ಗದಗ: ಮಕ್ಕಳಿಲ್ಲದ ದಂಪತಿಗಳ ಕೊರಗು ಬಹುನೋವಿನ ಸಂಗತಿಯಾಗಿದ್ದು, ಇಂತಹ ದಂಪತಿಗಳ ಮಡಿಲಿಗೆ ದತ್ತು ಮಗು ಹಸ್ತಾಂತರಿಸುವುದು ಅವಿಸ್ಮರಣೀಯ ಸಂಗತಿಯಾಗಿದೆ ಎಂದು ಗುತ್ತಿಗೆದಾರ ಆಶಿಶ್ ತೋಸ್ನಿವಾಲ ಹೇಳಿದರು.
ಮನ ಮಿಡಿಯುವ, ಮನ ಕಲಕುವ ಸನ್ನಿವೇಶ ಇದಾಗಿದ್ದು, ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಮಗು ನೀಡುವದು ಪುಣ್ಯದ ಕೆಲಸವಾಗಿದೆ. ಪಾಲಕ ಪೋಷಕರಿಲ್ಲದ ಮಗುವಿಗೆ ಭವಿಷ್ಯ ರೂಪಿಸುವ ಹಾಗೂ ಮಕ್ಕಳಿಲ್ಲದ ಕೊರಗಿನಲ್ಲಿದ್ದ ದಂಪತಿ ಸಂತೃಪ್ತ ಭಾವನೆ ಹೊಂದುವದು ವರ್ಣಿಸಲು ಆಗದ್ದು, ಇದರಿಂದ ದಂಪತಿಗಳಿಗೆ ಹಾಗೂ ಮಗುವಿಗೆ ಸಂತೃಪ್ತ ಭಾವನೆ ಮೂಡಲು ಸಾಧ್ಯ. ದತ್ತು ಪಡೆದವರು ಮಗುವಿಗೆ ಉನ್ನತ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ನೀಡಿ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
ಮೇಘಾ ತೋಸ್ನಿವಾಲ ಮಾತನಾಡಿ, ಪರಿತ್ಯಕ್ತ ಮಕ್ಕಳಿಗೆ ಪೋಷಕರನ್ನು ಹಾಗೂ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಮಗು ನೀಡಲು ಸಂಪರ್ಕ ಕೊಂಡಿಯಾಗಿ ಕಾರ್ಯ ಮಾಡುವ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯ ಶ್ಲ್ಯಾಘನೀಯ ಎಂದರು.ವ್ಯಾಪಾರಸ್ಥ ನವೀನ ಅಕ್ಕಿ ಮಾತನಾಡಿ, ಗದಗ ಪರಿಸರದಲ್ಲಿ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಉತ್ತಮ ಮಾನವೀಯ- ಸಾಮಾಜಿಕ ಕಾರ್ಯ ಮಾಡುತ್ತಿರುವದು ಶ್ಲ್ಯಾಘನೀಯ ಎಂದರು.
ಆಶಿಶ್ ಹಾಗೂ ಮೇಘಾ ದಂಪತಿಗಳು ರಾಣೆಬೆನ್ನೂರಿನ ರುದ್ರಪ್ಪ ಹಾಗೂ ಲತಾ ದಂಪತಿಗಳಿಗೆ ಮಗು ಹಸ್ತಾಂತರಿಸಿ ಮಗುವಿನ ಭವಿಷ್ಯಕ್ಕೆ ಶುಭ ಕೋರಿದರು.
ಮಂಜುನಾಥ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ರಾಜಪುರೋಹಿತ ನಿರೂಪಿಸಿದರು, ನಾಗವೇಣಿ ಕಟ್ಟಿಮನಿ ಪ್ರಾರ್ಥಿಸಿ ವಂದಿಸಿದರು. ಸಮಾರಂಭದಲ್ಲಿ ಲಲಿತಾಬಾಯಿ ಮೇಹರವಾಡೆ, ರಾಜೇಶ ಖಟವಟೆ, ಗುರುಸಿದ್ಧಪ್ಪ ಕೊಣ್ಣೂರ, ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಮುಂತಾದವರು ಹಾಜರಿದ್ದರು.