ಮುಳಗುಂದ: ಮಕ್ಕಳು ದೇಶದ ಸಂಪತ್ತು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೋಲಿಯೋ ಹನಿ ತಪ್ಪದೆ ಹಾಕಿಸಬೇಕು ಎಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ ತುಪ್ಪದ ತಿಳಿಸಿದರು.ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ. 1ರಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳೆ ಭವಿಷ್ಯದ ಉತ್ತಮ ಪ್ರಜೆಗಳು. ಮಕ್ಕಳ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಯಾವುದೇ ಆತಂಕ ಪಡದೇ ಪೋಷಕರು ತಪ್ಪದೆ ಪೋಲಿಯೋ ಎರಡು ಹನಿಯನ್ನು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹಾಕಿಸಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಎಂದರು.ನಿವೃತ್ತ ಆರ್‌ಟಿಒ ಬಿ.ಡಿ. ಹರ್ತಿ ಮಾತನಾಡಿ, ಪೋಲಿಯೋ ಮಾರಕ ಕಾಯಿಲೆ. ಈ ಕಾಯಿಲೆ ಹೋಗಲಾಡಿಸಲು ಲಸಿಕೆಯನ್ನು ಪ್ರತಿಯೊಬ್ಬ ಮಕ್ಕಳಿಗೆ ಹಾಕಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಸಹಕರಿಸಬೇಕು ಎಂದರು.ಈ ವೇಳೆ ಡಾ. ಎಸ್.ಸಿ. ಚವಡಿ, ಎಸ್.ಸಿ. ಬಡ್ನಿ, ಅಂಗನವಾಡಿ ಶಿಕ್ಷಕಿ ಎಂ.ಎಂ. ಅಬ್ಬುನವರ, ರೇಣುಕಾ ಯಲಿಗಾರ, ನಜೀರ ನದಾಫ್, ಶಿವಾನಂದ ಅಪ್ತಗೇರಿ, ಮುತ್ತು ಬಳ್ಳಾರಿ, ಸುಮಿತ್ರಾ ಹೊಂಬಳ, ಮಂಜುನಾಥ ದೇಸಾಯಿ, ಕಲ್ಲಪ್ಪ ಚಿನ್ನಿ, ಎಚ್.ಎನ್. ಗದಗ, ಮುನೀರ್ ನದ್ದಿಮುಲ್ಲಾ ಸೇರಿದಂತೆ ಇತರರು ಇದ್ದರು.
ಬೆಟಗೇರಿಯ ತಿಪ್ಪಣಸಾ ಅರವಟಗಿ ಎಂಬವರ ಕಿರಾಣಿ ಅಂಗಡಿಗೆ ಬೆಂಕಿ ತಗುಲಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ನಷ್ಟವಾದ ವಸ್ತುಗಳ ನಿಖರ ಮೌಲ್ಯ ತಿಳಿದುಬಂದಿಲ್ಲ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.