ.ಪಂ ಆಶ್ರಯದಲ್ಲಿಂದು ನಗರದ ರಂಗ ಮಂದಿರದಲ್ಲಿ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮನಿರಪೇಕ್ಷ, ಜಾತ್ಯಾತೀತ ರೈತ ಅಭಿವೃದ್ಧಿ, ಸ್ವದೇಶ ರಾಜ್ಯಸಂಸ್ಥಾಪಕರಾಗಿದ್ದರು. ಇಂತಹ ಗುಣಗಳು ಇತರೇ ರಾಜರಲ್ಲಿ ಕಾಣುವುದು ತೀರ ಕಡಿಮೆ ಎಂದರು.ತಾಯಿ ಬೀಜಾಮಾತಾ ಮಾರ್ಗದರ್ಶನದಲ್ಲಿ ರಾಷ್ಟ್ರಭಕ್ತಿ ಬೆಳೆಸಿಕೊಂಡ ಶಿವಾಜಿ ಬಾಲ್ಯದಿಂದಲೇ ರಾಮಾಯಣ, ಮಹಾಭಾರತ ಓದಿ ಸ್ವರಾಜ್ಯ ರಾಜ್ಯ ನಿರ್ಮಿಸಿದರು. ಮುಘಲರೊಂದಿಗೆ ಯುದ್ಧ ಮಾಡಿ ಗೆದ್ದ ಅವರು ಗೆರಿಲ್ಲಾ ಯುದ್ಧ ಪರಿಣಿತರಾಗಿದ್ದರು ಎಂದು ಸಚಿವರು ತಿಳಿಸಿದರು. ಶಿವಾಜಿ ಮಹಾರಾಜರು ಧರ್ಮನಿರಪೇಕ್ಷ, ಧರ್ಮಾತೀತ, ಜಾತ್ಯತೀತ ಆಗಿದ್ದರು. ಶಿವಾಜಿ ಅವರ ಸೇನೆಯಲ್ಲಿ ಅಸಂಖ್ಯಾತರು ಮುಸ್ಲಿಂ ಸಮುದಾಯದವರಾಗಿದ್ದರು. ಅನೇಕ ಹುದ್ದೆಗಳಲ್ಲಿ ಕೂಡ ಮುಸ್ಲಿಂ ನಾಯಕರನ್ನು ನೇಮಿಸಿದ್ದರು. ಎಲ್ಲ ಸಮುದಾಯದವರನ್ನು ಒಟ್ಟಾಗಿ ಮುನ್ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ಜಾತಿ-ಜಾತಿಗಳಲ್ಲಿ ಕೋಮು-ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು, ಎಲ್ಲ ಸಮುದಾಯಗಳು ಒಟ್ಟಾಗಿ ಸಹೋದರತ್ವದಿಂದ ಬಾಳಬೇಕೆಂದು ಸಚಿವರು ನುಡಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಮಾಜಿ ಸಚಿವರಾದ ಬಂಡೇಪ್ಪ ಖಾಶಂಪೂರ, ಈಶ್ವರಸಿಂಗ ಠಾಕೂರ, ಸಮಾಜದ ಗಣ್ಯರಿಂದ ಪೂಜೆ ಸಲ್ಲಿಸಲಾಯಿತು.ಇಂದಿನ ಯುವಕರು ಛತ್ರಪತಿ ಶಿವಾಜಿ
ಇತಿಹಾಸ ಅರಿಯಿರಿ: ಸಂಸದ ಖಂಡ್ರೆಭಾಲ್ಕಿ: ವಿದ್ಯಾರ್ಥಿಗಳು, ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಅರಿಯಬೇಕು. ಅಂದಾಗ ಮಾತ್ರ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಸಂಸದ ಸಾಗರ ಖಂಡ್ರೆ ಅಭಿಪ್ರಾಯಪಟ್ಟರು.ಪಟ್ಟಣದ ಪುರಭವನದಲ್ಲಿ ತಾಲೂಕು ಆಡಳಿತದಿಂದ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಹೋತ್ಸವ ಉಧ್ಘಾಟಿಸಿ ಮಾತನಾಡಿ, ಯುವಕರು ದೇಶಾಭಿಮಾನಿಗಳಾಗಿ ಬದುಕಬೇಕು. ದೇಶದ ಪರವಾಗಿ ಜೀವ ತ್ಯಾಗ ಮಾಡಲೂ ಸಿದ್ಧರಿರಬೇಕು.