ರಬಕವಿ-ಬನಹಟ್ಟಿ:
ಇಲ್ಲಿನ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ರಸ್ತೆಯಲ್ಲಿರುವ ವಿನಾಯಕ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಎಸ್.ಎಸ್.ಕಲ್ಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿವೆ. ಇದರಿಂದ ಮಕ್ಕಳಲ್ಲಿ ಮತ್ತಷ್ಟು ಹೊಸ ಚೈತನ್ಯ ಮೂಡುತ್ತದೆ ಎಂದು ಹೇಳಿದರು.
ಸಿಆರ್‌ಪಿಗಳಾದ ಎ.ಆರ್. ಮುಧೋಳ, ಬಿ.ಎಂ.ಯಲ್ಲಟ್ಟಿ, ಶೈಕ್ಷಣಕ ಪ್ರಗತಿ ಹಾಗೂ ಕಲಿಕಾ ಇಲಾಖೆಯ ಯೋಜನೆಗಳ ಕುರಿತು ಮಾತನಾಡಿದರು. ಎಂ.ಎಸ್. ಗೌಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ನಿಂಗಪ್ಪಣ್ಣ ಮಾಲಗಾಂವಿ, ಅಶೋಕ ಸಿದ್ದಾಪುರ, ಜ್ಯೋತಿ ಗೌಡಪ್ಪನವರ, ಶಂಕರ ದೊಡ್ಡಶಿವಣ್ಣವರ, ಅಶೋಕ ಗೌಡಪ್ಪನವರ, ಆರ್.ಎಲ್. ಪೆಂಡಾರಿ, ಬಿ.ಬಿ. ನೀಡೋನಿ, ಪಿ.ಬಿ. ಜಲಪೂರ, ಎಸ್.ಎಸ್. ಸರಗುಂದಿ, ಸಿ.ವೈ. ರಾಯಣ್ಣವರ ಮತ್ತಿತರಿದ್ದರು.