ಅಜೀಜಅಹ್ಮದ ಬಳಗಾನೂರ
ಬಿಆರ್‌ಟಿಎಸ್ ಅನುಷ್ಠಾನದಲ್ಲಿ ಕೆಲವೊಂದಿಷ್ಟು ಲೋಪದೋಷಗಳಾಗಿರಬಹುದು. ಹಾಗಂತ ಅದು ಉತ್ತಮ ಸೇವೆ ಸಲ್ಲಿಸುತ್ತಿಲ್ಲ ಎನ್ನುವುದು ಅಸಾಧ್ಯ. ಹಲವು ಪ್ರಯಾಣಿಕರಿಗೆ ಇಂದಿಗೂ ಚಿಗರಿ ಬಸ್ ನೆಚ್ಚಿನ ಪ್ರಯಾಣಕ್ಕೆ ಸಾಕ್ಷಿಯಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆ ತಂದು ಮುಂದುವರಿಸಿಕೊಂಡು ಹೋಗುವುದು ಒಳಿತು ಎಂದು ಬಹುತೇಕ ಪ್ರಯಾಣಿಕರು ಹೇಳುತ್ತಿದ್ದರೆ ಮತ್ತೆ ಬೆರಳೆಣಿಕೆ ಪ್ರಯಾಣಿಕರು ಬಿಆರ್‌ಟಿಎಸ್ ಬಸ್ ತೆಗೆದು ಲೈ ಟ್ರಾಮ್, ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ಆರಂಭಿಸಿದರೆ ಒಳಿತು ಎನ್ನುತ್ತಿದ್ದಾರೆ.
ಈ ಕುರಿತು ''''ಕನ್ನಡಪ್ರಭ'''' ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಪ್ರಯಾಣಿಕರು ಹಲವು ವಿಷಯಗಳನ್ನು ತಿಳಿಸಿದ್ದು, ಚಿಗರಿ ಬಸ್‌ಗಳಲ್ಲಿ ನಿತ್ಯವೂ ಸಂಚರಿಸುವ ಪ್ರಯಾಣಿಕರಿಗೆ ಬಿಆರ್‌ಟಿಎಸ್ ಮೇಲಿರುವ ಆಸಕ್ತಿ, ನಿರಾಸಕ್ತಿ ಕುರಿತು ಇಂದು ಬೆಳಕು ಚೆಲ್ಲಲಿದೆ.ಬಿಆರ್‌ಟಿಎಸ್ ಅವಳಿ ನಗರದ ಜನರಿಗೆ ಎಷ್ಟು ಅನುಕೂಲವಿದೆಯೋ ಅಷ್ಟೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿಂತೂ ಬಿಆರ್‌ಟಿಎಸ್ ಕಾರಿಡಾರ್ ಅಕ್ಷರಶಃ ಕೆರೆಯಂತಾಗುತ್ತದೆ. ಬಿಆರ್‌ಟಿಎಸ್ ಬದಲಾಗಿ ಲೈಟ್ರಾಮ್ ಜಾರಿಗೊಳಿಸಿದರೆ ಉತ್ತಮ.ಮಲ್ಲಿಕಾರ್ಜುನ ಶಿವಳ್ಳಿ, ಸುಳ್ಳರವಿ ಶಂಕರ, ನವನಗರ ವಿದ್ಯಾರ್ಥಿಲೈ ಟ್ರಾಮ್ ಆರಂಭಿಸಬೇಕಾದರೆ ಈಗಿರುವ ಬಿಆರ್‌ಟಿಎಸ್ ಕಾರಿಡಾರ್ ತೆಗೆದು 4-5 ವರ್ಷಗಳ ಕಾಮಗಾರಿ ಕೈಗೊಳ್ಳಬೇಕು. ಇದರಿಂದ ಪ್ರಯಾಣಿಕರಿಗೆ ಮತ್ತೆ ತೊಂದರೆ ಅನುಭವಿಸಲಿದ್ದಾರೆ. ಲೈ ಟ್ರಾಮ್‌ಗಿಂತಲೂ ಬಿಆರ್‌ಟಿಎಸ್ ಯೋಜನೆಯೇ ಚೆನ್ನಾಗಿದೆ.
ಪ್ರಣವ್, ಐಐಐಟಿ ವಿದ್ಯಾರ್ಥಿ, ಪುಣೆ
ಬಿಆರ್‌ಟಿಎಸ್ ಬಸ್‌ಗಳು ನಿರ್ವಹಣೆ ಕೊರತೆ ಎದುರಿಸುತ್ತಿರುವುದು ನಿಜ. ಇದೇ ನೆಪದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಆರಂಭಿಸಲಾಗಿರುವ ಯೋಜನೆ ಬಂದ್ ಮಾಡುವುದು ಸರಿಯಲ್ಲ. ಇದೇ ಚಿಗರಿ ಬಸ್ ಸಂಚಾರ ಮುಂದುವರಿಯಲಿ.
ಚಿನ್ಮಯ, ಎಂಬಿಎ ವಿದ್ಯಾರ್ಥಿ