ತಾಯಿಯ ಮಾರ್ಗದರ್ಶನದಿಂದಲೇ ಶಿವಾಜಿ ಮಹಾರಾಜರು ಉತ್ತಮ ಮಟ್ಟಕ್ಕೇರಲು ಸಾಧ್ಯವಾಯಿತು. ಎಲ್ಲಾ ತಾಯಂದಿರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಅರಿತು, ಅವರಂತಹ ತತ್ವಾದರ್ಶಗಳಂತೆ ಬಾಳಿ ದೇಶಪ್ರೇಮ ಮೆರೆಯಬೇಕೆಂದರು.ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ನಾಗೇಶ್ವರಿ ಜಗತಾಪ ವಿಶೇಷ ಉಪನ್ಯಾಸ ಮಂಡಿಸಿದರು.ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದನಕೇರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಇಸಿಓ ಮಲ್ಲಿಕಾರ್ಜುನ ಕನ್ನಾಳೆ, ಸಹದೇವ.ಜಿ, ತೋಟಗಾರಿಕೆ ಇಲಾಖೆ ಅಧಿಕಾರಿ ಮಾರುತಿ ಜಬನೂರ, ಕೃಷಿ ಅಧಿಕಾರಿ ಪಿ.ಮಲ್ಲಿಕಾರ್ಜುನ, ಸಿಪಿಐ ಅಮರೇಶ.ಬಿ ಉಪಸ್ಥಿತರಿದ್ದರು.ಇದೇ ವೇಳೇ ಶಿವಾಜಿ ಪ್ರೌಢಶಾಲೆ, ಸತ್ಯನಿಕೇತನ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಭಾಲ್ಕಿ, ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಮಲ್ಲಿಕಾರ್ಜುನ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರೆ ಚನ್ನಬಸಪ್ಪ ಹಳ್ಳದ ವಂದಿಸಿದರು.ಮಹಾತ್ಮರು ಯಾವುದೇ ಒಂದು ವ್ಯಕ್ತಿ ಜನಾಂಗಕ್ಕೆ ಸೀಮಿತವಲ್ಲ: ವಿಜಯಸಿಂಗ್‌ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ನಗರದಲ್ಲಿ ಶಿವಾಜಿ ಪಾರ್ಕ್ ಸಮಿತಿಯಿಂದ ಬುಧವಾರ ಏರ್ಪಡಿಸಿದ ಶಿವಾಜಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಪಾರ್ಕ್ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಹಣ ಮಂಜೂರಿಯಾಗಿದ್ದು, ಕೆಲಸವು ವೇಗಗತಿಯಿಂದ ನಡೆಯುತ್ತಿದ್ದು, ನಿಗದಿತ ಸಮಯದಲ್ಲಿ ಇದನ್ನು ಪೂರ್ಣಗೊಳಿಸಿ ಶೀಘ್ರವೇ ಉದ್ಘಾಟಿಸಲಾಗುವುದು.ಈ ಸ್ಮಾರಕಕ್ಕೆ ನನ್ನ ಸಹೋದರ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರು ಅನುದಾನ ಒದಗಿಸಿರುವುದರಿಂದ ಜಿಲ್ಲೆಯಲ್ಲಿ ಇದೊಂದು ಉತ್ತಮ ಸ್ಮಾರಕವಾಗಿ ರೂಪಗೊಳ್ಳಲಿದೆ. ಈ ಸ್ಮಾರಕ ಕೇವಲ ಮರಾಠಾ ಜನಾಂಗಕ್ಕೆ ಸಮೀತವಲ್ಲ ನಗರದ ಎಲ್ಲಾ ಜನತೆಯ ಸ್ಮಾರಕವಾಗಿದೆ. ಕಲಂ 371 (ಜೆ) ಜಾರಿಯಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಇದನ್ನು ಜಾರಿಗಾಗಿ ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಸೋನಿಯಾ ಗಾಂಧಿ, ರಾಹುಲಗಾಂಧಿ ಅವರಿಂದ ಜಾರಿಯಾಯಿತು. ಇದರಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬಿಜೆಪಿಯವರು ಕೇವಲ ಹೇಳುತ್ತಾರೆ ಕಾಂಗ್ರೆಸ್ ನವರು ಮಾಡಿ ತೋರಿಸುತ್ತಾರೆ ಎಂದರು.ಪ್ರಾಧ್ಯಾಪಕರಾದ ಡಾ.ಗಣೇಶ್ ಬೆಳಮಗೆ ಉದಗೀರ ಉಪನ್ಯಾಸಕರಾಗಿ ಮಾತನಾಡಿ ಶಿವಾಜಿ ಮಹಾರಾಜರು ಸುಮಾರು 340 ಕೋಟೆಗಳನ್ನು ವಶಪಡಿಸಿಕೊಂಡಿದ್ದರು, ಇವುಗಳ ಉದ್ಘಾಟನೆ ಪೂಜೆಯಲ್ಲಿ ಕಾಲ ಕಳೆಯದೆ ಇದನ್ನು ವಿಸ್ತಾರ ಮಾಡುತ್ತಾ ದೇಶದ ಉದ್ದಗಲಕ್ಕೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ಇವರು ಕೇವಲ ರಾಜನಾಗಿ ರದೆ ದೈವಭಕ್ತರಾಗಿದ್ದು, ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು. ಇವರ ಧೈರ್ಯದ ಹಿಂದೆ ತಾಯಿ ಜೀಜಾಮಾತಾ ಅವರ ಕಠಿಣ ಪರಿಶ್ರಮ ಇದೆ ಎಂದರು.ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಎಲ್ಲರೂ ಸೇರಿ ತಾಲೂಕಿನಲ್ಲಿ ಅಭಿವೃದ್ಧಿ ಮಾಡೋಣ ಎಲ್ಲದರಲ್ಲಿ ಮರಾಠಾ ಜನಾಂಗಕ್ಕೆ ಜಿಲ್ಲೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವಂತಾಗಲಿ ಎಂದರು.ವೇದಿಕೆಯಲ್ಲಿ ಅಂಗದರಾವ್ ಜಗತಾಪ, ವಿ.ಟಿ ಶಿಂಧೆ, ಓಂ ಪ್ರಕಾಶ್ ಪಾಟೀಲ್ ಜಾನಾಪೂರ, ದತ್ತಾತ್ರಿ ಧೂಳೆ, ಸಿಎಂಸಿ ಅಧ್ಯಕ್ಷ ಎಂಡಿ ಸಗೀರೋದ್ದೀನ್, ಎಂ.ಜಿ ರಾಜೋಳೆ, ವಿಕ್ರಂ ಪಾಟೀಲ್ ವಕೀಲರು, ರವೀಂದ್ರ ಬೋರಳೆ, ಮಹೇಶ್ ಪಾಟೀಲ್, ಡಿಕೆ ದಾವೂದ್, ಬಾಲಾಜಿ ಚಂಡಕಾಪುರೆ, ಪ್ರದೀಪ್ ವತಾಡೆ, ರವಿ ಗಾಯಕವಾಡ್, ತಾತ್ಯಾರಾವ ಪಾಟೀಲ್, ತಹಸಿನ್ ಅಲಿ ಜಮಾದಾರ್, ಮನೋಹರ್ ಮೈಸೆ, ಅರ್ಜುನ್ ಕನಕ್, ಆನಂದ್ ಪಾಟೀಲ್ ಕೊಹಿನೂರ್, ಸೇರಿದಂತೆ ಅನೇಕ ಮರಾಠಾ ಸಮಾಜದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.
ಕಮಲನಗರ: ಜಗತ್ತಿನಲ್ಲಿ ಹಲವಾರು ವೀರ ಶೂರ ಮಹಾರಾಜರುಗಳು ಆಗಿ ಹೋಗಿದ್ದಾರೆ ಅವರಲ್ಲಿ ಶಿವಾಜಿ ಮಹಾರಾಜರು ವಿಶ್ವಮಾನ್ಯ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆಂದು ಗ್ರೇಡ್-2 ತಹಸೀಲ್ದಾರ್ ರಮೇಶ್ ಪೆದ್ದೆ ಹೇಳಿದರು.